ಮುಳುಗಿದ ಮನೆಗಳು; ರಕ್ಷಣೆಗೆ ಮಹಡಿ ಹತ್ತಿ ಕುಳಿತರು

Team Udayavani, Aug 11, 2019, 6:17 AM IST

mulugida

ಗೋಣಿಕೊಪ್ಪಲು: ದಿನಗಳಿಂದ ಸುರಿದ ಧಾರಾಕಾರವಾಗಿ ಮಳೆಗೆ ಗೋಣಿಕೊಪ್ಪಲು ಪಟ್ಟಣ ಮುಳುಗಿ ಹೋಗಿದೆ. ಮುಖ್ಯ ರಸ್ತೆಯನ್ನು ಬಿಟ್ಟರೆ ಉಳಿದಂತೆ ಯಾವ ಮನೆಗಳು ನೀರಿನಿಂದ ಮುಕ್ತವಾಗಿಲ್ಲ.ಗುರುವಾರ ಸುರಿದ ಭಾರಿ ಮಳೆಗೆ ಶುಕ್ರವಾರ ಮತ್ತಷ್ಟು ಮನೆಗಳು ಮುಳುಗಡೆಯಾದವು.

ಪಟ್ಟಣದ ನೇತಾಜಿ ಬಡಾವಣೆ, 3ನೇ ಬಡಾವಣೆ, ಅಚ್ಚಪ್ಪ ಲೇಔಟ್,ಪಟೇಲ್ ನಗರ, ಬಸ್‌ ನಿಲ್ದಾಣದ ಕೆಳಗಿನ ಬೈಪಾಸ್‌ ರಸ್ತೆಯ ಮನೆಗಳು ಸಂಪೂರ್ಣ ಜಲಾವೃತಗೊಂಡವು. ಶುಕ್ರವಾರ ಮುಂಜಾನೆ ವೇಳೆಗೆ ಧಾರಾಕಾರ ಮಳೆ ಸುರಿಯಿತು. ತೊರೆ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಯಿತು. ಜನತೆ ನಸುಕಿನಲ್ಲಿ ಕಣ್ಣಿಜ್ಜಿಕೊಂಡು ಏಳುವಷ್ಟರಲ್ಲಿ ಮನೆಗಳ ಒಳಗೆ ನೀರು ತುಂಬಿಕೊಂಡಿತು. ಜನರ ಆಹಾಕಾರ ಹೆಚ್ಚಿ ಒಂದೇ ಸಮನೆ ಕಿರುಚಿಕೊಳ್ಳತೊಡಗಿದರು. ಅಷ್ಟರಲ್ಲಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ಆಗಮಿಸಿ ರಕ್ಷಣೆ ಒದಗಿಸಿದರು.

ಕೆಲವರು ನೆಲಮಾಳಿಗೆಗೆ ತುಂಬಿದ ನೀರಿನಿಂದ ರಕ್ಷಣೆ ಪಡೆದುಕೊಳ್ಳಲು ಕೆಲವು ಕುಟುಂಬಗಳು ಮಹಡಿ ಮನೆ ಏರಿ ಕುಳಿತಿದ್ದವು. ಆದರೆ ನೀರಿನ ಪ್ರಮಾಣ ಏರುತ್ತಿದ್ದಂತೆ ಹೊರಬರಲಾರದೆ ಊಟಕ್ಕೆ ತೊಂದರೆ ಯಾಗಿ ಜನತೆ ಗೋಳಿಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಪ್ಪತ್ತು ರಕ್ಷಣಾಪಡೆಯವರು ಮನೆಗಳಿಗೆ ಧಾವಿಸಿ ಮಹಡಿಯಲ್ಲಿದ್ದವರನ್ನು ಹೊರಗೆ ತಂದು ರಕ್ಷಿಸಿದರು.

ಭಾರಿ ಪ್ರವಾಹಕ್ಕೆ ಒಳಗಾಗಿದ್ದ 7 ಬಡಾವಣೆಯ ನಿವಾಸಿಗಳ ಸ್ಥಿತಿ ಚಿಂತಾಜನಕ ವಾಗಿತ್ತು. ಅವರನ್ನೂ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ವಿಪ್ಪತ್ತು ರಕ್ಷಣಾ ಪಡೆಯವರು ರಕ್ಷಿಸಿದರು.

ಮನೆಗೆ ನೀರು ಆವರಿಸಿಕೊಂಡ ಕೂಡಲೆ ಕೆಲವರು ಮನೆಯಲ್ಲಿನ ಬೆಕ್ಕು, ಶ್ವಾನಗಳನ್ನು ಬಿಟ್ಟು ರಕ್ಷಣಾ ಸ್ಥಳಕ್ಕೆ ಓಡಿ ಬಂದಿದ್ದರು. ಅಂತಹ ಮನೆಗಳಲ್ಲಿ ಪ್ರಾಣಿಗಳು ಗೋಳಿಡುತ್ತಿದ್ದವು. ಇವುಗನ್ನು ಬೋಟಿನ ಮೂಲಕ ತೆರಳಿ ರಕ್ಷಿಸಲಾಯಿತು. ಕೆಲವು ಮನೆಗಳ ಮುಂಭಾಗದಲ್ಲಿ ನಿಂತಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದವು.

ಬಸ್‌ ನಿಲ್ದಾಣದಿಂದ ಅರುವತ್ತೂಕ್ಕಲು ಕಡಗೆ ತೆರಳುವ ಬೈಪಾಸ್‌ ರಸ್ತೆ ತೋಡಿನ ಸೇತುವೆ ಮೇಲೆ ಧಾರಾಕಾರ ನೀರು ಹರಿಯಲಾರಂಬಿಸಿತು. ನೀರಿನ ರಭಸಕ್ಕೆ ತೋಡಿನ ಸೇತುವೆಯ ತಡೆಗೋಡೆ ಕುಸಿಯಿತು. ತೋಡಿಗೆ ಎಡ ಬಲದಲ್ಲಿ ನಿರ್ಮಿಸಿದ್ದ ತಡೆಗೋಡೆಗಳು ದಡದಡ ಉರುಳಿದವು.

ಮಳೆ ಪ್ರಮಾಣ ಹೆಚ್ಚಿ ನೀರಿನ ಪ್ರವಾಹ ಅತಿಯಾಗುತ್ತಿದ್ದಂತೆ ಪೊಲೀಸರು ಎಲ್ಲ ಬಡಾವಣೆಗಳಿಗೆ ತೆರಳಿ ಮನೆಯನ್ನು ಖಾಲಿಮಾಡುವಂತೆ ಸೂಚಿಸಿದರು. ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ನೂರಾರು ಸಂತ್ರಸ್ತರನ್ನು ಕಳಿಸಿದರು. ಇದೀಗ ಕೆಲವರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳದ ತಮ್ಮ ಸಂಬಧಿಕರ ಮನೆಗೆ ತೆರಳಿದ್ದರೆ ಮತ್ತೆ ಕೆಲವರು ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ. ಇದೀಗ ಕೇಂದ್ರದಲ್ಲಿ 250 ಕ್ಕೂ ಹೆಚ್ಚಿನ ಮಂದಿ ಆಶ್ರಯ ಪಡೆದಿದ್ದಾರೆ. ಪಾಲಿಬೆಟ್ಟ, ಪೊನ್ನಂಪೇಟೆ, ಅಮ್ಮತ್ತಿ ಮಾರ್ಗದ ಎಲ್ಲ ರಸ್ತೆಗಳೂ ನೀರಿನಲ್ಲಿ ಮುಳಗಿವೆ. ವಿರಾಜಪೇಟೆ, ಮೈಸೂರು ಮಾರ್ಗದ ಸಾರಿಗೆ ಬಸ್‌ಗಳನ್ನು ಬಿಟ್ಟರೆ ಉಳಿದ ಮಾರ್ಗದ ಎಲ್ಲ ವಾಹನಗಳು ಸಂಚಾರ ಸ್ಥಗಿತಗೊಳಿಸಿವೆ. ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕೈಕೇರಿ ಭಾಗದ 4 ಕೆರೆಗಳು ಒಡೆದುದರ ಪರಿಣಾಮ ಗೋಣಿಕೊಪ್ಪಲಿನ ಬೈಪಾಸ್‌ ತೋಡಿನ ಪ್ರವಾಹ ಹೆಚ್ಚಲು ಕಾರಣವಾಯಿತು. ಇಲ್ಲಿನ ಕಾಲ್ಸ್ ಶಾಲೆಯ ಒಳಗೂ ನೀರು ನುಗ್ಗಿ ಅಲ್ಲಿನ ವಸತಿ ನಿಲಯಕ್ಕೆ ತೀವ್ರ ಹಾನಿಯಾಗಿದೆ. ಗೋಣಿಕೊಪ್ಪಲು ಪಟ್ಟಣದಲ್ಲಿ ಕೆಲವು ಖಾಸಗಿಯವರು ಕೀರೆಹೊಳೆ ದಡಕ್ಕೆ ನಿರ್ಮಿಸಿಕೊಂಡಿದ್ದ ತಡೆಗೋಡೆಗಳು ಕುಸಿದು ನೀರು ಪಾಲಾಗಿವೆ.

ವಿದ್ಯುತ್‌ ಕಡಿತ : ಪಟ್ಟಣಕ್ಕೆ ಗುರುವಾರ ರಾತ್ರಿ ಕೆಲ ಹೊತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು. ಬಳಿಕ ಕಡಿತಗೊಂಡು ಮತ್ತೆ ಪಟ್ಟಣ ಕತ್ತಲಲ್ಲಿ ಮುಳುಗುವಂತಾಗಿದೆ.

ಪಟ್ಟಣದ ವರ್ತಕರ ಬಹುಪಾಲು ಮನೆಗಳು ಜಲಾವೃತಗೊಂಡಿರುವುದರಿಂದ ಪಟ್ಟಣದಲ್ಲಿ ಶೇ.90 ರಷ್ಟು ಅಂಗಡಿ ಮಳಿಗೆಗಳು ಬೆಳಗಿನಿಂದಲೇ ತೆರೆದಿರಲಿಲ್ಲ. ನೀರಿನಲ್ಲಿ ಮುಳುಗಿದ್ದ ಗೋಣಿಕೊಪ್ಪಲು ಪಟ್ಟಣದ ಪ್ರವಾಹವನ್ನು ವೀಕ್ಷಿಸಲು ಸುರಕ್ಷಿತ ಸ್ಥಳದಲ್ಲಿದ್ದ ಜನರು ದಸರಾ ಉತ್ಸವಕ್ಕೆ ಬರುವಂತೆ ಸಾಲುಗಟ್ಟಿ ಬಂದು ವೀಕ್ಷಿಸುತ್ತಿದ್ದುದು ಕಂಡು ಬಂದಿತು. ಸಂತ್ರಸ್ತ ಕೇಂದ್ರದಲ್ಲಿ ಇದೀಗ 250 ಜನರು ಆಶ್ರಯ ಪಡೆದಿದ್ದಾರೆ.

ಪೊನ್ನಂಪೇಟೆ ಕುಂದ ರಸ್ತೆ ಸಂಪರ್ಕ ಕಡಿತಗೊಂಡು ನಿನಾದ ಶಾಲೆ ಸಮೀಪದ ರಸ್ತೆ ಮುಳುಗಡೆಯಾಗಿದೆ. ವಾಹ ಸಂಚಾರಕ್ಕೆ ಪರ್ಯಾಯ ರಸ್ತೆಯಾದ ಜೋಡುಬೀಟಿ ಭದ್ರಕಾಳಿ ದೇವಸ್ಥಾನ ರಸ್ತೆಯೂ ಕೂಡ ನೀರಿನಲ್ಲಿ ಮುಳುಗಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.

ಮನೆ ಮೇಲೆ ಮರಬಿದ್ದುಹಾನಿ: ತಿತಿಮತಿ ಸಮೀಪದ ಜಂಗಲ್ ಹಾಡಿ ತಿಮ್ಮ ಅವರ ಮನೆ ಮೇಲೆ ಭಾರಿ ಗಾತ್ರದ ಮರಬಿದ್ದು ಮನೆ ಸಂಪೂರ¡ವಾಗಿ ಜಖಂಗೊಂಡಿದೆ. ಮರಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣ ಹಾನಿಯಾಗಿಲ್ಲ. ಮನೆ ಹಾನಿ ಸಂತ್ರಸ್ತರಿಗೆ ತಿತಿಮತಿಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಸರೆ ಒದಗಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ,ಆರ್‌. ಪಂಕಜಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್‌, ಸದಸ್ಯ ಎನ್‌.ಎನ್‌.ಅನೂಪ್‌ ಪಿಡಿಒ ಮಮತಾ ಭೇಟಿ ನೀಡಿ ಪರಿಶೀಲಿಸಿದರು.

ಇತ್ತ ಬಾಳೆಲೆಯ ಗಂಧದಗುಡಿ ಕಾಲೊನಿಯಲ್ಲಿಯೂ ತೀವ್ರ ಮಳೆಗೆ 4 ಮನೆಗಳು ಕಸಿದು ತೀವ್ರ ಹಾನಿಯಾಗಿದೆ. ಇದರಿಂದ 25ಕ್ಕೂ ಹೆಚ್ಚು ಜನರು ಸ್ಥಳಿರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ದೇವನೂರು ಗ್ರಾಮದ ತೀತಮಾಡ ಮಾದಯ್ಯ ಎಂಬವರ ಮಣೆ ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ತುತ್ತಾಗಿದೆ. ಈ ಭಾಗದ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು ನಿಟ್ಟೂರು ಬಾಳೆಲೆ ನಡುವಿನ ಸೇತುವೆ ನೀರಿನಲ್ಲಿ ಮುಳುಗಿದೆ.

ಚೆನ್ನಂಗೊಲ್ಲಿಯ ಕೆರೆಗಳು ಒಡದು ಇದರ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಅಲ್ಲಿನ 9 ಮನೆಗಳು ನೆಲಸಮವಾಗಿವೆ. ಮನೆಗಳನ್ನು ಕಳೆದುಕೊಂಡ ಜನತೆ ಇದೀಗ ನಿರ್ಗತಿಗಕರಾಗಿದ್ದು ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಬೀದಿಪಾಲಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್‌ ಪುರಂದರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ನಿರಾ]ತರಿಗೆ ಸಂತ್ರಸ್ತ ಕೇಂದ್ರಗಳಲ್ಲಿ ಆಸರೆ ನೀಡಿದ್ದಾರೆ.

ಮಾಯಮುಡಿಯಲ್ಲಿಯೂ ಆಪಟ್ಟೀರ ಸುಬ್ಬಯ್ಯ, ಆಪಟ್ಟೀರ ಬೋಪಣ್ಣ ಅವರಿಗೆ ಸೇರಿದ ಕೆರೆಗಳು ಒಡೆದು ಮಡಿಕೆಬೀಡಿನ ಮನೆಗಳಿಗೆ ನೀರು ನುಗ್ಗಿ ತೀವ್ರ ಹಾನಿಯಾಗಿದೆ. ಕೆರೆಯ ನೀರಿ ಮಡಿಕೆ ಬೀಡಿನ ರಾಜಕಾಲುವೆಗೆ ನುಗ್ಗಿ ಪರಿಶಿಷ್ಟ ಜನಾಂಗದ ಕಾಲೊನಿಯ 9 ಮನೆಗಳು ಕುಸಿದಿವೆ. ನೀರು ಕಾಇ ತೋಟ ಮತ್ತು ಗದ್ದೆಗಳಿಗೆ ನುಗ್ಗಿ ತೀವ್ರ ಹಾನಿಯಾಗಿದೆ. ಕಾಫಿ ತೋಟ ಕೊಚ್ಚಿ ಹೋಗಿದ್ದರೆ, ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆಪಟ್ಟೀರ ಟಾಟುಮೊಣ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್‌.ಪೃಥ್ಯು ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.