Udayavni Special

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ


Team Udayavani, May 22, 2021, 5:35 PM IST

People who are over-buying

ಕೋಲಾರ: ಕೋವಿಡ್‌ ಸೋಂಕು ತಡೆಗೆ ಜಿಲ್ಲಾಡಳಿತ ಮೇ25ರ ಮಂಗಳವಾರ ಬೆಳಗ್ಗೆ 6 ಗಂಟೆಯವರೆಗೂ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ ಜಾರಿ ಮಾಡಿದೆ. ಈಹಿನ್ನೆಲೆಯಲ್ಲಿ ಮೂರೂವರೆ ದಿನಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಟ್ರಾಫಿಕ್‌ ಜಾಮ್‌ ಆಯಿತು.

ಶುಕ್ರವಾರ ಸಂಜೆಯಿಂದ ಕಠಿಣ ಲಾಕ್‌ಡೌನ್‌ಎಂಬ ಆತಂಕದ ನಡುವೆ ಸಾರ್ವಜನಿಕರು ಶುಕ್ರವಾರಬೆಳಗ್ಗೆ 6ರಿಂದ 10 ಗಂಟೆಯವರೆಗೂ ಮನೆಗೆಅಗತ್ಯವಾದ ದಿನಸಿ, ತರಕಾರಿ, ಮದ್ಯ ಮತ್ತಿತರ ಅಗತ್ಯವಸ್ತುಗಳನ್ನು ಖರೀದಿಗೆ ನೀಡಿದ್ದ ಅವಕಾಶಬಳಸಿಕೊಂಡ ಜನರು, ನಗರದ ಅಂಗಡಿಗಳ ಮುಂದೆ ಜಮಾಯಿಸಿದರು.

ಕೊರೊನಾ ನಿಯಮ ಗಾಳಿಗೆ:ಆರೋಗ್ಯ ಸೇವೆಗಳನ್ನುಹೊರತುಪಡಿಸಿ ಉಳಿದೆಲ್ಲಾವಹಿವಾಟುಮೂರೂವರೆದಿನ ಬಂದ್‌ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದಪ್ರಮುಖ ದಿನಸಿ ಮಾಲ್‌, ಸೂಪರ್‌ ಮಾರ್ಕೆಟ್‌ಗಳಮುಂದೆ ಜನರ ಉದ್ದುದ್ದ ಸಾಲುಗಳು ಕಂಡುಬಂದವು. ಅಂಗಡಿಗಳ ಮುಂದೆ ಸಾಮಾಜಿಕ ಅಂತರಮರೆತು ದಿನಸಿ, ತರಕಾರಿ ಖರೀದಿಗೆ ಜನರ ದಂಡುಮುಗಿ ಬಿದ್ದಿದ್ದು ಕಂಡು ಬಂತು.

ಕೆಲವು ಸೂಪರ್‌ಮಾರ್ಕೆಟ್‌ಗಳಲ್ಲಿ ಸಾಮಾಜಿಕ ಅಂತರದ ಎಚ್ಚರಿಕೆನೀಡುತ್ತಿದ್ದರೂ ಜನ ಇದನ್ನು ಲೆಕ್ಕಿಸದೇ ವಹಿವಾಟುನಡೆಸಿ ಆತಂಕ ಮೂಡಿಸಿದರು.ಮದ್ಯ ಖರೀದಿಗೂ ಕ್ಯೂ: ಮುಂದಿನ ಮೂರೂವರೆದಿನ ಮದ್ಯಖರೀದಿಗೆ ಅವಕಾಶ ನೀಡದ ಕಾರಣ, ಮದ್ಯದಂಗಡಿಗಳ ಮುಂದೆ ಜನರು ವಾಹನಗಳನ್ನು ನಿಲ್ಲಿಸಿಕೊಂಡುಖರೀದಿ ಕಾಯುತ್ತಿದ್ದ ದೃಶ್ಯಕಂಡು ಬಂತು.

ಟ್ರಾಫಿಕ್‌ ಜಾಂ: ದಿನಸಿ, ಅಗತ್ಯ ವಸ್ತುಗಳ ಖರೀದಿಭರಾಟೆ ನಡೆಯುವ ನಗರದ ಕಾಳಮ್ಮ ಗುಡಿಸಮೀಪದ ಅಮ್ಮವಾರಿಪೇಟೆ ವೃತ್ತದಲ್ಲಿ ಭಾರೀವಾಹನಗಳ ಸಾಲು, ಜನಸಂದಣಿ ಕಂಡು ಬಂತಲ್ಲದೇ,ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು.

ಈಸಂದರ್ಭದಲ್ಲಿ ಪೊಲೀಸರು ಲಾಠಿ ಹಿಡಿದು ಸಂಚಾರಸುಗಮಗೊಳಿಸಿದರು. ತರಕಾರಿ ಮಾರುಕಟೆ rಯನ್ನುನಗರದ ಜೂನಿಯರ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿಯೂ ಜನಜಂಗುಳಿ ಕಂಡುಬಂತು. ಜನ ಒಂದೇ ಬಾರಿಗೆ ದಿನಸಿ, ಅಗತ್ಯ ವಸ್ತುಗಳಖರೀದಿಗೆ ರಸ್ತೆಗಿಳಿದಿದ್ದರಿಂದಾಗಿ ನಗರದ ದೊಡ್ಡಪೇಟೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಗಳಲ್ಲಿ ಒತ್ತಡಕಂಡು ಬಂತು.

ನಗರಾದ್ಯಂತ ಬಂದೋಬಸ್ತ್: ಶುಕ್ರವಾರದ ಕಠಿಣ ಲಾಕ್‌ಡೌನ್‌ಗೆ ಸಿದ್ಧತೆ ನಡೆಸುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಶುಕ್ರವಾರ ಬೆಳಗ್ಗೆಯೇ ಪೊಲೀಸರು ರಸ್ತೆಗಿಳಿದಿದ್ದರು.ನಗರದ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೇ ವಿವಿಧ ತಾಲೂಕುಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವಶ್ರೀನಿವಾಸಪುರ, ಚಿಂತಾಮಣಿ, ಮುಳಬಾಗಿಲು

,ಚಿಕ್ಕಬಳ್ಳಾಪುರ ರಸ್ತೆಗಳಲ್ಲೂ ಪೊಲೀಸರ ಪಹರೆ ಹಾಕಲಾಗಿತ್ತು.ಲಾಠಿ ಹಿಡಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ನಿಲ್ಲಿಸಿ ಎಚ್ಚರಿಕೆ ಕೊಟ್ಟು ಕಳುಹಿಸುವ ಕೆಲಸವನ್ನು ಮಧ್ಯಾಹ್ನವೇ ಆರಂಭಿಸಿದರು.

ಈ ನಡುವೆ ಹೊರ ಜಿಲ್ಲೆಗಳಿಂದ ಬರುತ್ತಿದ್ದ ವಾಹನಗಳತಪಾಸಣೆಯನ್ನು ಮುಂದುವರಿಸಲಾಗಿತ್ತು. ಸಂಜೆ 6ಗಂಟೆ ನಂತರ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡುವಸಾಧ್ಯತೆಕಂಡು ಬಂತು.

ಮದುವೆ ಫಿಕ್ಸ್‌; ಬಟ್ಟೆ ಸಿಗುತ್ತಿಲ್ಲ: ಈ ನಡುವೆಈಗಾಗಲೇ ಮದುವೆ ಫಿಕ್ಸ್‌ ಆಗಿದ್ದು, ಮಧುವರರಿಗೆ,ಪೋಷಕರಿಗೆ ಬಟ್ಟೆ ಖರೀದಿಗೆ ಅವಕಾಶ ಸಿಗದೇಅನೇಕರು ಪರಿತಪಿಸುತ್ತಿದ್ದುದುಕಂಡು ಬಂತು. ಕೆಲವು ಪರಿಚಯಸ್ಥ ಬಟ್ಟೆ ಅಂಗಡಿಗಳವರು ಗ್ರಾಹಕರನ್ನು ಒಳಕರೆದುಕೊಂಡು ಬಾಗಿಲು ಮುಚ್ಚಿ ವಹಿವಾಟು ನಡೆಸುತ್ತಿದ್ದುದು ಸಹಾ ಕಂಡು ಬಂತು. ಇದೇ ಪರಿಸ್ಥಿತಿಚಿನ್ನದ ಅಂಗಡಿಗಳದ್ದು ಆಗಿದ್ದು, ಮದುವೆಗೆ ಅಗತ್ಯವಾದ ಆಭರಣ ಖರೀದಿಗೂ ಕರ್ಫ್ಯೂ,ಲಾಕ್‌ಡೌನ್‌ ಅಡ್ಡಿಯಾಗಿತ್ತು. ಈಗಾಗಲೇ ಕಠಿಣ ಲಾಕ್‌ಡೌನ್‌ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗಿಳಿದರೆವಾಹನಗಳನ್ನು ವಶಕ್ಕೆ ಪಡೆಯುವುದರ ಜತೆಗೆ ವಿಪತ್ತುನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿಯೂ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಟಾಪ್ ನ್ಯೂಸ್

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

ಕೆಜಿಎಫ್ ಎಸ್ಪಿ ಕಚೇರಿ ವರ್ಗಾವಣೆಗೆ ಪೊಲೀಸರ ಕುಟುಂಬದವರ ವಿರೋಧ

ನೂರಾರು ಪೊಲೀಸ್‌ ಕುಟುಂಬಗಳ ಮಹಿಳೆಯರು, ಮಕ್ಕಳಿಂದ ಎಸ್ಪಿ ಭೇಟಿ

ಮಹಾನ್‌ ನಾಯಕರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪಿಕರ್‌ ರಮೇಶ್‌ಕುಮಾರ್‌ ಟೀಕೆ

ವಚನಗಳಿಗೆ ಬೀಗ ಹಾಕಿ ಮಠಾಧಿಪತಿಗಳ ರಾಜಕೀಯ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.