ಕೊನೆಗೂ ಹೊರೆ ಹೊತ್ತ ರಾಮೇಗೌಡ


Team Udayavani, Feb 28, 2021, 12:56 PM IST

ಕೊನೆಗೂ ಹೊರೆ ಹೊತ್ತ ರಾಮೇಗೌಡ

ಮಾಲೂರು: ತಾಲೂಕಿನ ಪ್ರಭಾವಿ ರಾಜಕಾರಣಿ ಮಾಸ್ತಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಇ.ರಾಮೇಗೌಡ ಅಧಿಕೃತ ವಾಗಿ ಎರಡನೇ ಬಾರಿಗೆ ಜೆಡಿಎಸ್‌ ಪಕ್ಷ ಸೇರಿದ್ದಾರೆ.

ಕಳೆದ ಐದಾರು ತಿಂಗಳುಗಳಿಂದ ತೆರೆ ಮರೆಯ ಕಸರತ್ತಾಗಿ ನಡೆಯುತ್ತಿದ್ದ ಪಕ್ಷ ಸೇರ್ಪಡೆ ಕಸರತ್ತಿಗೆ ಅಂತಿಮವಾಗಿ ತೆರೆ ಬಿದ್ದಿದ್ದು, ಬಿಡದಿ ಬಳಿಯಲ್ಲಿನ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರ ತೋಟದ ಮನೆಯಲ್ಲಿ ತಾಲೂಕಿನ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜೆಡಿಎಸ್‌ ಸೇರಿದ್ದಾರೆ.

ಮಾಜಿ ಶಾಸಕ ಎಚ್‌.ಬಿ. ದ್ಯಾವೀರಪ್ಪನವರ ನಂತರತಾಲೂಕಿನಲ್ಲಿ ಜನತಾ ಪರಿ ವಾರದ ಚುಕ್ಕಾಣಿ ಹಿಡಿಯಲುಸಾಧ್ಯವಾಗದ ರಾಜಕೀಯ ಪರಿಸ್ಥಿತಿ ಗಳಲ್ಲಿ ತಾಲೂಕಿನ ಜೆಡಿಎಸ್‌ ಅಧಿಕೃತಅಭ್ಯರ್ಥಿಯಾಗಿ 2013ರ ಚುನಾವಣೆಯಲ್ಲಿಶಾಸಕರಾದ ಕೆ.ಎಸ್‌.ಮಂಜುನಾಥಗೌಡ ಐದು ವರ್ಷಗಳ ಕಾಲ ಆಡಳಿತ ನೀಡಿದ್ದರಾದರೂ ನಂತರದ 2018 ಚುನಾವಣೆಯಲ್ಲಿಸೋಲು ಕಂಡ ನಂತರ ಕೆಲಕಾಲ ತಾಲೂಕಿನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರು. ನಂತರದ ಪುರಸಭೆ,ಗ್ರಾಪಂ ಚುನಾವಣೆಗಳಲ್ಲಿ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದ್ದ ಮಂಜುನಾಥಗೌಡರ ನಡೆ ಇನ್ನೂ ನಿಗೂಢವಾಗಿದೆ.

ಟಿಕೆಟ್‌ ಆಕಾಂಕ್ಷಿಯಾಗಿದ್ದರು: ಮಾಸ್ತಿ ಜಿಪಂ ಕ್ಷೇತ್ರದಿಂದ 2006 ಜಿಪಂ ಚುನಾವಣೆ ಯಲ್ಲಿ ಮಾಜಿ ಸಚಿವ ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ ಯವರ ಪ್ರಾಬಲ್ಯ ಹೆಚ್ಚಾಗಿದ್ದರೂ ಜಿಪಂಗೆ ಆಯ್ಕೆಯಾಗಿದ್ದ ಜಿ.ಇ.ರಾಮೇ ಗೌಡರು 2008 ರ ವಿಧಾನಸಭೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿ ವಿಫಲ ಪ್ರಯತ್ನ ನಡೆಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಂದು ಜೆಡಿಎಸ್‌ ಸೇರಿದ್ದ ರಾಮೇ ಗೌಡರು 2013 ವಿಧಾನಸಭಾ ಚುನಾವಣೆಗೆಅನೇಕ ಪಕ್ಷಗಳಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಕೊನೆಯಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 19,480 ಮತ ಪಡೆದು ಎಸ್‌.ಎನ್‌.ಕೃಷ್ಣಯ್ಯಶೆಟ್ಟಿಯವರ ಸೋಲಿಗೆ ಪ್ರಮುಖ ಕಾರಣರಾಗಿದ್ದರು.

2018ರ ಚುನಾವಣೆ ವೇಳೆಯಲ್ಲಿ ನಡೆದ ರಾಜಕೀಯ ದೃವೀಕರಣದಲ್ಲಿ ಮತ್ತೇ ಕಾಂಗ್ರೆಸ್‌ ಸೇರಿದ್ದ ರಾಮೇಗೌಡರು ಶಾಸಕ ಕೆ.ವೈ.ನಂಜೇಗೌಡರ ಬೆಂಬಲಕ್ಕೆ ನಿಂತಿದ್ದರು. ಕೆಲವೇ ದಿನಗಳಲ್ಲಿ ಎದುರಾಗಲಿರುವ ಜಿಪಂ ಮತ್ತು ತಾಪಂ ಚುನಾವಣೆ, 2023ರ ವಿಧಾನಸಭಾ ಚುನಾವಣೆಯ ಪ್ರಮುಖ ಆಕಾಂಕ್ಷಿಯಾಗಿರುವ ರಾಮೇಗೌಡರುಅಧಿಕೃತವಾಗಿ ಜೆಡಿಎಸ್‌ ಸೇರಿದ್ದಾರೆ. ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಡದಿಯ ಬಳಿಯಲ್ಲಿ ತೋಟದ ಮನೆಯಲ್ಲಿ ಜೆಡಿಎಸ್‌ಗೆ ಸೇರಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರೊಂದಿಗೆ ತಾಲೂಕು ಜೆಡಿಎಸ್‌ನ ಬಲ್ಲಹಳ್ಳಿ ನಾರಾಯಣಸ್ವಾಮಿ ಇದ್ದರು.

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ! ; ಜೆಡಿಎಸ್‌ ಪಕ್ಷಕ್ಕೆ ಜಿ.ಇ.ರಾಮೇಗೌಡರು ಸೇರ್ಪಡೆಯಾಗಿದ್ದು, ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಯಂದು ಘೋಷಣೆ ಮಾಡುವ ಸಂಕಲ್ಪ ಮಾಡಿದ್ದಾರೆ. ಮಾರ್ಚ್‌ ಅಂತ್ಯದ ವೇಳೆಗೆ ಜೆಡಿಎಸ್‌ ಯುವ ಬ್ರಿಗೇಡ್‌ ವತಿಯಿಂದ ನಿಖೀಲ್‌ಕುಮಾರ ಸ್ವಾಮಿ ಅವರ ಸಾರಥ್ಯದಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ ತಾಲೂಕಿನಲ್ಲಿ ಬೃಹತ್‌ ಸಮಾ ವೇಶ ನಡೆಸುವ ಸಿದ್ಧತೆ ನಡೆಸುತ್ತಿರುವು ದಾಗಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ವಿ.ಚಂದ್ರಶೇಖರಗೌಡ ತಿಳಿಸಿದ್ದಾರೆ.

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.