ಬೆಳಗಿನ ಜಾವ ಸಾಂಗವಾಗಿ ನೆರವೇರಿದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ
Team Udayavani, Jan 19, 2022, 11:11 AM IST
ಕೊಪ್ಪಳ: ಕೊರೊನಾ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವವು ಇಂದು ಬೆಳಗಿನ ಜಾವ ಸರಿಯಾಗಿ 4.29 ಗಂಟೆಗೆ ಸರಳವಾಗಿ ಸಾಂಗವಾಗಿ ನೆರವೇರಿತು.
ಪ್ರತಿ ವರ್ಷವೂ ಲಕ್ಷಾಂತರ ಭಕ್ತರ ಮಧ್ಯದಲ್ಲಿ ಮಹಾ ರಥೋತ್ಸವ ಸಂಜೆ ಸೂರ್ಯ ಧರೆಗೆ ಜಾರುವ ಮುನ್ನ ಮಹಾ ರಥೋತ್ಸವ ಸಾಗುತ್ತಿತ್ತು. ಆದರೆ ಕೊರೊನಾ ಹಾಗೂ ಓಮಿಕ್ರಾನ್ ಉಲ್ಭಣದ ಹಿನ್ನೆಲೆಯಲ್ಲಿ ಜನರ ದಟ್ಟಣೆ ತಡೆಯಲು ಇಂದು ಬೆಳಗಿನ ಜಾವ ಗವಿಮಠದ ಪರಂಪರೆಯಂತೆ ಸಂಪ್ರದಾಯವನ್ನೂ ಮುರಿಯದೇ, ಕೊರೊನಾ ನಿಯಮವನ್ನೂ ಮೀರದೆ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ಕಳೆದ ವರ್ಷವೂ ಸಹ ಕೊರೊನಾ ಹಿನ್ನೆಲೆಯಲ್ಲಿ ಬೆಳಗಿನ ವೇಳೆ ಸರಳತೆಯಿಂದ ಮಹಾ ರಥೋತ್ಸವ ಸಾಗಿತ್ತು.
ಈ ವರ್ಷದ ಬುಧವಾರವೂ ಸಹ ಕೋವಿಡ್ ನಿಯಮಗಳಿಗೆ ಒಳಪಟ್ಟು ಮಹಾ ರಥೋತ್ಸವ ನೆರವೇರಿತು. ಪ್ರತಿ ವರ್ಷದಂತೆ ಗವಿ ಮಠಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಮಠದ ಭಕ್ತರು ದೂರದಿಂದಲೇ ನಿಂತು ಮಹಾ ರಥೋತ್ಸವ ಸಾಗುವ ಕ್ಷಣಗಳನ್ನು ಕಣ್ತುಂಬಿಕೊಂಡು ಭಕ್ತಿಯಿಂದ ಪ್ರಾರ್ಥಿಸಿದರು. ಗವಿಮಠದ ಶ್ರೀಗಳು ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ಸಂಪ್ರದಾಯವನ್ನು ಸಾಂಘವಾಗಿ ನೆರವೇರಿಸಿದರು.