Udayavni Special

ಸಕಾಲಕ್ಕೆ ಪಾವತಿಸಿದ್ರೆ 10 ಕೋಟಿ ರೂ. ಸಾಲ


Team Udayavani, Aug 29, 2020, 4:07 PM IST

ಸಕಾಲಕ್ಕೆ  ಪಾವತಿಸಿದ್ರೆ 10 ಕೋಟಿ ರೂ. ಸಾಲ

ಮಾಲೂರು: ತಾಲೂಕಿನ ಟೇಕಲ್‌ ಹೋಬಳಿಯ ಮಹಿಳೆಯರು, ರೈತರ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ 14 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಸ್ತುತ 2.42 ಕೋಟಿ ರೂ. ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಡಿಸಿಸಿ ಬ್ಯಾಂಕ್‌ ಕಚೇರಿ ಆವರಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹಾಗೂ ಟೇಕಲ್‌ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 50 ಮಹಿಳಾ ಸ್ವಸಹಾಯ ಸಂಘಗಳಿಗೆ 2.42 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಿ ಮಾತನಾಡಿದರು. ತಾಲೂಕಿನ ಟೇಕಲ್‌ ಹೋಬಳಿಯ ಸ್ತ್ರೀ ಶಕ್ತಿ ಸಂಘಗಳು, ರೈತರು ಸೇರಿ ಹಲವು ಮಂದಿಗೆ ಡಿಸಿಸಿ ಬ್ಯಾಂಕ್‌ 14 ಕೋಟಿ ರೂ. ಸಾಲ ನೀಡಿದೆ. ಪಡೆದಂತಹ ಕೆಲವರು ಸಕಾಲಕ್ಕೆ ಪಾವತಿ ಮಾಡದ ಕಾರಣ ವರ್ಷದಿಂದ ನೂತನ ಸಾಲ ವಿತರಣೆ ಮಾಡಲು ತೊಡಕಾಗಿದೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡಗೆ ಮನವಿ ಸಲ್ಲಿಸಿದ್ದರಿಂದ ಪ್ರಸ್ತುತ 2.42 ಕೋಟಿ ರೂ. ಅನ್ನು 50 ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿದ್ದಾರೆ ಎಂದರು.

ಪ್ರತಿ ಸಂಘಕ್ಕೂ 5 ಲಕ್ಷ ರೂ. ನೀಡುತ್ತಿದ್ದು, ಸಾಲ ಪಾವತಿ ಮಾಡಿದ್ದಲ್ಲಿ ಮುಂದಿನ ವರ್ಷ ಟೇಕಲ್‌ ಗ್ರಾಮದಲ್ಲಿ 10 ಕೋಟಿ ರೂ. ನೀಡಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿ ವಿತರಿಸಲಾಗುವುದು. ಇಂತಹ ಅವಕಾಶ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಮಾತನಾಡಿ, ತಾಲೂಕಿನ 3 ಹೋಬಳಿಗಳಲ್ಲಿ ಸಂಘಗಳು ಪಡೆದ ಸಾಲವನ್ನು ಸಮರ್ಪಕವಾಗಿ ಪಾವತಿ ಮಾಡುತ್ತಿವೆ. ಆದರೆ, ಟೇಕಲ್‌ ಹೋಬಳಿಯಲ್ಲಿ ಪಡೆದ ಸಾಲವನ್ನು ಪಾವತಿ ಮಾಡದ ಕಾರಣ ಸಾಲ ವಿತರಣೆ ವಿಳಂಬವಾಗಿತ್ತು. ಶಾಸಕ ನಂಜೇಗೌಡ ಕೋರಿಕೆ ಮೇರೆಗೆ ಪ್ರಸ್ತುತ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 1 ಲಕ್ಷ ರೂ. ವಿತರಿಸಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುವುದು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ಸಾಲ ನೀಡಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಚ್‌.ಚನ್ನ ರಾಯಪ್ಪ, ಜಿಪಂ ಮಾಜಿ ಸದಸ್ಯರಾದ ಆನೇ ಪುರ ಹನುಮಂತಪ್ಪ, ಬಾಳಿಗಾನ ಹಳ್ಳಿ ರವಿ ಶಂಕರ್‌, ಸಹಕಾರ ಸಂಘದ ಅಧ್ಯಕ್ಷ ರವೀಂದ್ರ, ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಬೈಯಣ್ಣ, ನಾರಾಯಣ ಗೌಡ, ರಮೇಶ್‌, ಶ್ರೀನಿವಾಸ್‌, ಪ್ರಶಾಂತ್‌, ಮುರಳಿ, ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಯಲ್ಲಪ್ಪರೆಡ್ಡಿ, ಮೇಲ್ವಿಚಾರಕ ಕೃಷ್ಣಪ್ಪ, ದ್ಯಾಪಸಂದ್ರ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಸುಧಾಕರ್‌ ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹುಣಸೂರು: ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ; ಜಿಂಕೆ ಮಾಂಸ ಅಕ್ರಮ ಸಾಗಾಟ; ಇಬ್ಬರ ಬಂಧನ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಹೆಚ್ಚುತ್ತಲೇ ಇದೆ ಆನ್‌ಲೈನ್‌ ವಂಚನೆ-ಸೈಬರ್‌ಕ್ರೈಂ

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ; ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿಯ ನೀರು

0000

ಆರ್ ಸಿಬಿ – ಸನ್ ರೈಸರ್ಸ್ : ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

ಚಾಮರಾಜ ನಗರ: ಸೋಮವಾರ 57 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಚಾಮರಾಜ ನಗರ: ಸೋಮವಾರ 57 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕಾವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕೋವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು

ಕೋವಿಡ್-19 ಕಳವಳ – ಸೆ.21: 7339 ಹೊಸ ಪ್ರಕರಣ ; 9925 ಡಿಸ್ಚಾರ್ಜ್; 122 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-1

ಕೋಲಾರ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಸದ್ದು

ಯೂರಿಯಾ ನೀಡಲು ಒತ್ತಾಯ

ಯೂರಿಯಾ ನೀಡಲು ಒತ್ತಾಯ

kolara-tdy-2

ನಾಳೆಯಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ನಾಲ್ಕು ಗಂಟೆ ನಿಂತು ಶಾಸಕಿ ಪ್ರತಿಭಟನೆ

ನಾಲ್ಕು ಗಂಟೆ ನಿಂತು ಶಾಸಕಿ ಪ್ರತಿಭಟನೆ

ಅಶೋಕನಗರ ರಸ್ತೆಗೆ ರೂಪಕಲಾ ಭೇಟಿ

ಅಶೋಕನಗರ ರಸ್ತೆಗೆ ರೂಪಕಲಾ ಭೇಟಿ

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

isiri-tdy-2

ಆಸೆ ಇರಬೇಕು ನಿಜ, ಅದು ಅತಿಯಾಗಬಾರದು…

isiri-tdy-1

ಸೆಕೆಂಡ್‌ ಹ್ಯಾಂಡ್‌ ವಾಹನಗಳಿಗೆ ಶುಕ್ರದೆಸೆ

ಹುಣಸೂರು: ಭಾರೀ ಗಾಳಿಗೆ ಬಾಳೆ ನಾಶ; ಅಪಾರ ನಷ್ಟ

ಹುಣಸೂರು: ಭಾರೀ ಗಾಳಿಗೆ ಬಾಳೆ ನಾಶ; ಅಪಾರ ನಷ್ಟ; ಜೋಳ ಕಟಾವಿಗೂ ತೊಂದರೆ

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ  ಗಮನ ಹರಿಸಿ: ಅಜಿತ್‌

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ ಗಮನ ಹರಿಸಿ: ಅಜಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.