ಕೆಲಸಕ್ಕೆ ಬಂದ ನೌಕರರಿಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಅಡೆತಡೆ!

Team Udayavani, Apr 23, 2021, 4:07 PM IST

KSRTC and BMTC protest issue

ಕೋಲಾರ: ಹೈಕೋರ್ಟ್‌ ಸೂಚನೆ ಮೇರೆಗೆ ಸಾರಿಗೆಮುಷ್ಕರ ವನ್ನು ನೌಕರರು ಸ್ಥಗಿತಗೊಳಿಸಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಕೆಲಸಕ್ಕೆ ಹಾಜರಾಗುವ ನೌಕರರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಕರಾರಿನ ಜತೆಗೆ ಅಧಿಕಾರಿಗಳುನೀಡುತ್ತಿರುವ ಮುಚ್ಚಳಿಕೆ ತಪ್ಪೊಪ್ಪಿಗೆ ಅಡ್ಡಿಯಾಗಿದೆ.

ಕಳೆದ 15 ದಿನಗಳಿಂದ ಮುಷ್ಕರ ನಿರತರಾಗಿದ್ದು,ಕೆಲಸಕ್ಕೆ ಗೈರು ಹಾಜರಾಗಿದ್ದ ಸಾರಿಗೆ ನೌಕರರು ಹೈಕೋರ್ಟ್‌ ಆದೇಶ ಗೌರವಿಸಿ ಗುರುವಾರದಿಂದ ರಾಜ್ಯಾದ್ಯಂತ ಕೆಲಸಕ್ಕೆ ಹಾಜರಾಗಲು ಮುಂದಾಗಿ ದ್ದಾರೆ.ಸಂಸ್ಥೆಯು ನಿಗದಿಪಡಿಸಿರುವಂತೆ ಕೋವಿಡ್‌ ಪರೀಕ್ಷೆಮಾಡಿಸಲು ಬಹುತೇಕ ಸಿಬ್ಬಂದಿ ಒಪ್ಪಿಗೆ ಸೂಚಿಸಿಕೋವಿ ಡ್‌ ತಪಾಸಣೆಗೊಳಗಾಗುತ್ತಿದ್ದಾರೆ.

ಆದರೆ, ಕೆಲಸಕ್ಕೆ ಸೇರಲು ಅಧಿಕಾರಿಗಳು ನೀಡುತ್ತಿರುವ ತಪ್ಪೊಪ್ಪಿಗೆಪತ್ರಕ್ಕೆ ಸಹಿ ಹಾಕುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದ ಹಲವು ಸಾರಿಗೆ ಡಿಪೋಗಳಲ್ಲಿ ಮುಷ್ಕರನಿರತ ನೌಕರರಿಂದ ಕೆಲಸಕ್ಕೆ ಅನುಮತಿ ಕೋರಿ ಪತ್ರಕ್ಕೆಸಹಿ ಮಾಡಿಸಿಕೊಳ್ಳುತ್ತಿದ್ದರೆ, ಕೋಲಾರ ಸಾರಿಗೆಅಧಿಕಾರಿಗಳು ತಪ್ಪೊಪ್ಪಿಗೆ ಮುಚ್ಚಳಿಕೆಯನ್ನುನೌಕರರಿಂದ ಬರೆಸಿಕೊಳ್ಳಲು ಮುಂದಾಗಿರುವುದುನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ವಾಪಸ್‌: ಗುರುವಾರ ಕೆಲಸಕ್ಕೆ ಬಂದ ಕೆಲವರುಕೆಲವರು ಅಧಿಕಾರಿಗಳು ನೀಡಿರುವ ತಪ್ಪೊಪ್ಪಿಗೆ ಪತ್ರಕ್ಕೆಸಹಿ ಹಾಕಿದ್ದಾರೆ. ಕೆಲವರು ಕೆಲಸಕ್ಕೆ ಹಾಜರಾಗದೆವಾಪಸ್ಸಾಗಿದ್ದಾರೆ. ರಾಜ್ಯದ ಇತರೇ ಡಿಪೋಗಳಂತೆಅನುಮತಿ ಪತ್ರಕ್ಕೆ ಮಾತ್ರವೇ ತಾವು ಸಹಿ ಮಾಡುತ್ತೇವೆ.

ಅಧಿಕಾರಿಗಳು ಈ ಪತ್ರದ ಮಾದರಿಯನ್ನು ಕೋಲಾರದನೌಕರರಿಗೂ ನೀಡಬೇಕೆಂದು ಒತ್ತಾಯಿಸಿದ್ದಾರೆ.ಕೋಲಾರ ಡಿಪೋ ಅಧಿಕಾರಿಗಳು ಹೈಕೋರ್ಟ್‌ಆದೇ ಶದ ಮೇರೆಗೆ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆಬಂದಿ ರುವ ನೌಕರರಿಂದ ತಪ್ಪೊಪ್ಪಿಗೆ ಮುಚ್ಚಳಿಕೆ ಬರೆಸಿಕೊಂಡು ಅವರ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವುದು ನೌಕರರ ಆಕ್ರೋಶಕ್ಕೆ ಗುರಿಯಾಗಿದ್ದು,ಹಿರಿಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕೆಂಬಆಗ್ರಹವೂ ನೌಕರರ ವರ್ಗದಿಂದ ಕೇಳಿ ಬರುತ್ತಿದೆ.

ಜಾಮೀನು: 2 ದಿನಗಳ ಹಿಂದೆ ನಿಷೇಧಾಜ್ಞೆ ಉಲ್ಲಂ ಸಿಗುಂಪು ಸೇರಿ ಪ್ರತಿಭಟನೆಗೆ ಮುಂದಾದರೆಂಬ ಕಾರಣಕ್ಕೆಬಂಧನಕ್ಕೊಳಗಾಗಿದ್ದ 32 ಮಂದಿಗೆ ನ್ಯಾಯಾಲಯಗುರುವಾರ ಜಾಮೀನು ಮಂಜೂರು ಮಾಡಿದೆ.ಪ್ರತಿಭಟನೆ ನಿರತ ನೌಕರರನ್ನು ಪೊಲೀಸರುಬಂಧಿಸಿದ್ದು, ಇದನ್ನು ಪ್ರತಿಭಟಿಸಿದ ನೌಕರರ ಗುಂಪನ್ನುಪೊಲೀಸರು ಲಾಠಿ ಬೀಸಿ ಚದುರಿಸಿದ್ದರು.

ಈ ಘಟನೆಯಲ್ಲಿ ಬಂಧಿತರಾದ ಎಲ್ಲಾ 32 ಸಾರಿಗೆನೌಕರರ ಪರವಾಗಿ ಸಿಎಂಆರ್‌ ಟೊಮೆಟೋ ಮಂಡಿಮಾಲೀಕ ಶ್ರೀನಾಥ್‌ ವಕೀಲರನ್ನಿಟ್ಟು ನ್ಯಾಯಾಲಯಮುಂದೆ ಅರ್ಜಿ ಸಲ್ಲಿಸಿ ಜಾಮೀನು ಮಂಜೂರುಮಾಡಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ. ಇವರಿಗೆ ಸಾರಿಗೆನೌಕರರು ಕೃತಜ್ಞತೆ ಅರ್ಪಿಸಿದ್ದಾರೆ.

ಬಸ್ಗಳ ಓಡಾಟ: ಕೋಲಾರ ನಗರ ಸೇರಿ ಜಿಲ್ಲಾದ್ಯಂತಎಲ್ಲಾ ಡಿಪೋಗಳಿಂದಲೂ ಸಾರಿಗೆ ಬಸ್‌ ಓಡಾಟಆರಂಭವಾಯಿತು. ಆದರೆ, ತಪ್ಪೊಪ್ಪಿಗೆ ಪತ್ರದಅಡೆತಡೆಯಿಂದಾಗಿ ನೌಕರರು ಪೂರ್ಣ ಪ್ರಮಾಣದಲ್ಲಿಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆರಂಭವಾದಬಸ್‌ಗಳಲ್ಲಿಯೂ ಸರ್ಕಾರ ಕೋವಿಡ್‌ ಮಾರ್ಗಸೂಚಿಬಂದ್‌ ಪರಿಣಾಮ ಪ್ರಯಾಣಿಕರ ಸಂಖ್ಯೆ ತೀರಾಕಡಿಮೆಯಾಗಿದ್ದು ಕಂಡು ಬಂದಿತು.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.