Udayavni Special

ಗೊಂದಲದ ಮಧ್ಯೆ 24ಕೆ ಶಿಕ್ಷಕರ ದಿನಾಚರಣೆ

Team Udayavani, Sep 20, 2019, 4:15 PM IST

Udayavani Kannada Newspaper

ಕೆಜಿಎಫ್: ಶಿಕ್ಷಕರ ದಿನಾಚರಣೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಮತ್ತು ಶಿಕ್ಷಕರ ಸಂಘಟನೆಗಳ ನಡುವಿನ ವೈಮನಸ್ಯ ಇನ್ನೂ ಮುಂದುವರಿದಿದೆ. ಇದಕ್ಕೆ ಇಲ್ಲಿನ ಬೆಮಲ್‌ ನಗರದಲ್ಲಿ ನಡೆದ ಪ್ರತಿಭಾ ಕಾರಂಜಿ ಸಾಕ್ಷಿಯಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಎಲ್ಲಾ ಕಡೆ ಶಿಕ್ಷಕರ ದಿನ ಆಚರಣೆ ಮಾಡಿದ್ದರೂ, ಇಲ್ಲಿ ಮಾತ್ರ ಮಾಡಿಲ್ಲ. ಯಾವುದೇ ರೀತಿಯ ಸಹಕಾರ ನೀಡದೆ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಇಒ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ದಿನಾಂಕ ಬದಲು: ಪ್ರತಿಭಾ ಕಾರಂಜಿ ಮುನ್ನ ಜಿಪಂ ಸದಸ್ಯೆ ಅಶ್ವಿ‌ನಿ, ಆಹ್ವಾನ ಪತ್ರಿಕೆ ನೀಡುವಂತೆ ಅಶೋಕ್‌ ಅವರನ್ನು ಕೇಳಿದರು. ಶಿಷ್ಠಾಚಾರ ಇಲ್ಲದೆ, ಆಹ್ವಾನ ಪತ್ರಿಕೆ ತಯಾರು ಮಾಡಲಾಗಿದೆ. ಶಿಕ್ಷಕರ ದಿನಾಚರಣೆ  ಯನ್ನು ರೆಡ್ಡಿ ಕಲ್ಯಾಣ ಮಂಟಪದಲ್ಲಿ ಮಾಡಬೇಕೆಂದು ತೀರ್ಮಾನವಾಗಿದ್ದರೂ, ಬೆಮಲ್‌ನಲ್ಲಿ ಮಾಡಲು ಮುಂದಾಗಿದ್ದಾರೆ. ದಿನಾಂಕವನ್ನೂ ಬದಲು ಮಾಡಿದ್ದಾರೆ ಎಂದು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು.

ಒಪ್ಪಿಗೆ ನೀಡಿದ್ದಾರೆ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಶಿಕ್ಷಕರ ದಿನಾಚರಣೆ ಬಗ್ಗೆ ವಿವರ ನೀಡಿದರು. ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಆದರೆ, ಬಿಇಒ ಬೇಕಾಬಿಟ್ಟಿ ಮಾಡಿದ್ದಾರೆ ಎಂದು ದೂರಿದರು. ಜಿಪಂ ಸದಸ್ಯೆ ಅಶ್ವಿ‌ನಿ ಮಾತನಾಡಿ, ಬೇಕಾಬಿಟ್ಟಿ ಮಾಡುವುದಾದರೆ ನಾನು ಸಮ್ಮನಿರುವುದಿಲ್ಲ ಎಂದು ಅಶೋಕ್‌ ಅವರ ಮೇಲೆ ಹರಿಹಾಯ್ದರು. ರೆಡ್ಡಿ ಕಲ್ಯಾಣ ಮಂಟಪ ಸಿಗಲಿಲ್ಲ. ಆದ್ದರಿಂದ ಬೆಮಲ್‌ ಕಲಾಕ್ಷೇತ್ರದಲ್ಲಿ ಮಾಡಲು ಕೇಳಿದೆ. ಅದಕ್ಕೆ ಎಂಎಲ್‌ಎ ಒಪ್ಪಿಗೆ ನೀಡಿ ದ್ದಾರೆ ಎಂದು ಅಶೋಕ್‌ ತಿಳಿಸಿದರು.

ಆಹ್ವಾನ ಪತ್ರಿಕೆ ನೀಡಿಲ್ಲ: ಮುಖಂಡ ವಿನೋದ್‌ ಕುಮಾರ್‌ ಮಾತನಾಡಿ, ನಮ್ಮ ಸಂಘಟನೆಗಳು ದುಡ್ಡು ಹಾಕಿ ಶಿಕ್ಷಕರ ದಿನಾಚರಣೆ ಮಾಡುತ್ತೇವೆ. ನಾವು ನಮ್ಮ ಶಾಸಕರ ಉಪಸ್ಥಿತಿಯಲ್ಲಿ ಮಾಡುತ್ತಿದ್ದೇವು. ಊಟದ ವ್ಯವಸ್ಥೆ ಶಾಸಕರೇ ಮಾಡುತ್ತಿದ್ದರು. ಬಿಇಒ ಇದುವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ. 20 ವರ್ಷಗಳ ಇತಿಹಾಸದಲ್ಲಿ ಇಂತಹ ಆಹ್ವಾನ ಪತ್ರಿಕೆ ಮಾಡಿಲ್ಲ ಎಂದು ಬಿಇಒ ಮೇಲೆ ದೂರಿದರು.  ಅವಮಾನ ಮಾಡುವ ಉದ್ದೇಶ: ಶಿಕ್ಷಕರ ದಿನಾಚರಣೆ ನಮ್ಮ ಹಕ್ಕು. ಬಿಇಒ ಕಚೇರಿಯಿಂದ ಹತ್ತು ಸಾವಿರ ರೂ. ಕೊಡುತ್ತಿದ್ದರು. ಮಿಕ್ಕ ಹಣವನ್ನು ನಾವೇ ಹಾಕಿ ಕೊಂಡು ಮಾಡುತ್ತಿದ್ದೆವು. ಬಿಇಒ ಎಲ್ಲಾ ಶಿಕ್ಷಕರ ಸಂಘ ಟನೆಗಳಿಗೆಅವಮಾನ ಮಾಡುವ ಉದ್ದೇಶವನ್ನೇ ಹೊಂದಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲದೆ ಗಣ್ಯರನ್ನು ಯಾವ ಮುಖ ಇಟ್ಟುಕೊಂಡು ಕರೆಯುವುದು ಎಂದು ತರಾಟೆಗೆ ತೆಗೆದುಕೊಂಡರು.

ಅವಮಾನ ಆಗುವುದು ಬೇಡ: ಮಧ್ಯಪ್ರವೇಶಿಸಿ ಮಾತನಾಡಿದ ಅಶ್ವಿ‌ನಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಮ್ಮ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಪದಾಧಿಕಾರಿಗಳನ್ನು, ಶಿಕ್ಷಕರನ್ನು ಅವಮಾನ ಮಾಡುವ ರೀತಿಯಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಬೇಡ. ನಿಮ್ಮ

ಧೋರಣೆಯನ್ನು ಇತರರ ಮೇಲೆ ಹೇರಬೇಡಿ. ಕೆಜಿಎಫ್ ಬಿಟ್ಟು ಬೇರೆಡೆ ಯಾಕೆ ಮಾಡುತ್ತಿದ್ದೀರಿ ಎಂದು ಅಶೋಕ ಅವರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರ ದಿನಾಚರಣೆ ಇನ್ನು ಒಂದೇ ದಿನ ಇದೆ.

ಯಾವುದೇ ವ್ಯವಸ್ಥೆ ಆಗಿಲ್ಲ. ಶಿಕ್ಷಕರಿಲ್ಲದೆ ಶಿಕ್ಷಕರ ದಿನಾ ಚರಣೆ ಮಾಡುತ್ತೀರ ಮಾಡಿ ಎಂದು ಅಶ್ವಿ‌ನಿ

ಶಿಕ್ಷಕರ ಸಂಘದ ಪ್ರತಿನಿಧಿಗಳ ಪರವಾಗಿ ಮಾತನಾಡಿದರು.

ಖಂಡನೆ: ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಧೋರಣೆಯನ್ನು ಜಿಪಂ ಸದಸ್ಯ ಬಿ.ವಿ.ಮಹೇಶ್‌ ಕೂಡ ಖಂಡಿಸಿದರು. ನೀವು ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ದಿನಾಚರಣೆ ಮಾಡಬೇಕು. ತಹಶೀಲ್ದಾರರನ್ನು ಖುದ್ದಾಗಿ ಭೇಟಿ ಮಾಡಿ ಎಲ್ಲರನ್ನೂ

ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ದಿನಾಚರಣೆ ಮಾಡಿ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ ಮಾತನಾಡಿ, ಶಿಕ್ಷಕರ ದಿನಾಚರಣೆಗೆ ನಾವು ಬರಲ್ಲ ಎಂದರು. ನಂತರ ಸೆ.24ರಂದು ಶಿಕ್ಷಕರ ದಿನವನ್ನು ರಾಬರ್ಟಸನ್‌ಪೇಟೆಯಲ್ಲಿ ಮಾಡಲು ತೀರ್ಮಾನಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mask-bareyuvudu

ಮಾಸ್ಕ್ ಧರಿಸಿ ಬರೆಯುವುದು ಅಭ್ಯಾಸ ಮಾಡಿ

kodi-nasha

ಕೋಡಿ ನಾಶಕ್ಕೆ ಯತ್ನ: ಆಕ್ರೋಶ

grama-abhivruddi

ಗ್ರಾಮದ ಅಭಿವೃದ್ಧಿಗೆ ಸಹಕರಿಸಿ

scrap vech

20 ವರ್ಷಗಳಾದ್ರೂ ವಿಲೇವಾರಿ ಮಾಡಿಲ್ಲ

matukate

ಮಾತುಕತೆ ಮೂಲಕ ‌ಸಮಸ್ಯೆ ಬಗೆಹರಿಸಿಕೊಳ್ಳಿ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.