Udayavni Special

ಬಳಕೆ ಮಾಡದೇ ಪಾಳು ಬಿದ್ದ ಪೊಲೀಸ್‌ ವಸತಿ ಗೃಹ

ಬೆಸ್ಕಾಂ ಟ್ರಾನ್ಸ್‌ಫಾರ್ಮರ್‌ ಹಾಕಿದ್ರೂ ಕೇಳಿಲ್ಲ, ಕಸದ ರಾಶಿಯಿಂದ ಅಶುಚಿತ್ವದ ತಾಣವಾದ ಕಟ್ಟಡ

Team Udayavani, Jul 23, 2019, 1:41 PM IST

kolar-tdy-2

ಕೆಜಿಎಫ್: ನಗರದ ರಾಬರ್ಟಸನ್‌ಪೇಟೆಯ ಹೃದಯ ಭಾಗದಲ್ಲಿರುವ ಪೊಲೀಸ್‌ ಕ್ವಾರ್ಟಸ್‌ ( ಸಬ್‌ ಇನ್ಸ್‌ಪೆಕ್ಟರ್‌) ಸಮರ್ಪಕ ನಿರ್ವಹಣೆ ಇಲ್ಲದೆ, ಪಾಳು ಬಿದ್ದಿದೆ.

ಎಂಟು ವರ್ಷಗಳಿಂದ ಯಾರೂ ಇಲ್ಲಿ ವಾಸ ಮಾಡದ ಪ್ರಯುಕ್ತ ಈ ಕಟ್ಟಡ ಈಗ ಕಾರು, ಬೈಕ್‌ಗಳ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಾಟಾಗಿದೆ. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳು ಕಸವನ್ನೂ ಇಲ್ಲಿ ಹಾಕಿದ್ದು, ಈ ರಾಶಿ ಬಿದ್ದಿದ್ದು, ಯಾರೂ ಸ್ವಚ್ಛ ಮಾಡದ ಕಾರಣ ಕಸ ವಿಲೇವಾರಿ ಘಟಕವಾಗಿಯೂ ಪರಿವರ್ತನೆಯಾಗಿದೆ.

ಈ ಹಿಂದೆ ಪುಟ್ಟಮಾದಯ್ಯ ಎಂಬ ಇನ್ಸ್‌ಪೆಕ್ಟರ್‌ ಇದೇ ಮನೆಯಲ್ಲಿ ಹತ್ತು ವರ್ಷ ವಾಸವಾಗಿದ್ದರು. ನಂತರ ಅವರು ಡಿವೈಎಸ್ಪಿಯಾಗಿ ಪದೋನ್ನತಿ ಪಡೆದು ಕೊಳ್ಳೆಗಾಲಕ್ಕೆ ವರ್ಗಾವಣೆಯಾದ ನಂತರ ಈ ಮನೆ ಪಾಳು ಬಿದ್ದಿದೆ. ಮೊದಲು ಪೊಲೀಸರು ಬಟ್ಟೆ ಬದಲಾಯಿಸಿಕೊಳ್ಳಲು ಉಪಯೋಗಿಸುತ್ತಿದ್ದ ಈ ಮನೆ, ನಂತರದ ದಿನಗಳಲ್ಲಿ ಯಾರೂ ಬಾರದ ಕಟ್ಟಡವಾಗಿ ಪರಿವರ್ತಿತವಾಗಿದೆ.

ಪಾರ್ಕಿಂಗ್‌ ಜಾಗ: ಇಂದು ಕಟ್ಟಡದ ಸುತ್ತಲೂ ಖಾಲಿ ಮದ್ಯದ ಬಾಟಲಿಗಳು, ಇಸ್ಪೀಟ್ ಎಲೆಗಳು ಮುಂತಾದವುಗಳು ರಾಶಿಯಾಗಿ ಬಿದ್ದಿದೆ. ಪಕ್ಕದಲ್ಲಿಯೇ ಪೊಲೀಸ್‌ ಠಾಣೆ ಇದ್ದರೂ, ಇಂತಹ ಕೃತ್ಯಗ‌ಳು ಇಲ್ಲಿ ಹೇಗೆ ನಡೆಯುತ್ತದೆ ಎಂಬುದೂ ಆಶ್ವರ್ಯವಾಗಿದೆ. ಕಟ್ಟಡದ ಮುಂಭಾಗದ ಜಾಗದಲ್ಲಿ ಸಾಕಷ್ಟು ಜಾಗವಿದೆ. ಅದನ್ನು ಈಗ ಸಾರ್ವಜನಿಕರು ಬೈಕ್‌ ಪಾರ್ಕಿಂಗ್‌ ಜಾಗವಾಗಿ ಮಾರ್ಪಾಟು ಮಾಡಿಕೊಂಡಿದ್ದಾರೆ. ಗೀತಾ ರಸ್ತೆಯಲ್ಲಿರುವ ಟ್ರಾಫಿಕ್‌ ಸಮಸ್ಯೆ ಇರುವುದರಿಂದ ಇದು ಸಾರ್ವಜನಿಕರಿಗೆ ಅನುಕೂಲವಾಗಿದೆ.

ಟ್ರಾನ್ಸ್‌ ಫಾರ್ಮರ್‌ ಹಾಕಿದ್ರು ಕೇಳಿಲ್ಲ: ಈಚೆಗೆ ಫ‌ುಟ್ಪಾತ್‌ನಲ್ಲಿದ್ದ ಟ್ರಾನ್ಸ್‌ ಫಾರ್ಮರ್‌ ಅನ್ನು ಬೆಸ್ಕಾಂ ವರ್ಗಾವಣೆ ಮಾಡಿತು. ಸಾರ್ವಜನಿಕ ಜಾಗದಲ್ಲಿ ಹಾಕುವ ಬದಲು ಪೊಲೀಸ್‌ ಠಾಣೆಯ ವಸತಿ ಗೃಹದೊಳಗೆ ಹಾಕಿತು.

ಅದನ್ನು ವಿರೋಧಿಸುವ ಇಲ್ಲವೇ, ತನ್ನ ಜಾಗದಲ್ಲಿ ಹಾಕಲು ಅನುಮತಿ ಪಡೆಯುಬೇಕೆನ್ನುವ ಷರತ್ತನ್ನೂ ಪೊಲೀಸ್‌ ಇಲಾಖೆ ವಿಧಿಸಲಿಲ್ಲ. ಇದು ತನ್ನ ಕಟ್ಟಡದ ಮೇಲೆ ಎಷ್ಟು ನಿಗಾವಹಿಸಿದೆ ಎಂಬುದನ್ನು ತೋರಿಸುತ್ತಿದೆ.

ಕಟ್ಟಡ ಬಳಸಿಕೊಳ್ಳಿ: ಹೃದಯದ ಮಧ್ಯಭಾಗದಲ್ಲಿರುವ ಈ ಕಟ್ಟಡವನ್ನು ನವೀಕರಿಸಿ, ಇಲ್ಲವೇ ಹೊಸದಾಗಿ ಕಟ್ಟಿ, ಸಿಇಎನ್‌ ಪೊಲೀಸರಿಗೆ ಇಲ್ಲವೇ ಮಹಿಳಾ ಪೊಲೀಸ್‌ ಠಾಣೆ ಅಥವಾ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ನೀಡುವ ಕೆಲಸ ಮಾಡಬಹುದಿತ್ತು ಎಂದು ಕೆಲ ಪೊಲೀಸ್‌ ಸಿಬ್ಬಂದಿಗಳ ಅಭಿಪ್ರಾಯವಾಗಿದೆ.

ನೂತನ ಎಸ್ಪಿ ಈಚೆಗೆ ನಗರ ಸಂಚಾರ ಸಂದರ್ಭದಲ್ಲಿ ಈ ಕಟ್ಟಡವನ್ನು ಸಹ ನೋಡಿ ವಿಚಾರಿಸಿದ್ದರು. ಆದರೆ, ಅದರ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿಯಬೇಕಾಗಿದೆ.

● ಬಿ.ಆರ್‌.ಗೋಪಿನಾಥ್‌

ಟಾಪ್ ನ್ಯೂಸ್

ರೆಮ್‌ಡಿಸಿವಿರ್ ಅಕ್ರಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ರೆಮ್‌ಡಿಸಿವಿರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

COVID-19: Team India players taking only COVISHIELD vaccine, here’s why

ಟೀಂ ಇಂಡಿಯಾ ಆಟಗಾರರು ಕೋವಿಶೀಲ್ಡ್ ಲಸಿಕೆಯನ್ನು ಮಾತ್ರ ತೆಗೆದುಕೊಳ್ಳುತ್ತಿರುವುದು ಯಾಕೆ..?

ಏ ನಾಲಾಯಕ್ ಫೋನ್ ಇಡು…. : ಮೃತಪಟ್ಟ ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಆಡಿಯೋ ವೈರಲ್

ಏ ನಾಲಾಯಕ್ ಫೋನ್ ಇಡು… : ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಸಂಭಾಷಣೆಯ ಆಡಿಯೋ ವೈರಲ್

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

ಕೋವಿಡ್ ನಿಯಂತ್ರಿಸುವಲ್ಲಿ ವಿಫಲ : ಪಿಎಂ – ಸಿಎಂ ರಾಜೀನಾಮೆಗೆ ರಾಮಲಿಂಗಾರೆಡ್ಡಿ ಒತ್ತಾಯ

ಕೋವಿಡ್ ನಿಯಂತ್ರಿಸುವಲ್ಲಿ ವಿಫಲ : ಪಿಎಂ – ಸಿಎಂ ರಾಜೀನಾಮೆಗೆ ರಾಮಲಿಂಗಾರೆಡ್ಡಿ ಒತ್ತಾಯ

Oxygen On wheels ready to medicate patient in Bengalore : Lakshaman Savaadi Oxygen On wheels ready to medicate patient in Bengalore : Lakshaman Savaadi

ಸೇವೆಗೆ ಸಿದ್ಧವಾಗಿರುವ ‘ಆಕ್ಸಿಜನ್  ಆನ್ ವ್ಹೀಲ್ಸ್’ ಬಸ್ : ಡಿಸಿಎಂ ಸವದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್‌ ಗುಪ್ತ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಸ್ರೇಲ್‌ನಿಂದ ಕೆಜಿಎಫ್‌ ಗೆ  ಬಂತು ಆಕ್ಸಿಜನ್‌ ಘಟಕ

ಇಸ್ರೇಲ್‌ನಿಂದ ಕೆಜಿಎಫ್‌ ಗೆ ಬಂತು ಆಕ್ಸಿಜನ್‌ ಘಟಕ

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

Police officer assisting in the treatment of the infected

ಸೋಂಕಿತರ ಚಿಕಿತ್ಸೆಗೆ ಪೊಲೀಸ್‌ ಅಧಿಕಾರಿ ನೆರವು

The people who bought the necessary material

ಲಾಕ್‌ಡೌನ್‌ ಹಿನ್ನೆಲೆ: ಅಗತ್ಯ ವಸ್ತು ಖರೀದಿಸಿದ ಜನ

narega

ಕೂಲಿ ಕಾರ್ಮಿಕರಿಗೆ ನರೇಗಾ ನೆರವು

MUST WATCH

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

udayavani youtube

ಬೆಂಗಳೂರಿಗೆ ಬಂತು 120 ಟನ್ ಪ್ರಾಣವಾಯು

ಹೊಸ ಸೇರ್ಪಡೆ

ರೆಮ್‌ಡಿಸಿವಿರ್ ಅಕ್ರಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ರೆಮ್‌ಡಿಸಿವಿರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

COVID-19: Team India players taking only COVISHIELD vaccine, here’s why

ಟೀಂ ಇಂಡಿಯಾ ಆಟಗಾರರು ಕೋವಿಶೀಲ್ಡ್ ಲಸಿಕೆಯನ್ನು ಮಾತ್ರ ತೆಗೆದುಕೊಳ್ಳುತ್ತಿರುವುದು ಯಾಕೆ..?

ಏ ನಾಲಾಯಕ್ ಫೋನ್ ಇಡು…. : ಮೃತಪಟ್ಟ ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಆಡಿಯೋ ವೈರಲ್

ಏ ನಾಲಾಯಕ್ ಫೋನ್ ಇಡು… : ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಸಂಭಾಷಣೆಯ ಆಡಿಯೋ ವೈರಲ್

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

ಕೋವಿಡ್ ನಿಯಂತ್ರಿಸುವಲ್ಲಿ ವಿಫಲ : ಪಿಎಂ – ಸಿಎಂ ರಾಜೀನಾಮೆಗೆ ರಾಮಲಿಂಗಾರೆಡ್ಡಿ ಒತ್ತಾಯ

ಕೋವಿಡ್ ನಿಯಂತ್ರಿಸುವಲ್ಲಿ ವಿಫಲ : ಪಿಎಂ – ಸಿಎಂ ರಾಜೀನಾಮೆಗೆ ರಾಮಲಿಂಗಾರೆಡ್ಡಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.