ಖಂಡಗಾರ ಡ್ಯಾಂಗೆ ಪ್ರವಾಸಿಗರ ಲಗ್ಗೆ

ಕಿರಿದಾದ ರಸ್ತೆ-ಅಪಾಯಕಾರಿ ತಿರುವುಗಳು•ಅಧಿಕಾರಿಗಳು-ಜನಪ್ರತಿನಿಧಿಗಳು ಲಕ್ಷ್ಯ ವಹಿಸಲಿ

Team Udayavani, Jul 18, 2019, 1:36 PM IST

ಕುಮಟಾ: ತಾಲೂಕಿನ ಮಿರ್ಜಾನ್‌ ಗ್ರಾಪಂ ವ್ಯಾಪ್ತಿಯ ನಾಗೂರು ಗ್ರಾಮದ ಖಂಡಗಾರ ಕಿರು ಡ್ಯಾಮ್‌ಗೆ ಮಳೆಗಾಲದಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಬೇಕಿದೆ.

ಪಟ್ಟಣದಿಂದ ಮಿರ್ಜಾನ ಒಳ ಮಾರ್ಗದ ಮುಖಾಂತರ ಖಂಡಗಾರ ಮಾರ್ಗವಾಗಿ ಕ್ರಮಿಸಿದರೆ ಮಧ್ಯದಲ್ಲೇ ಈ ಕಿರು ಡ್ಯಾಮ್‌ ಕಾಣಸಿಗುತ್ತದೆ. ಈ ಜಲಧಾರೆಗೆ ಖಂಡಗಾರ ಫಾಲ್ಸ್ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಮೇಲಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಕಟ್ಟೆ ಕಟ್ಟಲಾಗಿದ್ದು, ನೀರು ನಿಯಮಿತ ಪ್ರಮಾಣದಲ್ಲಿ ಹರಿದು ಹೋಗಿ ಕಟ್ಟೆ ಕೆಳಗಡೆ ಧುಮುಕುವುದರಿಂದ ಆ ದೃಶ್ಯ ರಮಣೀಯವಾಗಿರುತ್ತದೆ.

ಇಲ್ಲಿನ ನೀರು ಶುಚಿಯಾಗಿದ್ದು, ಪರಿಸರ ಕೂಡ ಸ್ವಚ್ಛವಾಗಿದೆ. ನೀರಿನ ಮಟ್ಟ ಒಂದೇ ಪ್ರಮಾಣದಲ್ಲಿ ಇರುವುದರಿಂದ ಚಿಕ್ಕ ಮಕ್ಕಳಿಂದ ಹಿಡಿದು, ಸಾಕಷ್ಟು ಜನರು ಈಜು ಕಲಿಯಲು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯರು ಹೇಳುವ ಪ್ರಕಾರ ಮಳೆಗಾಲ ಪ್ರಾರಂಭದಿಂದ ಪ್ರತಿದಿನ 200 ಕ್ಕೂ ಅಧಿಕ ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

ವ್ಯವಸ್ಥೆ ಕಲ್ಪಿಸಿ: ಈ ಕಿರು ಡ್ಯಾಮ್‌ ಅರಣ್ಯ ಇಲಾಖೆ ಅಧೀನದಲ್ಲಿದೆ. ಮಳೆಗಾಲದಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕುಳಿತುಕೊಳ್ಳುವ ಬೇಂಚು ಅಥವಾ ಆಸನದ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಕಲ್ಪಿಸಬೇಕಾಗಿದೆ. ಒಂದು ಶೌಚಾಲಯ ಹಾಗೂ ಮಹಿಳೆಯರಿಗಾಗಿ ವಿಶೇಷ ಕೊಠಡಿ ನಿರ್ಮಿಸಿದರೆ ಸಾಕಷ್ಟು ಮಹಿಳೆಯರೂ ಆಗಮಿಸುತ್ತಿದ್ದರು ಎಂಬ ಮಾತು ಕೇಳಿಬಂದಿದೆ.

ಮೂಲ ಸೌಕರ್ಯದ ಕೊರತೆ: ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಸ್ಥಳಕ್ಕೆ ಹಲವಾರು ಸಮಸ್ಯೆಗಳಿವೆ. ಇಲ್ಲಿ ಓಡಾಡುವ ರಸ್ತೆ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳಿವೆ. ಹಾಗೆ ಇಲ್ಲಿ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವಸತಿ ವ್ಯವಸ್ಥೆಯಿಲ್ಲ. ಕನಿಷ್ಠ ಶೌಚಾಲಯದ ವ್ಯವಸ್ಥೆ, ಬಟ್ಟೆ ಬದಲಾಯಿಸಿಕೊಳ್ಳಲು ಕೊಠಡಿ ಸೌಲಭ್ಯವೂ ಇಲ್ಲ. ಇದರಿಂದ ವಿಶೇಷವಾಗಿ ಮಹಿಳೆಯರು ಕಿರಿಕಿರಿ ಅನುಭವಿಸುವಂತಾಗಿದೆ. ಹಾಗೆ ಊಟ, ತಿಂಡಿಗಾಗಿ ಒಂದು ಹೋಟೆಲ್, ಅಂಗಡಿ ಕೂಡ ಇಲ್ಲಿ ಇಲ್ಲವಾಗಿದ್ದು, ಇಲ್ಲಿ ಬರುವಂತಹ ಪ್ರವಾಸಿಗರು ಹಸಿವು ನೀಗಿಸಿಕೊಳ್ಳಲು ಏನಾದರೂ ಪಟ್ಟಣದಿಂದಲೇ ತರಬೇಕಾದ ಅನಿವಾರ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

  • ಹಳಿಯಾಳ: ಅಪ್ರತೀಮ ವೀರ ಛತ್ರಪತಿ ಶಿವಾಜಿ ಮಹಾರಾಜರು ದೇಶದ ಭವಿಷ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ನಾಯಕರಾಗಿದ್ದು ಸರ್ವರನ್ನು ಒಂದೂಗೂಡಿಸಿಕೊಂಡು ಹೋಗುತ್ತಿದ್ದ...

  • ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ...

  • ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಮಾರಿಕಾಂಬಾ ದೇವಿಯ ಜಾತ್ರೆಯು...

  • ಕುಮಟಾ: ಕಳೆದ ಎರಡು ದಿನಗಳಿಂದ ತಾಲೂಕಿನ ಹೊಳೆಗದ್ದೆ ಟೋಲ್‌ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಐಆರ್‌ಬಿ ಕಂಪೆನಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ...

ಹೊಸ ಸೇರ್ಪಡೆ