Udayavni Special

ಕೋವಿಡ್‌ ಆಸ್ಪತ್ರೆ ಆರಂಭಕ್ಕೆ ಪ್ರತಿಷ್ಠೆ ಬೇಡ

ಕಾಳಜಿ ಕೇಂದ್ರದಲ್ಲಿ ಸರಿಯಾದ ಊಟ-ಚಿಕಿತ್ಸೆ ಸಿಗುತ್ತಿಲ್ಲ, ­ನಿರ್ಲಕ್ಷ್ಯ ವಹಿಸಿದರೆ ಜನರ ಸಹಕಾರದಲ್ಲಿ ಆಸ್ಪತ್ರೆ ಆರಂಭ

Team Udayavani, Jun 7, 2021, 9:00 PM IST

06-gvt-01

ಗಂಗಾವತಿ: ಕನಕಗಿರಿ-ಕಾರಟಗಿ ಪಟ್ಟಣಗಳಲ್ಲಿ ಕೋವಿಡ್‌ ಆಸ್ಪತ್ರೆಗಳನ್ನು ಆರಂಭಿಸಬೇಕು. ಶ್ರೀರಾಮನಗರ ಕೋವಿಡ್‌ ಆಸ್ಪತ್ರೆಯನ್ನು ಪುನಃ ಆರಂಭಿಸುವಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್‌ ಎಸ್‌. ತಂಗಡಗಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶ್ರೀರಾಮನಗರದಲ್ಲಿ ಕಳೆದ ಒಂದು ವಾರದ ಹಿಂದೆ ಆರಂಭಿಸಿಸಿದ್ದ ಕೋವಿಡ್‌ ಆಸ್ಪತ್ರೆಯನ್ನು ರದ್ದುಗೊಳಿಸಿ ಅಲ್ಲಿದ್ದ 22 ಜನ ಸೋಂಕಿತರನ್ನು ಗಂಗಾವತಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು ಖಂಡನೀಯ. ಕ್ಷೇತ್ರದ ಜನರು ದಾನ ನೀಡಿದ ದುಡ್ಡಿನಲ್ಲಿ ಗೆದ್ದು ಶಾಶಕರಾಗಿರುವ ದಢೇಸೂಗೂರು ಬಸವರಾಜ ಅವರು ದಾನ ಕೊಟ್ಟ ಜನರನ್ನು ಮರೆತು ಕೊರೊನಾ ಸಂದರ್ಭದಲ್ಲಿ ಮರಳು ಮಟ್ಕಾ ದಂಧೆ ನಡೆಸುವವರ ಸಭೆ ಮಾಡುತ್ತಿರುವುದು ಖಂಡನೀಯ ಎಂದರು.

ನೇರವಾಗಿ ಮರಳು ದಂಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೊರೊನಾ ಪೀಡಿತರ ಸಮಸ್ಯೆ ಆಲಿಸದೇ ಕಾಳಜಿ ಕೇಂದ್ರಗಳಿಗೆ ತೆರಳಿ ಬೇರೆಡೆಯಿಂದ ತಂದ ಊಟ ಮಾಡಿ ಬರುವುದು ದೊಡ್ಡ ವಿಷಯವಲ್ಲ. ಸೋಂಕಿತರ ಕಾಳಜಿ ಕೇಂದ್ರಗಳಲ್ಲಿ ಮಲಕನಮರಡಿ ಹೊರತುಪಡಿಸಿ ಎಲ್ಲಿಯೂ ಸರಿಯಾದ ಊಟ ಚಿಕಿತ್ಸೆ ಸಿಗುತ್ತಿಲ್ಲ. ಶಾಸಕರು ಜಿಲ್ಲಾಡಳಿತದ ಅ ಧಿಕಾರಿಗಳು ಕೊರೊನಾ ಪೀಡಿತರಿಗೆ ಚಿಕಿತ್ಸೆ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ. ಬರೀ ಮೀಟಿಂಗ್‌ ಮಾಡಿದರೆ ಸಾಲದು ಸೋಂಕಿತರ ಚಿಕಿತ್ಸೆ ಹಾಗೂ ಅವರಿಗೆ ಅತ್ಯುತ್ತಮ ಆಹಾರ ಔಷಧೋಪಚಾರ ಮಾಡಬೇಕು. ಕೂಡಲೇ ಶ್ರೀರಾಮನಗರ, ಕಾರಟಗಿ ಹಾಗೂ ಕನಕಗಿರಿಯಲ್ಲಿ ಕೋವಿಡ್‌ ಆಸ್ಪತ್ರೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆ ಆರಂಭಿಸುವಂತೆ ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜಿಲ್ಲಾಡಳಿತ ಮತ್ತು ಶಾಸಕರು ಆಸ್ಪತ್ರೆ ಆರಂಭಿಸದಿದ್ದರೆ ಶಾಸಕ ದಢೇಸೂಗೂರು ಗೆಲುವಿಗೆ ದೇಣಿಗೆ ನೀಡಿದ ಜನರಿಂದಲೇ ದೇಣಿಗೆ ಪಡೆದು ಆಕ್ಸಿಜನ್‌ ವೆಂಟಿಲೇಟರ್‌ ಹಾಗೂ ಚಿಕಿತ್ಸೆಯ ಸಾಮಾಗ್ರಿ ಖರೀಸಲು ಸಿದ್ಧವಾಗಿದ್ದು, ಜಿಲ್ಲಾಡಳಿತ ಆಸ್ಪತ್ರೆ ಆರಂಭಿಸಿ ವೈದ್ಯರು ಅಗತ್ಯ ಸಿಬ್ಬಂದಿ ವರ್ಗ ನಿಯೋಜನೆ ಮಾಡಲಿ ಎಂದು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಮಹಮದ್‌, ಎಪಿಎಂಸಿ ನಿರ್ದೇಶಕ ರೆಡ್ಡಿ ಶ್ರೀನಿವಾಸ, ತಾ.ಪಂ ಮಾಜಿ ಸದಸ್ಯ ಬಿ.ಫಕೀರಯ್ಯ, ಅಮರೇಶ ಗೋನಾಳ, ಚಿನ್ನುಪಾಟಿ ಪ್ರಭಾಕರ್‌, ಮಲ್ಲನಗೌಡ, ರೇಣುಕನಗೌಡ, ಅಯ್ಯಪ್ಪ, ಯಮನೂರಪ್ಪ ನಾಯಕ, ಕೃಷ್ಣ ಬಾಗೋಡಿ, ಸತ್ಯನಾರಾಯಣ ಇದ್ದರು.

ಟಾಪ್ ನ್ಯೂಸ್

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

2022ಕ್ಕೆ ಎಲ್ಲಾ 36 ರಫೇಲ್‌ ಭಾರತಕ್ಕೆ : ಭಾರತೀಯ ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

19-11

ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಬಳಕೆ: ಜನರ ಆಕ್ರೋಶ

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

—-

ಇನ್ನು ಮುಂದೆ ಗಂಜಿ ಕೇಂದ್ರಗಳಲ್ಲಿ ಸಿಗಲಿದೆ ಫುಲ್ ಮೀಲ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-18

ವೈದ್ಯರ ಮೇಲೆ ದೈಹಿಕ ಹಲ್ಲೆ ತಡೆಗೆ ಪ್ರಧಾನಿಗೆ ಪತ್ರ

19-17

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ

19-16

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ

19-15

ಭಾಷಾ ಕಲಿಕೆಗೆ 3 ವರ್ಷ ಅವಕಾಶ ನೀಡಿ

19-14

ಬಿಸಿಯೂಟ ನೌಕರರಿಗೂ ಲಾಕ್‌ಡೌನ್‌ ಪ್ಯಾಕೇಜ್‌ ಘೋಷಿಸಿ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

19-18

ವೈದ್ಯರ ಮೇಲೆ ದೈಹಿಕ ಹಲ್ಲೆ ತಡೆಗೆ ಪ್ರಧಾನಿಗೆ ಪತ್ರ

19-17

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

19-16

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ

19-15

ಭಾಷಾ ಕಲಿಕೆಗೆ 3 ವರ್ಷ ಅವಕಾಶ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.