ಟೋಲ್‌ಗೇಟ್‌ನಲ್ಲಿ ಇನ್ಮುಂದೆ ಫಾಸ್ಟ್ಯಾಗ್


Team Udayavani, Nov 24, 2019, 1:32 PM IST

kopala-tdy-1

ಕೊಪ್ಪಳ: ಕೇಂದ್ರ ಸರ್ಕಾರವು ಡಿ. 1ರಿಂದ ಎಲ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್‌ಗ‌ಳಲ್ಲಿ ಫಾಸ್ಟ್ಯಾಗ್ ಅಳವಡಿಕೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮೂರು ಟೋಲ್‌ಗೇಟ್‌ ಇದ್ದು ಇವುಗಳಲ್ಲಿ ಶೇ. 30ರಷ್ಟು ವಾಹನಗಳು ಈಗಾಗಲೇ ಫಾಸ್ಟ್ಯಾಗ್ ಅಳವಡಿಸಿಕೊಂಡಿವೆ. ಇನ್ನೂ ಶೇ. 70ರಷ್ಟು ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಬಳಸಲೇ ಬೇಕಿದೆ.

ಹೌದು. ಕೇಂದ್ರದ ಮೋದಿ ಸರ್ಕಾರವು ಡಿಜಿಟಲೀಕರಣದ ವ್ಯವಸ್ಥೆಗೆ ಒತ್ತು ನೀಡಲು ವಿವಿಧ ಯೋಜನೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ತರುತ್ತಿವೆ. ಜೊತೆಗೆ ದೇಶದ ಜನತೆ ನಿತ್ಯ ಕ್ಯಾಶ್‌ಲೆಸ್‌ ವಹಿವಾಟು ನಡೆಸಲು ಒತ್ತು ನೀಡುತ್ತಿದ್ದಾರೆ. ಈಗಾಗಲೇ ಇದಕ್ಕೆ ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಗೇಟ್‌ಗಳು ಹೊರತಾಗಿಲ್ಲ. ನಿತ್ಯ ವಿವಿಧ ಟೋಲ್‌ಗ‌ಳ ಮೂಲಕ ಲಕ್ಷಾಂತರ ವಾಹನಗಳು ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಮಾಡುತ್ತಿವೆ. ಮೊದಲೆಲ್ಲ ಟೋಲ್‌ಗ‌ಳಲ್ಲಿ ವಾಹನ ಚಾಲಕರು, ಮಾಲೀಕರು ಹಣ ನೀಡಿ ಟೋಲ್‌ ರಸೀದಿ ಪಡೆದು ಸಂಚಾರ ನಡೆಸುತ್ತಿದ್ದರು. ಜಿಲ್ಲೆಯ ಮೂರು ಟೋಲ್‌ ಗೇಟ್‌ಗಳಲ್ಲೂ ಈ ಇದೇ ಪದ್ಧತಿಯಿತ್ತು. ಕೇಂದ್ರ ಸರ್ಕಾರ 2017ರ ಆಗಸ್ಟ್‌ ತಿಂಗಳಲ್ಲಿ ಫಾಸ್ಟ್ಯಾಗ್ ಪದ್ಧತಿ ಜಾರಿ ಮಾಡಿದೆ. ಆದರೆ ಅದು ಅಷ್ಟೊಂದು ಪರಿಣಾಮಕಾರಿ ಜಾರಿಯಾಗಿರಲಿಲ್ಲ. ಈಗ ಫಾಸ್ಟ್ಯಾಗ್ ಮೂಲಕವೇ ಟೋಲ್‌ ಪಾವತಿಗೆ ದಿಟ್ಟ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ವಾಹನ ಸವಾರರು, ಮಾಲೀಕರು ಅನಿವಾರ್ಯವಾಗಿ ಫಾಸ್ಟ್ಯಾಗ್ ಬಳಕೆ ಮಾಡಲೇಬೇಕಿದೆ.

ಕೊಪ್ಪಳ ಜಿಲ್ಲೆಯಲ್ಲಿ ಹಿಟ್ನಾಳ, ಶಹಪುರ ಹಾಗೂ ಕುಷ್ಟಗಿ ತಾಲೂಕಿನ ವಣಗೇರಿ ಸಮೀಪ ಮೂರು ಕಡೆಯಲ್ಲಿ ಟೋಲ್‌ ಗೇಟ್‌ಗಳಿವೆ. ಇದರಲ್ಲಿ ಹಿಟ್ನಾಳ ಟೋಲ್‌ ಮೂಲಕ ನಿತ್ಯ 10 ಸಾವಿರ, ಶಹಪೂರ ಟೋಲ್‌ ಮೂಲಕ 5 ಸಾವಿರ, ವಣಗೇರಿ ಟೋಲ್‌ ಮೂಲಕ 6 ಸಾವಿರ ವಾಹನಗಳು ಸಂಚಾರ ನಡೆಸುತ್ತಿವೆ. ಇಲ್ಲಿ ಕಳೆದ ವರ್ಷವೇ ಫಾಸ್ಟ್ಯಾಗ್ ಅಳವಡಿಕೆ ಮಾಡಲಾಗಿದ್ದು, ಪ್ರತಿ ಟೋಲ್‌ನಲ್ಲಿ ಪ್ರತಿ ನಿತ್ಯ ಶೇ. 30ರಷ್ಟು ವಾಹನ ಚಾಲಕರು ಫಾಸ್ಟ್ಯಾಗ್ ಬಳಕೆ ಮಾಡುತ್ತಿದ್ದಾರೆ. ಇನ್ನೂ ಶೇ. 70ರಷ್ಟು ಜನ ಫಾಸ್ಟ್ಯಾಗ್ ಬಳಕೆ ಮಾಡಬೇಕಿದೆ.

ಒಂದು ಕ್ಯಾಶ್‌ ಗೇಟ್‌: ಮೂರು ಟೋಲ್‌ಗೇಟ್‌ಗಳಲ್ಲಿ ಒಂದೊಂದು ಗೇಟ್‌ನಲ್ಲಿ ಮಾತ್ರ ನಗದು ಪಡೆಯುವ ವ್ಯವಸ್ಥೆ ನಡೆದಿದೆ. ಇಲ್ಲಿಗೆ ಬರುವ ವಾಹನ ಸವಾರರು ಫಾಸ್ಟ್ಯಾಗ್ ಇಲ್ಲದೇ ಇದ್ದರೆ, ಅಂತಹ ವಾಹನಕ್ಕೆ ನಗದು ಪಡೆದು ರಸೀದಿ ನೀಡಿ ಬಿಡಲಾಗುತ್ತಿದೆ. ಕೆಲವರು ಫಾಸ್ಟ್ಯಾಗ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದರೆ, ಟ್ಯಾಗ್‌ನಲ್ಲಿ ಹಣ ಖಾಲಿಯಾಗಿದ್ದರೆ, ಖಾತೆಯಲ್ಲಿ ಹಣ ಇಲ್ಲದೇ ಇದ್ದವರಿಗೆ ಅಂತಹ ವಾಹನಗಳಿಗೆ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಒಂದು ಗೇಟ್‌ ಮೂಲಕ ವಾಹನ ಬಿಡಲಾಗುತ್ತದೆ. ಸದ್ಯಕ್ಕೆ ಮೂರರಲ್ಲಿ ಒಂದೊಂದು ಗೇಟ್‌ ಚಾಲ್ತಿಯಲ್ಲಿವೆ. ಟೋಲ್‌ ಸಿಬ್ಬಂದಿ ವಾಹನ ಸವಾರರಿಗೆ ಮಾಹಿತಿ ನೀಡುತ್ತಿದ್ದಾರೆ.

ಎಲ್ಲ ಬ್ಯಾಂಕ್‌ನಲ್ಲೂ ಟ್ಯಾಗ್‌ ಲಭ್ಯ: ದ್ವಿಚಕ್ರ ಹೊರತುಪಡಿಸಿ ತ್ರಿಚಕ್ರ, ಕಾರ್‌, ಲಾರಿ ಸೇರಿ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಕೆ ಮಾಡಬೇಕು. ಇದೊಂದು ರೀತಿ ವ್ಯಾಲೆಟ್‌ ಅಕೌಂಟ್‌ ಇದ್ದ ಹಾಗೆ, ಟ್ಯಾಗ್‌ನ ಖಾತೆಯಿಂದ ಟೋಲ್‌ ಶುಲ್ಕ ಕಡಿತವಾಗುತ್ತದೆ. ಟ್ಯಾಗ್‌ ಗೆ ವಾಹನ ಮಾಲಿಕರು ಸಂಚಾರಕ್ಕೆ ಅನುಗುಣವಾಗಿ ರಿಚಾರ್ಜ್‌ ಅಥವಾ ಹಣ ವರ್ಗಾವಣೆ ಮಾಡಿಕೊಳ್ಳಬೇಕು. ಎಲ್ಲ

ಬ್ಯಾಂಕ್‌ನಲ್ಲಿ ಫಾಸ್ಟ್ಯಾಗ್ ಲಭ್ಯ. ವಾಹನ ಮಾಲಿಕ ತನ್ನ ಬ್ಯಾಂಕ್‌ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್‌ ಮಾಡಿಸಬಹುದು. ಇಲ್ಲವೇ ಪ್ರತ್ಯೇಕ ಹಣ ಜಮೆ ಮಾಡಿಕೊಳ್ಳಬಹುದು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರವೇ ಉಚಿತವಾಗಿ ಫಾಸ್ಟ್ಯಾಗ್ ಕೊಡಲು ಮುಂದಾಗಿದೆ.

ತಲೆಬಿಸಿ ಮಾಡಿಕೊಂಡ ಜನ!:  ಕಲ್ಯಾಣ ಕರ್ನಾಟಕ ಭಾಗದಲ್ಲಿನ ಜನತೆ ಡಿಜಿಟಲೀಕರಣಕ್ಕೆ ಅಷ್ಟೊಂದು ಹೊಂದಿಕೊಂಡಿಲ್ಲ. ಫಾಸ್ಟ್ಯಾಗ್ ಎಂದು ಎಲ್ಲೆಡೆ ಹೇಳಲಾಗುತ್ತಿದ್ದು, ಟೋಲ್‌ ಮುಂದೆ ವಾಹನ ಮಾಲಿಕರು ತಲೆ ಬಿಸಿ ಮಾಡಿಕೊಂಡು ಹೇಗೆ ಮಾಡಿಕೊಳ್ಳುವುದು ಎನ್ನುತ್ತಿದ್ದಾರೆ. ಕೆಲವರು ಟೋಲ್‌ ಸಿಬ್ಬಂದಿ ಸಹಾಯ ಪಡೆಯುತ್ತಿದ್ದಾರೆ. ಹಳ್ಳಿ ಭಾಗದ ಜನರಂತೂ ಇದೊಳ್ಳೆ ಪಜೀತಿ ಎಂದೆನ್ನುತ್ತಲೇ ಫಾಸ್ಟ್‌ಟ್ಯಾಗ್‌ ಪಡೆಯಲು ಯೋಚಿಸುತ್ತಿದ್ದಾರೆ. ಇನ್ನೂ ಟೋಲ್‌ ಗಳ ಸುತ್ತಲಿನ ಹಳ್ಳಿಗಳ ಜನರು ನಿತ್ಯವೂ ಗೇಟ್‌ ಮೂಲಕ ಸಂಚಾರ ಮಾಡಬೇಕಿದ್ದರಿಂದ ಫಾಸ್ಟ್ಯಾಗ್ ತೆಲೆನೋವು ತಂದಿಟ್ಟಿದೆ.

 

-ದತ್ತು ಕಮ್ಮಾರ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.