ಚಿಲ್ಲರೆ ಜನರಿಗೆ ನಾನು ಉತ್ತರ ಕೊಡುವುದಿಲ್ಲ: ಎಂಸಿಎಸ್‌

ಡ್ರಗ್ಸ್‌, ಮಾದಕ ವಸ್ತುಗಳು ನಗರದಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದೆ.

Team Udayavani, Apr 23, 2022, 5:52 PM IST

ಚಿಲ್ಲರೆ ಜನರಿಗೆ ನಾನು ಉತ್ತರ ಕೊಡುವುದಿಲ್ಲ: ಎಂಸಿಎಸ್‌

ಚಿಂತಾಮಣಿ: ತಾಲೂಕಿನ ಎಲ್ಲಾ ಇಲಾಖೆಗಳು ಜನರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಫ‌ಲವಾಗಿವೆ. ಈ ಕುರಿತು ಇಷ್ಟೂ ದಿನಗಳ ಕಾಲ ನಾನು ಮಾತನಾಡದೆ ನಿಶ್ಯಬ್ಧವಾಗಿದ್ದೆ, ಆದರೂ ನಮ್ಮ ಮಾತುಗಳಿಗೆ ಅವೈಜ್ಞಾನಿಕವಾಗಿ ಕೆಲವರು ಪ್ರತಿಕ್ರಿಯೆ ನೀಡುತ್ತಾರೆ. ಅಂತಹ ಚಿಲ್ಲರೆ ಜನರಿಗೆ ನಾನು ಉತ್ತರ ಕೊಡಲಾರೆ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಅಭಿಪ್ರಾಯಪಟ್ಟರು.

ಅವರು ನಗರದ ತಮ್ಮ ನಿವಾಸದಲ್ಲಿ ಮಲಿಕ್‌ ಮತ್ತು ದಾದಾಪೀರ್‌ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷವನ್ನು ತೊರೆದು ತಮ್ಮ ಬಣಕ್ಕೆ ಬಂದ ಹಲವು ಯುವಕರನ್ನು ಸ್ವಾಗತಿಸಿದರು. ಇನ್ನು ನಗರದಲ್ಲಿ ಹಲವು ದೂರುಗಳು ಬಂದಿವೆ. ಡ್ರಗ್ಸ್‌, ಮಾದಕ ವಸ್ತುಗಳು ನಗರದಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಯುವಲ್ಲಿ ಪೊಲೀಸ್‌ ಇಲಾಖೆ ಫ‌ಲವಾಗಿದೆ. ಇನ್ನಾದರೂ ಪೊಲೀಸರು ಕೃತ್ಯಗಳು ಜರುಗದಂತೆ ತಡೆಯಬೇಕು ಎಂದರು.

ತಾಲೂಕಿನಲ್ಲಿ ಇರುವ ವಿವಿಧ ಇಲಾಖೆಗಳಿಗೆ ಪ್ರಾಮಾಣಿಕ ಅಧಿಕಾರಿ ಗಳು ಬರುತ್ತಿಲ್ಲ. ಇಲ್ಲಿಗೆ ಬರುತ್ತಿರುವ ಅಧಿಕಾರಿಗಳು ಕೇವಲ ಹಣದ ಆಸೆಗೆ ಬರುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ಜನಪರ ಕೆಲಸಗಳನ್ನು ಆಪೇಕ್ಷಿಸುವುದು ಹೇಗೆ. ನಗರ ಸೇರಿದಂತೆ ತಾಲೂಕಿನ ಸಮ ಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾ ಖೆಯ ಅಧಿಕಾರಿಗಳಿಗೆ ತಿಳಿಸಿದರೂ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಇನ್ನು ಶಾಸಕರು ತಾಲೂಕಿನ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ಚುನಾವಣೆಯ ಹಿಂದಿನ ದಿನ ಮಾತ್ರ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಉಳಿದಂತೆ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳತ್ತಿಲ್ಲ. ಅವರು 9 ವರ್ಷಗಳ ಶಾಸಕರಾಗಿ ಅವರ ಸಾಧನೆಗಳೇನು ಎಂಬುದನ್ನು ಅವರೇ ತಿಳಿಸಬೇಕು ಎಂದರು.

ಅವೈಜ್ಞಾನಿಕ ಕಾಮಗಾರಿಗಳಿಗೆ ಜನರ ಹಣ ಪೋಲು ಮಾಡುವುದು. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕವಾಗಿ ಜನರಿಗೆ ಸುಲಭಕ್ಕೆ ದೊರಕಿಸಬಹುದಾದ ಯೋಜನೆಗಳಿಗೆ ಕೋಟ್ಯಂತರ ರೂ. ವ್ಯಯಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಎಂಜಿ ರಸ್ತೆಯ ಅಗಲೀಕರಣಕ್ಕೆ ಅಂಗಡಿ ಮಾಲಿಕರಿಗೆ ನೋಟಿಸ್‌ ಕೊಟ್ಟು ಅಂಗಡಿಗಳಿಗೆ ಗುರುತು ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಪ್ರಾರಂಭದಲ್ಲಿಯೇ ಲೋಕೋಪಯೋಗಿ ಇಲಾಖೆ ಮತ್ತು ಅಂಗಡಿ ಮಾಲಿಕರ ನಡುವೆ ಮಾತುಕತೆ
ನಡೆದು ಕೆಲವು ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟಿದ್ದಾರೆ. ಆದರೂ ಅಂತವರಿಗೂ ನೋಟೀಸ್‌ ನೀಡಿದ್ದಾರೆ ಎಂದರು.

ಜೆಡಿಎಸ್‌ ಮುಖಂಡ ಮಲ್ಲಿಕ್‌ ಮತ್ತು ದಾದಾ ಪೀರ್‌ ನೇತೃತ್ವದಲ್ಲಿ ನಾಗೇಂದ್ರಕುಮಾರ್‌, ನವಾಬ್‌, ಫ‌ರ್ಹಾನ್‌, ತಾರ್‌, ಸಂದೀಪ್‌, ಚೋಟು ಸೇರಿದಂತೆ ಹಲವರು ಸೇರ್ಪಡೆಯಾದರು. ನಗರಸಭಾ ಸದಸ್ಯ ಎಂ.ಹರೀಶ್‌, ಮುಖಂಡ ಉಮೇಶ್‌, ಶೇಷಾರೆಡ್ಡಿ, ಅಮೂನ್‌ ಖಾನ್‌, ಮಹಬೂಬ್‌ ಸಾಬ್‌, ಇಂತಿಯಾಜ್‌ಪಾಶಾ, ಖಾದರ್‌ಸಾಬ್‌, ನವಾಬ್‌ ಸಾಬ್‌, ಸನ್ನೂಖಾನ್‌, ಅಬ್ದುಲ್‌ಸಮದ್‌, ಖೀಜರ್‌ ಪಾಶಾ, ನಾರಾಯಣಸ್ವಾಮಿ, ಎಜಾಜ್‌ಪಾಶಾ, ಸರ್ದಾರ್‌ ಪಾಷಾ, ಪರೂಕ್‌ ಅಹಮ್ಮದ್‌, ಚಿನ್ನಸಂದ್ರ ಬಾಬು ಇತರರಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.