Udayavni Special

ಜೀತ-ಮಲ ಹೊರುವ ಪದ್ಧತಿ ಸಮಾಜಕ್ಕೆ ಕಳಂಕ


Team Udayavani, Feb 10, 2021, 3:16 PM IST

ಜೀತ-ಮಲ ಹೊರುವ ಪದ್ಧತಿ ಸಮಾಜಕ್ಕೆ ಕಳಂಕ

ಕೋಲಾರ: ಜೀತ ಪದ್ಧತಿ ಹಾಗೂ ಮ್ಯಾನುಯಲ್‌ ಸ್ಕ್ಯಾವೆಂಜರ್‌ ಪದ್ಧತಿಗಳು ಕಾನೂನುಬಾಹಿರ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾ ಗಿದೆ. ಪ್ರತಿ ವ್ಯಕ್ತಿಯು ಗೌರವಯುತವಾದ ಕೆಲಸ ಮಾಡಿ ಬದುಕಲು ಸಂವಿಧಾನ ಅವಕಾಶ ಕಲ್ಪಿಸಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ತಿಳಿಸಿದರು.

ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಮ್ಯಾನುಯಲ್‌ ಸ್ಕ್ಯಾವೆಂಜರ್‌ ನೇಮಕಾತಿ ನಿಷೇಧ ಮತ್ತು ಪುನರ್‌ ವಸತಿ ಜಾಗೃತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಂಡ, ಶಿಕ್ಷೆ: ಜೀತದಾಳು ಪದ್ಧತಿ ಹಾಗೂ ಮಾನ್ಯುಯಲ್‌ ಸ್ಕ್ಯಾವೆಂಜರ್‌ ಪದ್ಧತಿಗಳನ್ನು ನಿರ್ಮೂಲನೆ ಮಾಡಲು 1993 ರಲ್ಲಿ ಕಾನೂನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ನೇಮಕಾತಿ ಮಾಡಿಕೊಂಡರೆ 1 ವರ್ಷ ಜೈಲು ಮತ್ತು 50 ಸಾವಿರ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ. ಎರಡನೇ ಬಾರಿ ಉಲ್ಲಂಘನೆ ಮಾಡಿದರೆ 2 ವರ್ಷ ಜೈಲು ಮತ್ತು 1 ಲಕ್ಷ ದಂಡ ಅಥವಾ ಎರಡನ್ನು ವಿಧಿ ಸಬಹುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಎನ್‌.ಎಂ.ನಾಗರಾಜ್‌ ಮಾತನಾಡಿ, ಸಮಾಜದ ಕಟ್ಟ ಕಡೆಯ ಅಂಚಿನಲ್ಲಿರುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವತ್ಛತೆ ಕಾರ್ಯ ಜೀವನಕ್ಕೆ ಅನಿವಾರ್ಯವಾಗಿದೆ. ಇದರಿಂದ ಸರ್ಕಾರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ ಎಂದರು.

110 ಎಕರೆ ಮಿಸಲು: ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, 2012-13 ರಲ್ಲಿ 148 ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಗಳಿಗೆ ತಲಾ 40 ಸಾವಿರ ರೂ.ಗಳನ್ನು ನೀಡಲಾಗಿದೆ. ಜಿಲ್ಲೆಯದ್ಯಾಂತ ಪ್ರಸ್ತುತ 411 ಮ್ಯಾನ್ಯು ಯಲ್‌ ಸ್ಕ್ಯಾವೆಂಜರ್‌ಗಳಿದ್ದು, ಇವರಿಗೆ ಜಾಗೃತಿ ಶಿಬಿರ ನಡೆಸಲಾಗುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಲ್ಲಿ 10 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶ ದಲ್ಲಿ ವಸತಿ ಇಲ್ಲದವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅಂಬೇಡ್ಕರ್‌ಅಭಿವೃದ್ಧಿ ನಿಗಮ, ದೇವರಾಜ್‌ ಅರಸು ಅಭಿವೃದ್ಧಿ ನಿಗಮದ ಯೋಜನೆಯಡಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಜಿಲ್ಲೆಯಲ್ಲಿ 110 ಎಕರೆ ಪ್ರದೇಶ ಮೀಸಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜಣ್ಣ ಮಾತನಾಡಿದರು.ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ರಾದ ಪಿಚ್ಚಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದೇಶಕ ರಾದ ಬಾಲಾಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

pentagon

ಪೆಂಟಗನ್‌ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷಾತೀತವಾಗಿ ಬೆಮೆಲ್‌ ಉಳಿಸಲು ಹೋರಾಟ

ಪಕ್ಷಾತೀತವಾಗಿ ಬೆಮೆಲ್‌ ಉಳಿಸಲು ಹೋರಾಟ

ಕಾಡಾನೆ ಹಾವಳಿ ತಡೆಗೆ ಕ್ರಮ

ಕಾಡಾನೆ ಹಾವಳಿ ತಡೆಗೆ ಕ್ರಮ

ಕುಡಿವ ನೀರು ಕಲ್ಪಿಸಲು ಆದ್ಯತೆ

ಕುಡಿವ ನೀರು ಕಲ್ಪಿಸಲು ಆದ್ಯತೆ

ತಾಪಂ ಬೇಕೆ ಬೇಡವೇ? ಶಾಸಕರು ಹೇಳುವುದೇನು?

ತಾಪಂ ಬೇಕೆ ಬೇಡವೇ? ಶಾಸಕರು ಹೇಳುವುದೇನು?

ಚಿನ್ನದ ಗಣಿ ಮುಚ್ಚಿ ಇಂದಿಗೆ 21 ವರ್ಷ

ಚಿನ್ನದ ಗಣಿ ಮುಚ್ಚಿ ಇಂದಿಗೆ 21 ವರ್ಷ

MUST WATCH

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

ಹೊಸ ಸೇರ್ಪಡೆ

MLA Aravind bellad visit IIIT

ಐಐಐಟಿ ನೂತನ ಕಟ್ಟಡ 2 ತಿಂಗಳಲ್ಲಿ ಪೂರ್ಣ: ಬೆಲ್ಲದ

BRTS

ಬಿಆರ್‌ಟಿಎಸ್‌ ರಸ್ತೆ ಫ‌ುಟ್‌ಪಾತ್‌ ಒತ್ತುವರಿ ತೆರವು

degree Collage

ಪಾಠ ಮಾಡದೇ ಪರೀಕ್ಷೆಗೆ ಸಜ್ಜಾದ ರಾವಿವಿ!

Road

ರಸ್ತೆ ಅಗಲೀಕರಣಕ್ಕೆ ಗಿಡಗಳು ಅಡ್ಡಿ

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.