Udayavni Special

ಬೆಮೆಲ್‌ ಖಾಸಗೀಕರಣ ವಿರೋಧಿಸಿ ಬೈಕ್‌ ರ್ಯಾಲಿ


Team Udayavani, Mar 13, 2021, 1:37 PM IST

ಬೆಮೆಲ್‌ ಖಾಸಗೀಕರಣ ವಿರೋಧಿಸಿ ಬೈಕ್‌ ರ್ಯಾಲಿ

ಕೋಲಾರ: ಜಿಲ್ಲೆಯ ಸಾರ್ವಜನಿಕ ಉದ್ಯಮವಾದ ಬೆಮೆಲ್‌ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಬೆಮೆಲ್‌ ನಿವೃತ್ತ ನೌಕರರು ಕೆಜಿಎಫ್‌ ನಗರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಬೈಕ್‌ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.

ಬೆಮೆಲ್‌ ನಿವೃತ್ತ ಕಾರ್ಮಿಕ ಜಿ.ಅರ್ಜುನನ್‌ ಮಾತನಾಡಿ, ಸಾರ್ವಜನಿಕ ಉದ್ದಿಮೆಯಾದ ಬೆಮೆಲ್‌ ಸಂಸ್ಥೆಯು 1964ರಲ್ಲಿ ಮಾತƒಸಂಸ್ಥೆಯಾದ ಎಚ್‌ಎಎಲ್‌ನಿಂದ ಬೇರ್ಪಟ್ಟಿತು. ರೈಲು ಕೋಚ್‌ ಗಳ ಉತ್ಪಾದನೆ, ಬಿಡಿಭಾಗಗಳ ಪೂರೈಕೆಗಾಗಿಬೆಂಗಳೂರಿನಲ್ಲಿ ಸ್ಥಾಪನೆ ಗೊಂಡಿತು. ನಂತರಕೆಜಿಎಫ್‌, ಮೈಸೂರು ಹಾಗೂ ಪಾಲಕ್ಕಾಡ್‌ನ‌ಲ್ಲಿ ಉತ್ಪಾದನಾ ಘಟಕ ವಿಸ್ತರಿಸುವ ಜತೆಗೆ ರಕ್ಷಣೆ, ರೈಲು, ಮೆಟ್ರೋ, ಗಣಿಗಾರಿಕೆ ಮತ್ತು ಮೂಲ ಸೌಕರ್ಯ ಹಾಗೂ ಏರೋಸ್ಪೇಸ್‌ ವಲಯ ಗಳಿಗೆ ಅಗತ್ಯವಾದ ಯಂತ್ರ ಮತ್ತು ವಾಹನ ಉತ್ಪಾದಿಸುತ್ತಿದೆ ಎಂದರು.

ದೇಶಾದ್ಯಂತ ಮಾರಾಟ ಜಾಲ ಹೊಂದಿದ್ದು ಉತ್ಕೃಷ್ಟ ಸೇವೆ ನೀಡುತ್ತಿರುವ ಸಂಸ್ಥೆಯನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದ್ದು ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಾರಂಭದಿಂದಲೂ ಲಾಭದಾಯಕವಾಗಿಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ಜತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಡ್‌ ಪಾವತಿ ಮಾಡುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಬೆಮೆಲ್‌ ಮೈಸೂರು ಘಟಕ 1984ರಲ್ಲಿ ಪ್ರಾರಂಭಗೊಂಡು ಸುಮಾರು 700 ಎಕರೆ ಪ್ರದೇಶದಲ್ಲಿ ಟ್ರಕ್‌, ಎಂಜಿನ್‌ ಹಾಗೂ ಏರೋ ಸ್ಪೇಸ್‌ ವಿಭಾಗಗಳನ್ನು ಹೊಂದಿದೆ. ಸದ್ಯ ಬೆಮೆಲ್‌ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರವು ಶೇ.54.03ರಷ್ಟು ಷೇರುಬಂಡವಾಳ ಹೊಂದಿದ್ದು, 2016ರ ನವೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26ರಷ್ಟು ಷೇರನ್ನುಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆಆರಂಭಿಸಿ, ಅದರ ಮುಂದುವರೆದ ಭಾಗವಾಗಿಸಂಸ್ಥೆಯ ಆಡಳಿತ ನಿರ್ವಹಣೆಯನ್ನಖಾಸಗಿಯವರಿಗೆ ವಹಿಸುತ್ತಾ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಬೆಮೆಲ್‌ಸಂಸ್ಥೆಯಲ್ಲಿ ಪ್ರಸ್ತುತ ಸಾವಿರಾರು ಕಾರ್ಮಿಕರುಸೇವೆ ಸಲ್ಲಿಸುತ್ತಿದ್ದು, ಖಾಸಗಿಕರಣದಿಂದ ಉದ್ಯೋಗಭದ್ರತೆಗೆ ಧಕ್ಕೆ ಉಂಟಾಗಲಿದೆ. ಅಲ್ಲದೆ, ಮೀಸಲಾತಿಆಧಾರದ ನೇಮಕ ಪ್ರಕ್ರಿಯೆಗಳು ಸ್ಥಗಿತಗೊಂಡುಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ ಎಂದರು.

ನಗರದಲ್ಲಿ ನಡೆದ ಬೈಕ್‌ ರ್ಯಾಲಿಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದರು. ಪ್ರತಿಭಟನೆನೇತೃತ್ವವನ್ನು ನಿವೃತ್ತ ಬೆಮೆಲ್‌ ನೌಕರ ಆರ್‌. ರಾಜಶೇಖರನ್‌, ವಿ.ಮುನಿರತ್ನಂ, ಅಶೋಕ್‌ಲೋನಿ, ಆರ್‌.ಶ್ರೀನಿವಾಸ್‌, ಜಯಶೀಲನ್‌ ಅ.ಕೃ.ಸೋಮಶೇಖರ್‌, ಟಿ.ಎಂ ವೆಂಕಟೇಶ್‌, ಎನ್‌ ಎನ್‌ ಶ್ರೀರಾಮ್‌, ವಿಜಯಕುಮಾರಿ, ಆಶಾ,ಭೀಮರಾಜ್‌, ನಾರಾಯಣರೆಡ್ಡಿ, ರಮಣ್‌ ಮತ್ತಿತರಿದ್ದರು.

ಟಾಪ್ ನ್ಯೂಸ್

gdfhdf

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದಕ್ಕೆ  

hdfhf

ದೇಶದಲ್ಲಿ ಕೋವಿಡ್ ಉಲ್ಬಣ : ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಕಹಗಜ

ಕೊಡಗು : ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ದುರ್ಮರಣ

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

Worship by the villagers for Ganapathi

ಉದ್ಭವ ಗಣಪತಿಗೆ ಗ್ರಾಮಸ್ಥರಿಂದ ಪೂಜೆ

DVG Theater

ಗಡಿ ಕನ್ನಡ ಭವನವಾದ ಡಿವಿಜಿ ರಂಗಮಂದಿರ

Action to respond to people’s problems

ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

fgdf

ಗ್ರಾಮಸ್ಥರಿಂದ ಬೆಳಗಾವಿ ಲೋಕಸಭೆ ಉಪಚುನಾವಣೆಯ ಮತದಾನ ಬಹಿಷ್ಕಾರ

gdfhdf

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದಕ್ಕೆ  

hdfhf

ದೇಶದಲ್ಲಿ ಕೋವಿಡ್ ಉಲ್ಬಣ : ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಕಹಗಜ

ಕೊಡಗು : ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ದುರ್ಮರಣ

18-16

ಕೋವಿಡ್‌ 2ನೇ ಅಲೆ: ಕಠಿಣ ಕ್ರಮಕ್ಕೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.