ನೀರಿಗಾಗಿ ನಿತ್ಯ ನಿಲ್ಲದ ಕಿತ್ತಾಟ-ಪರದಾಟ

44 ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್ 20ಕ್ಕೂ ಹೆಚ್ಚು ಗ್ರಾಮಗಳಿಗೆ ಕಲುಷಿತ ನೀರೇ ಗತಿ

Team Udayavani, May 5, 2019, 12:10 PM IST

5-MAY-17

ಲಿಂಗಸುಗೂರು: ಹಿರೇಹೆಸರೂರಿನಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು.

ಲಿಂಗಸುಗೂರು: ನೀರಿಗಾಗಿ ನಿತ್ಯವೂ ಕಿತ್ತಾಟ, ಪರದಾಟ, ಹಾಹಾಕಾರ. ಇದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯ.

ಕಳೆದ ವರ್ಷ ಮಳೆ ಕೊರತೆಯಿಂದಾಗಿ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಇಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಂತರ್ಜಲ ಪಾತಾಳಕ್ಕಿಳಿದು ಗುಟುಕು ನೀರಿಗಾಗಿ ಅಲೆಯುವಂತಾಗಿದೆ. ಎರಡು ತಿಂಗಳು ಕಾಲ ಅಧಿಕಾರಿಗಳು ಲೋಕಸಭೆ ಚುನಾವಣೆ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದರಿಂದ ಕುಡಿವ ನೀರಿನ ಸಮಸ್ಯೆ ಪರಿಹಾರ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು.

ಎಲ್ಲೆಲ್ಲಿ ನೀರಿನ ಸಮಸ್ಯೆ?: ಲಿಂಗಸುಗೂರು ವಿಧಾನಸಭೆ ಕ್ಷೇತ್ರದ ಕಡ್ಡೋಣಾ, ನೀಲೋಗಲ್, ಕೆ.ಮರಿಯಮ್ಮನಹಳ್ಳಿ, ಕನಸಾವಿ, ಆನ್ವರಿ, ಬಗಡೀತಾಂಡಾ, ಗೀಗೀನಾಯಕನ ತಾಂಡಾ, ಜಾಂತಾಪುರು, ಚಿಕ್ಕ ಯರದಿಹಾಳ, ಕನ್ನಾಪುರಹಟ್ಟಿ, ಹಿರೇನಗನೂರು, ದೇವರಭೂಪುರ, ಗುಂಡಸಾಗರ, ಅಡವಿಭಾವಿ (ಮು), ಖೈರವಾಡಗಿ, ಆಶಿಹಾಳ, ಹಾಲವರ್ತಿ ತಾಂಡಾ, ಸುಣಕಲ್, ರೇಷ್ಮೆ ತಾಂಡಾ, ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನೀರಲೂಟಿ, ಅಡವಿಭಾವಿ ತಾಂಡಾ, ತಿಮ್ಮಾಪುರ, ಸುಲ್ತಾನಪುರ, ಜಕ್ಕರೇಮಡು-ಸೋಮುನಾಯಕನ ತಾಂಡಾ, ಕನ್ನಾಳ, ತಿಮ್ಮಾಪುರ ತಾಂಡಾ, ಮೂಡಲದಿನ್ನಿ, ಮ್ಯಾದರಹಾಳ ತಾಂಡಾ, ಮ್ಯಾದರಹಾಳ ಗೊಲ್ಲರಹಟ್ಟಿ, ಮ್ಯಾದರಹಾಳ, ಉಸ್ಕಿಹಾಳ, ವೆಂಕಟಾಪುರ ತಾಂಡಾ, ಮಟ್ಟೂರು ತಾಂಡಾ, ಕಡದರಹಾಳ ತಾಂಡಾ, ಗುಡಿಹಾಳ, ಕುಣಿಕೆಲ್ಲೂರು, ಕುಣಿಕೆಲ್ಲೂರು, ಸೋಂಪೂರ ತಾಂಡಾ, ಸಂತೆಕೆಲ್ಲೂರು, ಬೇಡರಕಾರ‌್ಲಕುಂಟಿ, ಬಸಾಪುರ, ಯರದೊಡ್ಡಿ ತಾಂಡಾ, ತಲೇಖಾನ್‌, ಪಾಮಪ್ಪನ ತಾಂಡಾ, ಹಡಗಲಿ, ಮೀಸಿಖೀರಯಪ್ಪನ ತಾಂಡಾ ಸೇರಿ ಇನ್ನಿತರ ದೊಡ್ಡಿ ಹಾಗೂ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಅಷ್ಟೇ ಅಲ್ಲದೇ ಬರುವ ಅಲ್ಪಸ್ವಲ್ಪ ನೀರಿಗಾಗಿ ಕಾದಾಡಿ ಅಕ್ಕಪಕ್ಕದವರ ಜೊತೆ ಸ್ನೇಹ-ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಜಗಳ ಮಾಡಿಕೊಂಡು ಕುಡಿವ ನೀರು ತರಬೇಕಾಗಿದೆ ಇದು ಗ್ರಾಮೀಣ ಭಾಗದಲ್ಲಿ ನಡೆದಿರುವ ಸಂಗತಿ.

ಕಪ್ಪೆ ಜೊಂಡು ನೀರೇ ಗತಿ!: ತಾಲೂಕಿನ ಹೊನ್ನಳ್ಳಿ ಹತ್ತಿರ ರಾಜೀವ್‌ಗಾಂಧಿ ಕುಡಿವ ನೀರಿನ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಹೊನ್ನಳ್ಳಿ, ಯರಡೋಣಾ, ಯಲಗಲದಿನ್ನಿ, ಗುಡದನಾಳ, ಕುಪ್ಪಿಗುಡ್ಡ, ಸರ್ಜಾಪುರ, ಚಿಕ್ಕಹೆಸರೂರು ಗ್ರಾಮಗಳಿಗೆ ಕುಡಿವ ನೀರು ಪೂರೈಸಲು ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ಈ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಅದೆಷ್ಟು ವರ್ಷಗಳು ಗತಿಸಿವೆಯೋ ತಿಳಿಯದಾಗಿದೆ. ಟ್ಯಾಂಕ್‌ನಲ್ಲಿ ಕಪ್ಪೆ ಜೊಂಡು, ಕಸ-ಕಡ್ಡಿಗಳಿಂದ ತುಂಬಿದೆ. ಈ ನೀರೇ ಸರಬರಾಜು ಆಗುತ್ತಿದೆ. ಟ್ಯಾಂಕ್‌ ಸ್ವಚ್ಛತೆ ಸೇರಿ ಇತರ ಕೆಲಸಗಳಿಗೆ ಟೆಂಡರ್‌ ಮೂಲಕ ಗುತ್ತಿಗೆ ನೀಡಲಾಗಿದ್ದರೂ ಗುತ್ತಿಗೆದಾರರು ಕೆಲಸ ಶುರು ಮಾಡಿಲ್ಲ. ಕೆಲಸ ಶುರು ಮಾಡಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ತಾಲೂಕಿನ ಕೆ.ಗಲಗಿನದೊಡ್ಡಿ, ಕಾಳಪ್ಪದೊಡ್ಡಿ, ಮಟಮಾರಿದೊಡ್ಡಿ, ಸೋಮನಾಥನಾಯಕ ನಗರ, ಲೇಕಿಂಚೇರಿ, ಮಾಚನೂರು, ಯಲಗಟ್ಟಾ, ಗ್ರಾಮಗಳಿಗೆ ನಾರಾಯಣಪುರ ಬಲದಂಡೆ ನಾಲೆಯಲ್ಲಿ ಸಂಗ್ರಹವಾಗಿರುವ ಬಸಿ ನೀರೇ ಗತಿಯಾಗಿದೆ. ಈ ನೀರು ಕಲುಷಿತದಿಂದ ಕೂಡಿದ್ದರಿಂದ ಈ ನೀರನ್ನೇ ಇಲ್ಲಿನ ಜನ ಕುಡಿಯುವುದು. ಇದರಿಂದ ಇಲ್ಲಿನ ಜನತೆ ಅನೇಕ ರೋಗಗಳಿಂದ ನರಳುತ್ತಿದ್ದಾರೆ.

ಖಾಸಗಿ ಬೋರ್‌ವೆಲ್ ನೀರು: ಲಿಂಗಸುಗೂರು ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 44 ಗ್ರಾಮಗಳಲ್ಲಿ ತಾಲೂಕು ಆಡಳಿತ ಬಾಡಿಗೆ ಮೂಲಕ ಬೋರ್‌ವೆಲ್ನಿಂದ ನೀರಿನ ವ್ಯವಸ್ಥೆ ಮಾಡಿದೆ. ಇನ್ನೂ ಕಡ್ಡೋಣಾ, ನೀಲೋಗಲ್, ಕುಣಿಕೆಲ್ಲೂರು, ಸೋಂಪೂರ ತಾಂಡಾದಲ್ಲಿ ಕುಡಿವ ನೀರಿನ ಗಂಭೀರವಾಗಿ ಹೊಸ ಬೋರ್‌ವೆಲ್ ಹಾಕಲು ನೀರಿನ ಮೂಲಗಳು ಎಲ್ಲಿ ಸಿಗದೇ ಇರುವುದರಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಮುಂದಾಗಿದೆ.

ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೇಂದ್ರ ಸ್ಥಾನ ಬಿಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನ 44 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ನೀರು ಹಾಗೂ 4 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.
•ರಾಜಶೇಖರ್‌ ಡಂಬಳ್‌,
ಸಹಾಯಕ ಆಯುಕ್ತರು, ಲಿಂಗಸುಗೂರು

ಶಿವರಾಜ ಕೆಂಭಾವಿ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.