ಗುಂಡಿಗೆ ಬಿದ್ದು ಯುವತಿ ಸಾವು : ಕಾಂಗ್ರೆಸ್ ಕಾರ್ಯಕರ್ತೆಯ ಟೀಕೆಗೆ ಸಚಿವ ಸಿ.ಟಿ.ರವಿ ಖಂಡನೆ

Team Udayavani, Nov 5, 2019, 7:17 PM IST

ಗಂಗಾವತಿ: ರಸ್ತೆಯಲ್ಲಿದ್ದ ಗುಂಡಿಯಿಂದ ಅಪಘಾತಕ್ಕಿಡಾಗಿ ಯುವತಿ ಮೃತಪಟ್ಟ ಘಟನೆ ಅತ್ಯಂತ ದುಃಖ್ಖಕರವಾಗಿದ್ದು ಇದನ್ನೆ ಇಟ್ಟುಕೊಂಡು ಸಂಬಂಧವಿಲ್ಲದ ದೂರದ ರಾಮನಗರ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತಮ್ಮ ಬಗ್ಗೆ ಟೀಕೆ ಮಾಡಿದ್ದಕ್ಕೆ ಸಚಿವ ಸಿ.ಟಿ.ರವಿ ಖಂಡಿಸಿದ್ದಾರೆ. ಅವರು ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದಯವಾಣಿ ಜತೆ ಮಾತನಾಡಿದರು.

ರಾಜಕೀಯಕ್ಕಾಗಿ ಟೀಕೆ ಮಾಡದೇ ಸಂವೇದನೆಯಿಂದ ಟೀಕಿಸಿದ್ದರೆ ಹೌದು ಎನ್ನಬಹುದು. ಈಗಾಗಲೇ ದುರಂತ ಜರುಗಿದ ಚಿಕ್ಕಮಗಳೂರಿನ ರಸ್ತೆ ದುರಸ್ಥಿಗೆ 297 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿದ್ದರೂ ಸೋಶಿಯಲ್ ಮೀಡಿಯಾ ದಲ್ಲಿ ಕಾಂಗ್ರೆಸ್ ಸಹೋದರಿ ಪ್ರಚಾರಕ್ಕಾಗಿ ಟೀಕೆ ಮಾಡಿರುವುದು ಸರಿಯಲ್ಲ. ವಾಸ್ತವ ತಿಳಿದು ಮಾತನಾಡಬೇಕು.

ತಾವು ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರುವುದರಿಂದ ರಸ್ತೆ ದುರಂತದಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ಹೇಳಲು ಟ್ವಿಟರ್ ಮೂಲಕ ಸಂದೇಶ ಹಾಕಿದರೆ ಅದನ್ನು ಕಾಂಗ್ರೆಸ್ ಕಾರ್ಯಕರ್ತೆ ದೊಡ್ಡ ವಿಷಯ ಮಾಡಿದ್ದಾರೆ. ನಮ್ಮ ಕ್ಷೇತ್ರ ನಮ್ಮ ಜನ ಅವರ ಕಷ್ಟ ಸುಖದಲ್ಲಿ ತಾವು ಪಾಲ್ಗೊಂಡಿದ್ದರಿಂದಲೇ ಸತತವಾಗಿ ಗೆದ್ದು ಬರುತ್ತಿರುವುದು. ಕಾಂಗ್ರೆಸ್ ನವರು ಬರೀ ಗೊಂದಲ ಸೃಷ್ಟಿ ಮಾಡುವುದರಲ್ಲಿ ಶೂರರಾಗಿದ್ದಾರೆ ಎಂದು ರವಿ ಟೀಕಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ