ಬಿತ್ತನೆ ಆಲೂಗಡ್ಡೆಯಲ್ಲಿ ಕಲಬೆರಕೆ: ಕ್ರಮಕ್ಕೆ ಆಗ್ರಹ
Team Udayavani, Jan 18, 2022, 1:17 PM IST
ಬಂಗಾರಪೇಟೆ: ಬಿತ್ತನೆ ಆಲೂಗಡ್ಡೆಯಲ್ಲಿ ಕಲಬೆರಕೆ ಮಾಡುವ ಕೆಲವು ಖಾಸಗಿ ಮಂಡಿ ಮಾಲಿಕರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ, ಇದರ ನಿಯಂತ್ರಣಕ್ಕೆ ವಿಶೇಷ ತಂಡ ರಚನೆಮಾಡಬೇಕೆಂದು ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಮರಗಲ್ ಮುನಿಯಪ್ಪ ಆಗ್ರಹಿಸಿದರು.
ರೈತ ಸಂಘದಿಂದ ಪಟ್ಟಣದ ಎಪಿಎಂಸಿಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದಅವರು, ಕಲಬೆರಕೆ ಆಲೂಗಡ್ಡೆಯನ್ನು ಮಾರಾಟಮಾಡುವ ಮಂಡಿ ಮಾಲಿಕರನ್ನು ಕೇಳಿದರೆ ಜಾತಿವ್ಯವಸ್ಥೆಯ ಕಲ್ಪನೆ, ರೈತರಿಗೆ ಎಲ್ಲಾ ಬಂಡವಾಳ ನಾವೇಕೊಟ್ಟು ಅಂಬಾನಿ ಅದಾನಿ ರೀತಿ ಕೃಷಿ ಮಾಡಿಸುತ್ತಿದ್ದೇವೆ. ನಷ್ಟವಾದರೆ ರೈತರಾಗುತ್ತಾರೆ.ನಿಮಗೇನು? ಹೆಚ್ಚಿಗೆ ಮಾತನಾಡಿದರೆ ದಲಿತರಮೇಲೆ ದೌರ್ಜನ್ಯ ಎಂಬ ಪಟ್ಟ ಕಟ್ಟಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆಂದು ಹೇಳಿದರು.
ಬೆಲೆ ನಿಯಂತ್ರಣ ಮಾಡಿ: ರೈತ ಸಂಘದ ಜಿಲ್ಲಾಧ್ಯಕ್ಷಐತಾಂಡಹಳ್ಳಿ ಮಂಜುನಾಥ್ ಮಾತನಾಡಿ,ಲಕ್ಷಾಂತರ ರೂ. ಸಾಲ ಮಾಡಿ ಬೆಳೆ ಬೆಳೆಯಲುಮುಂದಾಗುವ ರೈತರಿಗೆ, 1 ಸಾವಿರ ರೂ.ನ ಬಿತ್ತನೆಆಲೂಗಡ್ಡೆ ಮೂಟೆಗೆ 3000 ರೂ.ನಿಂದ 4000 ರೂ.ಪಡೆಯಲಾಗುತ್ತಿದೆ. ಈ ಮೂಲಕ ಒಂದು ವಿಧದಲ್ಲಿರೈತರನ್ನು ಶೋಷಣೆ ಮಾಡುತ್ತಿದ್ದರೂ ಬೆಲೆನಿಯಂತ್ರಣ ಮಾಡಬೇಕಾದ ಅಧಿಕಾರಿಗಳು ನಾಪತ್ತೆ ಆಗಿದ್ದಾರೆ ಎಂದು ದೂರಿದರು.
ರೈತರಿಗೆ ವಂಚನೆ: ದುಬಾರಿ ಬೆಲೆ ಒಂದು ಕಡೆಯಾದರೆ ಮತ್ತೂಂದು ಕಡೆ ಪಂಜಾಬ್, ಹರಿಯಾಣ, ಚೆಂಬಲ್ ಮತ್ತಿತರ ರಾಜ್ಯಗಳ ವಿವಿಧ ಬ್ರಾಂಡ್‌ಗಳಹೆಸರಿನಲ್ಲಿ ತರಿಸುವ ಬಿತ್ತನೆ ಆಲೂಗಡ್ಡೆ ಒಂದು ಲಾರಿ ತರಿಸಿದರೆ ಅದಕ್ಕೆ ಕೆಲವು ಮಂಡಿ ಮಾಲಿಕರು ತಿನ್ನುವಆಲೂಗಡ್ಡೆ ಕಲಬೆರಕೆ ಮಾಡುವ ಮೂಲಕ ರೈತರನ್ನುವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬಿತ್ತನೆ ಆಲೂಗಡ್ಡೆಯಲ್ಲಿ ಕಲಬೆರಕೆ ಮಾಡಿದರೆ ಕ್ರಿಮಿನಲ್‌ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದರೂಏಕೆ ಪಾಲನೆ ಮಾಡುತ್ತಿಲ್ಲ. ಒಂದು ಕಡೆ ಬಿತ್ತನೆಆಲೂಗಡ್ಡೆ, ಮತ್ತೂಂದು ಜಾಗದಲ್ಲಿ ಕಲಬೆರಕೆ ದಂಧೆಎರಡೂ ನಡೆಯುವುದು ಮಾರುಕಟ್ಟೆ ಪ್ರಾಂಗಣದಲ್ಲೇ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಜಾತಿ ಹೆಸರಿನಲ್ಲಿ ದೌರ್ಜನ್ಯ: ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧಿಕಾರಿ ವೈ.ನಾಗೇಶ್,ಆಲೂಗಡ್ಡೆ ವ್ಯಾಪಾರಸ್ಥರು ದುಬಾರಿ ಬೆಲೆ ಮತ್ತುಕಲಬೆರಕೆ ದಂಧೆಯ ಬಗ್ಗೆ ದೂರು ನೀಡಿದರೆ ಪರವಾನಗಿ ರದ್ದು ಮಾಡುತ್ತೇವೆ. ಜೊತೆಗೆ ವ್ಯಾಪಾರಮಾಡುವ ಮಾಲಿಕರು ಜಾತಿ ಹೆಸರಿನಲ್ಲಿ ದೌರ್ಜನ್ಯಮಾಡಬಾರದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿಯಲ್ಲಣ್ಣ, ಹರೀಶ್, ನಾಗಯ್ಯ, ಮುನಿರಾಜು,ವೇಣುಗೋಪಾಲ್, ಸುರೇಶ್‌ಬಾಬು, ಆಂಜಿನಪ್ಪ,ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಚಲಪತಿ,ಚಾಂದ್‌ಪಾಷ, ಆರೀಫ್, ಬಾಬಾಜಾನ್, ಜಾವೀದ್, ಮುನಿಕೃಷ್ಣಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ