ಮುನಿಯಪ್ಪರಂತೆ ಹೈಟೆಕ್‌ ಆಡಳಿತ ನಡೆಸಲ್ಲ

Team Udayavani, Sep 18, 2019, 12:42 PM IST

ಬಂಗಾರಪೇಟೆ ಪಟ್ಟಣದ ಕಾರಹಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ದೇವಾಲಯದಲ್ಲಿ ಮಹರ್ಷಿಗಳ ದಿನಾಚರಣೆ ಅಂಗವಾಗಿ ಸಂಸದ ಎಸ್‌.ಮುನಿಸ್ವಾಮಿ ಸಸಿ ನೆಟ್ಟರು.

ಬಂಗಾರಪೇಟೆ: ಜಿಲ್ಲೆಯ ಅಭಿವೃದ್ಧಿಗೋಸ್ಕರ ಕಾರ್ಪೋರೆಟರ್‌ ಆಗಿಯೂ, ಸೇವಕನಾಗಿ ಕೆಲಸ ಮಾಡುತ್ತೇನೆ ಹೊರತು, ಜನರ ವಿಶ್ವಾಸ ಕಳೆದುಕೊಂಡಿ ರುವ ಮಾಜಿ ಸಂಸದ ಕೆ.ಎಚ್.ಮುನಿಯಪ್ಪರಂತೆ ಹೈಟೆಕ್‌ ಆಡಳಿತ ನಡೆಸುವುದಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ತಿರುಗೇಟು ನೀಡಿದರು.

ಪಟ್ಟಣದ ವಿಶ್ಪಕರ್ಮರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಸ್ಕಾಂನವರು ರೈತರು, ಬಡವರು 200, 300 ರೂ. ಮನೆಯ ವಿದ್ಯುತ್‌ ಬಿಲ್ ಕಟ್ಟದಿದ್ದರೆ ತಕ್ಷಣ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ಆದರೆ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ 22 ಲಕ್ಷ ರೂ. ಬಾಕಿ ಇಟ್ಟುಕೊಂಡು, ವಿದ್ಯುತ್‌ ದುರುಪಯೋಗಪಡಿಸಿ ಕೊಂಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಧಿಕಾರ ದುರುಪಯೋಗ: ಜನರಿಂದ ಪಡೆದ ಅಧಿಕಾರ ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು. ಅಧಿಕಾರದ ದಾಹದಿಂದ ಬೆಳೆದಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಸರ್ಕಾರಕ್ಕೆ ವಿದ್ಯುತ್‌ ಬಾಕಿ ಪಾವತಿಸದೇ ನಿರ್ಲಕ್ಷ್ಯವಹಿ ಸಿರುವುದು ನೋಡಿದರೆ, ಮತ ಗೆಲ್ಲಿಸಿದ ಜನರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ ಎಂದು ಕಿಡಿಕಾರಿದರು.

ಹಿರಿತನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಲಿ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸಾಮಾನ್ಯ ಕುಟುಂಬದಿಂದ ಬಂದವರು ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಅಕ್ರಮ ಆಸ್ತಿಪಾಸ್ತಿ ಬಗ್ಗೆ ಜಿಲ್ಲೆಯ ಜನತೆಗೆ ದಾಖಲೆ ಸಮೇತ ಬಹಿರಂಗಗೊಳಿಸಿರುವುದು ಸಾಕಾಗಿಲ್ಲವೇ ಎಂದು ಆರೋಪಿಸಿದ ಅವರು, ಕೆ.ಎಚ್.ಮುನಿಯಪ್ಪ ಸಮಾಜದಲ್ಲಿ ಹಿರಿಯರಾಗಿದ್ದಾರೆ. ಅದಕ್ಕೆ ಧಕ್ಕೆ ಮಾಡಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುವುದು ಅವರ ಆರೋಗ್ಯಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದರು.

ಟೀಕೆ ಮಾಡುವುದ ಬಿಡಲಿ: ಕೆ.ಎಚ್.ಮುನಿಯಪ್ಪ ಏಳು ಬಾರಿ ಸಂಸದರಾಗಿ ಗೆದ್ದು, ಜಿಲ್ಲೆ ಅಭಿವೃದ್ಧಿ ಮಾಡದೇ ಇದ್ದರೂ ತನ್ನ ಹಿಂಬಾಲಕರು, ಸಂಬಂಧಿ ಕರು ಹಾಗೂ ತನ್ನ ಕುಟುಂಬವನ್ನು ಚೆನ್ನಾಗಿ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಕ್ಷೇತ್ರದ ಜನರು ಒಮ್ಮೆ ತಿರಸ್ಕಾರ ಮಾಡಿದರೆ, ಅದಕ್ಕೆ ಕಾರಣಗಳನ್ನು ಹುಡುಕಿ ತಿದ್ದಿಕೊಂಡು ಪಶ್ಚಾತ್ತಾಪ ಪಡೆದು, ಇನ್ನು ಮುಂದಾ ದರೂ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲಿ. ಅದು ಬಿಟ್ಟು ಬೇರೆಯವರ ಬಗ್ಗೆ ಟೀಕೆ ಮಾಡುವುದನ್ನು ಬಿಡಬೇಕೆಂದು ಹೇಳಿದರು.

ರಾಜಕೀಯ ನಿವೃತ್ತಿ ಪಡೆಯಲಿ: ಇಂದಿನ ರಾಜಕೀಯದಲ್ಲಿ ಪೈಪೋಟಿ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಮತದಾರರು ಅಮಾಯಕರಲ್ಲ. ಸಮಾಜದ ಅಭಿವೃದ್ಧಿಗಾಗಿ ಯಾವ ಪಕ್ಷ ಹಾಗೂ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಅರಿವು ಮತದಾರರಿಗೆ ಇದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ವೇಗ ನೋಡಿರುವ ಜನರು, ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಗೆಲ್ಲಿಸಿದ್ದಾರೆ. ಅದನ್ನು ಅರಿತು ರಾಜಕೀಯ ನಿವೃತ್ತಿ ಪಡೆದು, ಮುನಿಯಪ್ಪ ಸಮಾಜಕ್ಕೆ ಮಾರ್ಗದರ್ಶಕರಾಗಲಿ ಎಂದು ಹೇಳಿದರು.

ಜಿಲ್ಲೆಯು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ. ಎಲ್ಲಾ ಜನರ ಕಷ್ಟಸುಖಗಳಿಗೆ ಜನಪ್ರತಿನಿಧಿಗಳು ನೆರವಾಗಬೇಕಾಗಿದೆ. ಅದೇರೀತಿ ಕಾರ್ಪೋರೆಟರ್‌ ಆಗಿ, ಗ್ರಾಪಂ ಸದಸ್ಯನಾಗಿಯೂ ಕೆಲಸ ಮಾಡಲು ಸಿದ್ಧನಿದ್ದೇನೆ ಹೊರತು, ಯಾರೇ ಟೀಕೆ ಮಾಡಿದರೂ ಕೇರ್‌ ಮಾಡುವುದಿಲ್ಲ ಎಂದು ಸವಾಲ್ ಹಾಕಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್‌ಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ಎ.ಹನುಮಪ್ಪ, ನಗರ ಅಧ್ಯಕ್ಷ ಆರ್‌.ಶಶಿಕುಮಾರ್‌, ಜಿಲ್ಲಾ ಹಿಂದುಳಿದ ಮೋರ್ಚಾಧ್ಯಕ್ಷ ಬಿ.ಹೊಸರಾಯಪ್ಪ, ಜಿಪಂ ಸದಸ್ಯ ಬಿ.ವಿ.ಮಹೇಶ್‌, ಎಂ.ಪಿ.ಶ್ರೀನಿವಾಸಗೌಡ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ