Shani Temple: 16 ಕೋಟಿ ವೆಚ್ಚದಲ್ಲಿ ಶನಿ ದೇಗುಲ ನಿರ್ಮಾಣ


Team Udayavani, Aug 20, 2023, 5:03 PM IST

Shani Temple: 16 ಕೋಟಿ ವೆಚ್ಚದಲ್ಲಿ ಶನಿ ದೇಗುಲ ನಿರ್ಮಾಣ

ಶ್ರೀನಿವಾಸಪುರ: ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾದ ಶ್ರೀ ಶನಿಮಹಾತ್ಮ (ಜ್ಯೇಷ್ಠಾದೇವಿ ಸಮೇತ ಶ್ರೀ ಶನೈಶ್ಚರ ಸ್ವಾಮಿ) ದೇವಾಲ ಯ ತಾಲೂಕಿನ ಪುಂಗನೂರು ಕ್ರಾಸ್‌ನಲ್ಲಿದ್ದು ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಗಳಿಂದ ಸಾವಿರಾರು ಭಕ್ತರು ಶ್ರಾವಣ ಶನಿವಾರಗಳಂದು ಬರುವ ಜತೆಗೆ ಕಾರ್ಯಕ್ರಮ ನಡೆಸಿಕೊಡುತ್ತಿ ರುವ ಈ ಸ್ಥಳದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮ ಸೇರಿ ಸುಮಾರು 16 ಕೋಟಿಗೂ ಹೆಚ್ಚು ರೂ.ವೆಚ್ಚದಲ್ಲಿ ನೂತನ ದೇವಾಲಯ ಕಳೆದ 4 ವರ್ಷ ದಿಂದ ನಿರ್ಮಾಣ ಆಗುತ್ತಿರು ವುದು ಕಂಡು ಬಂದಿದೆ.

ಶ್ರೀನಿವಾಸಪುರ ಪಟ್ಟಣದಿಂದ 3 ಕಿ.ಮೀ.ದೂರದಲ್ಲಿ ರುವ ಈ ದೇವಾಲಯ ಆಂಧ್ರಪ್ರದೇಶದ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡು ನಾಲ್ಕು ರಸ್ತೆಗಳ ಸಂಗ ಮವಾದ ವೃತ್ತದಲ್ಲಿ ಜ್ಯೇಷ್ಟಾದೇವಿ ಸಮೇತ ಶ್ರೀ ಶನೈಶ್ಚರಸ್ವಾಮಿ ದೇವಾಲಯವಿದೆ. ಇದು ಸುಮಾರು ವರ್ಷಗಳ ಮೇಲ್ಪಟ್ಟು ನಾಗದೇನಹಳ್ಳಿ ದಾನಿಗಳಾದ ಕಾಳಮ್ಮ ಮತ್ತು ಶ್ರೀ ಕಂಠಾಚಾರಿ ಅವರು ನೀಡಿದ ಸ್ಥಳದಲ್ಲಿ ಹಿಂದಿನ ತಲೆಮಾರುಗಳ ಶೀಗಹಳ್ಳಿ ವೆಂಕಟಸ್ವಾವಿ ುರೆಡ್ಡಿ, ಕೆ.ಪಿ.ವೆಂಕಟಸ್ವಾಮಿರೆಡ್ಡಿ, ಬಿ.ಸಿ.ನಾರಾಯಣ ಸ್ವಾಮಿ, ಎನ್‌.ಶ್ರೀರಾಮರೆಡ್ಡಿ ಕೊತ್ತೂರು ನಾರಾಯಣ ಸ್ವಾಮಿ, ನೀಲಟೂ ರು ಲಕ್ಷ್ಮಣನವರು ಸೇರಿದಂತೆ ಇತರರ ಸಹಕಾರದಲ್ಲಿ 1973ರಲ್ಲಿ ಸದರಿ ಜಾಗದಲ್ಲಿ ಮೇಲ್ಕಂಡ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದ್ದು ಇಲ್ಲಿನ ಸೇವಾಕರ್ತರಿಂದ ತಿಳಿದು ಬರುತ್ತದೆ.

16 ಕೋಟಿ ವೆಚ್ಚದಲ್ಲಿ ದೇಗುಲ ನಿರ್ಮಾಣ:   ಮುಖ್ಯವಾಗಿ ಸದರಿ ದೇವಾಲಯ ಅಭಿವೃದ್ಧಿಗಾಗಿ ಸಮಿತಿ ಮಾಡಿಕೊಂಡು ಅನೇಕ ಅಭಿವೃದ್ಧಿ ಕೆಲಸ ನಡೆಸಲಾಗುತ್ತಿದೆ. ಸದರಿ ದೇವಾಲಯದ ಸಂಕೀರ್ಣ ದಲ್ಲಿ ಎರಡೂವರೆ ಎಕರೆ ವಿಸ್ತೀರ್ಣವಿದ್ದು ಈಗಾಗಲೇ ಶ್ರೀ ಸೀತಾರಾಮ ಕಲ್ಯಾಣ ಮಂಟಪ, ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಪೂಜೆ ಸಲ್ಲಿಸಲು ಬರುವ ಭಕ್ತರಿಗೆ ನೀರಿನ ವ್ಯವಸ್ಥೆ, ಯಾತ್ರಿಕರು ತಂಗಲು ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಸೇವಾಕರ್ತರು ಹೇಳುತ್ತಾರೆ. ಸಂಬಂಧಿಸಿದಂತೆ ನೂತನ ದೇವಾಲಯ ನಿರ್ಮಾಣ ಮಾಡ ಲು ಈ ಭಾಗದ ನಿವಾಸಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ತಮ್ಮ ಧರ್ಮ ಪತ್ನಿ ಉಷಾ ನಂದಿನಿ ಜೊತೆ ಲೋಕಸೇವಾ ಟ್ರಸ್ಟ್‌ ಮಾಡಿಕೊಂಡು ಸುಮಾರು 16 ಕೋಟಿಗೂ ಮೇಲ್ಟಟ್ಟು ವೆಚ್ಚದಲ್ಲಿ ದಾನಿಗಳ ಸಹಕಾರದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ದೇಗು ಲಕ್ಕೆ ಭಕ್ತರ ದಂಡು:  ಸದರಿ ದೇವಾಲಯ ಸಂಕೀರ್ಣದಲ್ಲಿ ಶ್ರೀ ಸುಬ್ರಮಣ್ಯಸ್ವಾಮಿ, ಸತ್ಯನಾರಾಯಣ, ಈಶ್ವರ, ಅಯ್ಯಪ್ಪಸ್ವಾಮಿ, ಬೈರವೇಶ್ವರ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಶ್ರಾವಣ ಶನಿವಾರ ಪ್ರಾಮುಖ್ಯತೆ ಪಡೆದು ಕೊಂಡಿದೆ. ಪ್ರತಿ ವರ್ಷ ಶ್ರಾವಣ ಶನಿವಾರದಂದು ಭಕ್ತರು 10 ರಿಂದ 15 ಸಾವಿರ ಮೇಲ್ಪಟ್ಟು ಸೇರಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಇಲ್ಲಿಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ತಮಿಳುನಾಡು ಭಾಗಗಳಿಂದ ತಮ್ಮ ಅಭೀಷ್ಟೆ ನೆರವೇರಲು ಇಲ್ಲಿ ಅನ್ನದಾನ ಮಾಡುವುದು. ದೇವರಿಗೆ ವಿಶೇಷ ಕಾಣಿಕೆ ಸರ್ಮಪಿಸುವುದು ಹಾಗೂ ವಿಶೇಷ ಪೂಜಾ ಕಾರ್ಯ ಕ್ರಮ ನಡೆಸಿಕೊಂಡು ಬರಲಾಗುತ್ತಿದೆ.

ಶ್ರಾವಣ ಶನಿವಾರದಂದು ವಿಶೇಷ ಪೂಜೆ:   ಪ್ರತಿದಿನ ಆಭಿಷೇಕ ಪೂಜೆ ನಡೆಯುತ್ತದೆ. ಹಾಗೆಯೇ ಪ್ರತಿ ತಿಂಗಳು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ಹಾಗೂ 37 ವರ್ಷಗಳಿಂದ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವುದು ಪ್ರಗತಿ ಬೆಳವಣಿಗೆ ಆಗಿದೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರ ಸುಮಾರು 15 ಸಾವಿರ ಮಂದಿ ಮೇಲ್ಪಟ್ಟು ಬರುವ ಭಕ್ತರಿಗೆ ಅನ್ನದಾನ ಹಾಗೂ ರಥೋತ್ಸವ ನಡೆಸುವ ಸಮಯದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಮಗ್ರ ಅಭಿವೃದ್ಧಿಗಾಗಿ ದೇವಾಲಯದ ಸುತ್ತಮುತ್ತಲಿನ ಭಕ್ತರು ಸಹಕಾರ ನೀಡುತ್ತಾ ಬಂದಿದ್ದಾರೆ. ಶ್ರಾವಣ ಮಾಸಕ್ಕೆ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ವಿವಿಧ ರಾಜ್ಯಗಳ ಜನ ಬಂದು ದೇವರಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ದೇವಾಲಯ ಸಮಗ್ರ ಅಭಿವೃದ್ಧಿಗಾಗಿ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಲೋಕಸೇವಾ ಟ್ರಸ್ಟ್‌ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದು ದೇವಾಲಯ ಸಮಿತಿ ಸದಸ್ಯರು ಇತರರ ಸಹಕಾರದಲ್ಲಿ ಇಲ್ಲಿಯ ಸ್ವಾಮಿ ಸೇವೆ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ ಶ್ರಾವಣ ಶನಿವಾರಗಳ ಕಾರ್ಯ ಕ್ರಮಗಳು ವಿಶೇಷ ಕಾರ್ಯಕ್ರಮ ಗಳೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ.-ವೆಂಕಟರೆಡ್ಡಿ,ದೇವಾಲಯ ಸಮಿತಿ ಸದಸ್ಯರು 

ದಾನಿಗಳು ನೀಡಿದ ಸ್ಥಳದಲ್ಲಿ ಇಂದು ವಿವಿಧ ದೇವಾಲಯಗಳ ನಿರ್ಮಾಣ ಮಾಡಿ ಪೂಜಾ ಕಾರ್ಯಕ್ರಮ, ರಥೋತ್ಸವ, ಸತ್ಯ ನಾರಾಯಣ ಪೂಜೆ, ಶ್ರಾವಣ ಶನಿವಾರ ಕಾರ್ಯಕ್ರಮಗಳು, ನಿತ್ಯ ಪೂಜೆ ನಡೆಸಲಾಗುತ್ತಿದೆ. ಮುಖ್ಯವಾಗಿ ನೂತನವಾಗಿ 16 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ದೇಗುಲ ನಿರ್ಮಾಣದ ನಂತರ ಪ್ರತಿ ಶನಿವಾರ ಅನ್ನದಾನ ನಡೆಸುವ ಗುರಿ ಹೊಂದಲಾಗಿದೆ.-ವಿ.ರಘುನಾಥರೆಡ್ಡಿ,ದೇವಾಲಯ ಸಮಿತಿ ಖಜಾಂಚಿ

-ಕೆ.ವಿ.ನಾಗರಾಜ್‌

ಟಾಪ್ ನ್ಯೂಸ್

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

abh

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

Hubli ಘಟನೆಗಳಿಗೆ ಪೋಲಿಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

Hubli ಘಟನೆಗಳಿಗೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.