Cauvery Fight: ಕಮರಿದ ಕಾವೇರಿ ಹೋರಾಟದ ಕಿಚ್ಚು


Team Udayavani, Aug 28, 2023, 4:22 PM IST

Cauvery Fight: ಕಮರಿದ ಕಾವೇರಿ ಹೋರಾಟದ ಕಿಚ್ಚು

ಮಂಡ್ಯ: ಮಳೆ ಕೊರತೆ ಎದುರಾದಾಗ ರಾಜ್ಯ ಸರ್ಕಾರಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಜಿಲ್ಲೆಯಲ್ಲಿ ಹೋರಾಟದ ಕಿಚ್ಚೇ ಹಬ್ಬಿಸುತ್ತಿತ್ತು. ಆದರೆ ಇದೀಗ ಆ ಹೋರಾಟದ ಕಿಚ್ಚು ಕಂಡು ಬರುತ್ತಿಲ್ಲ. ಮಾಜಿ ಸಂಸದ ಜಿ.ಮಾದೇಗೌಡ ನಂತರ ನಾಯಕತ್ವದ ಕೊರತೆ ಕಾಡುತ್ತಿದೆ.

ಕಾವೇರಿ ನೀರಿಗಾಗಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಹೋರಾಟ ಬೆಂಕಿಯನ್ನೇ ಹಬ್ಬಿಸುತ್ತಿತ್ತು. ಮಾಜಿ ಸಂಸದ ಜಿ.ಮಾದೇಗೌಡ ಅವರ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳು ಹೋರಾಟಕ್ಕಿಳಿಯುತ್ತಿದ್ದವು. ಇದರಿಂದ ಇಡೀ ಸರ್ಕಾರವೇ ಬೀಳಿಸುವ ಮಟ್ಟಕ್ಕೆ ಹೋರಾಟದ ಕಾವು ಪಡೆಯುತ್ತಿತ್ತು.

ನಾಯಕತ್ವದ ಕೊರತೆ: ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿತ್ತು. ಇಡೀ ಮಂಡ್ಯ ನಗರವೇ ಬಂದ್‌ ಆಗುತ್ತಿತ್ತು. ಅಂಥದ್ದೊಂದು ನಾಯಕನ ಕೂಗು ಕೇಳಿ ಬರುತ್ತಿತ್ತು. ಮಾದೇಗೌಡ ಎಂಬ ಗಟ್ಟಿಧ್ವನಿ ಯಾರೇ ಮುಖ್ಯಮಂತ್ರಿಯಾಗಿದ್ದರೂ ಮೊಬೈಲ್‌ ಮೂಲಕವೇ ನೀರು ನಿಲ್ಲಿಸಿ ಎಂದು ಗುಟುರು ಹಾಕುವ ಮೂಲಕ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಆದರೆ ಪ್ರಸ್ತುತ ನಾಯಕತ್ವದ ಕೊರತೆ ಕಾಡುತ್ತಿದೆ. ಮಾಜಿ ಸಂಸದ ಜಿ.ಮಾದೇಗೌಡ ನಿಧನದ ನಂತರ ಕಾವೇರಿ ಚಳವಳಿಯೇ ಇಲ್ಲದಂ ತಾಗಿದೆ. ಮಾದೇಗೌಡರು ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಕುಳಿತುಕೊಂಡರೆ ವಿವಿಧ ರೈತ ಸಂಘಟನೆಗಳು, ಕನ್ನಡಪರ, ಪ್ರಗತಿಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅವರ ಬೆನ್ನಿಗೆ ನಿಂತಿರುತ್ತಿದ್ದವು.

ನಿರ್ಜೀವವಾಗಿರುವ ಹಿತರಕ್ಷಣಾ ಸಮಿತಿ: ಕಾವೇರಿ ನೀರಿಗಾಗಿ ಹಾಗೂ ರೈತರ ಸಮಸ್ಯೆಗಳಿಗಾಗಿ ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದೇ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ.

ಆದರೆ ಇದೀಗ ಹಿತಾಸಕ್ತಿ ಕಳೆದುಕೊಂಡಿದೆ. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಬೀದಿಗಿಳಿಯುತ್ತಿತ್ತು. ಇದಕ್ಕೆ ಎಲ್ಲ ಸಂಘಟನೆಗಳು ಸಹಕಾರ ನೀಡುತ್ತಿದ್ದವು. ಜಿ.ಮಾದೇಗೌಡರ ನಿಧನದ ನಂತರ ಸಮಿತಿಯು ನಿರ್ಜೀವ ಸ್ಥಿತಿಯಲ್ಲಿದೆ. ಹೋರಾಟ ಮುನ್ನಡೆಸುವ ನಾಯಕತ್ವವೂ ಇಲ್ಲದಂತಾಗಿದೆ.

ಸಮಿತಿ ಪುನರ್‌ ರಚನೆಗಿಲ್ಲ ಆಸಕ್ತಿ: ಮಾದೇಗೌಡರ ನಿಧನದ ನಂತರ ಇದ್ದೂ ಸತ್ತಂತಿರುವ ಸಮಿತಿಯನ್ನು ಪುನರ್‌ ರಚನೆ ಮಾಡುವ ಆಸಕ್ತಿ ಯಾರಿಗೂ ಇಲ್ಲದಂತಾಗಿದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಪಕ್ಷಾತೀತ ವಾಗಿ ಕೂಡಿತ್ತು. ಸಮಿತಿಯಲ್ಲಿ ಎಲ್ಲ ಪಕ್ಷದ ನಾಯಕರು ಇದ್ದರು. ಸಮಿತಿಯಲ್ಲಿ ಪದಾ ಕಾರಿಗಳಾಗಿದ್ದ ರಾಜಕೀಯ ಮುತ್ಸದ್ಧಿಗಳಾದ ಜಿ.ಮಾದೇಗೌಡ, ಡಾ.ಎಚ್‌.ಡಿ. ಚೌಡಯ್ಯ ಸೇರಿದಂತೆ ಅನೇಕ ಹಿರಿಯರು ಪದಾಧಿಕಾರಿಗಳು ಮರಣ ಹೊಂದಿದ್ದಾರೆ. ಆದರೆ ಇದುವರೆಗೂ ಸಮಿತಿ ಪುನರ್‌ ರಚಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ. ಆಸಕ್ತಿಯನ್ನೂ ತೋರಿಸುತ್ತಿಲ್ಲ.

ಛಿದ್ರಗೊಂಡ ಹೋರಾಟ:

ಜಿಲ್ಲೆಯಲ್ಲಿ ಕಾವೇರಿ ಚಳವಳಿಯು ಛಿದ್ರಗೊಂಡಿದೆ. ಜಿ.ಮಾದೇಗೌಡರು ಇರುವ ವರೆಗೂ ಎಲ್ಲ ಸಂಘಟನೆಗಳು ಒಗ್ಗಟ್ಟಿಲ್ಲದಿದ್ದರೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದವು. ಆದರೆ ಪ್ರಸ್ತುತ ಎಲ್ಲ ಹೋರಾಟಗಳ ಸಂಘಟಕರು ಛಿದ್ರಗೊಂಡಿದ್ದಾರೆ. ಇದರಿಂದ ಸಂಘಗಳು ಛಿದ್ರಗೊಂಡಿವೆ. ರೈತಸಂಘವು ಮೂರು ಬಣಗಳಾಗಿದ್ದು, ಪ್ರತ್ಯೇಕ ಹೋರಾಟ ಮಾಡುತ್ತಿವೆ. ಮೂಲ ಸಂಘಟನೆ, ರೈತಬಣ ಹಾಗೂ ರೈತಸಂಘ ಎಂಬ ಮೂರು ಬಣಗಳಾಗಿ ಛಿದ್ರಗೊಂಡಿವೆ. ಇದರಿಂದ ಒಗ್ಗಟ್ಟು ಹಾಗೂ ಸಂಘಟನೆ ಇಲ್ಲದಂತಾಗಿದೆ. ಪ್ರತ್ಯೇಕವಾಗಿ ಪ್ರತಿಭಟನೆ ನಡೆಯುತ್ತಿರು ವುದರಿಂದ ಸರ್ಕಾರಕ್ಕೆ ಯಾವುದೇ ಬಿಸಿ ಮುಟ್ಟುತ್ತಿಲ್ಲ. ಇದರಿಂದ ಸರ್ಕಾರವೂ ನಿರ್ಲಕ್ಷ್ಯ ವಹಿಸಿದ್ದು, ನೀರನ್ನು ತಮಿಳುನಾಡಿಗೆ ಸಲೀಸಾಗಿ ಹರಿಸುತ್ತಿದೆ.

ಜೆಡಿಎಸ್‌ ಕೂಡ ಮೌನ:

ಜಿಲ್ಲೆಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಪûಾತೀತವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಇದೀಗ ಆ ಇತಿಹಾಸ ಕಾಣದಂತಾಗಿದೆ. ಇತ್ತೀಚೆಗೆ ಬಿಜೆಪಿಯು ಸಹ ಕಾಟಾಚಾರಕ್ಕೆ ಎಂಬಂತೆ ಪ್ರತಿಭಟನೆ ನಡೆಸಿ ಮೌನವಾಯಿತು. ಇತ್ತ ವಿರೋಧ ಪಕ್ಷವಾಗಿರುವ ಜೆಡಿಎಸ್‌ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್‌ ನಾಯಕರು ಮೌನ ವಹಿಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ಸೊಲ್ಲೆತ್ತುತ್ತಿಲ್ಲ. ರಾಜಕೀಯ ಹಿತಾಸಕ್ತಿಗೆ ತೋರುವ ಮನಸ್ಸು ಕಾವೇರಿ ವಿಚಾರದಲ್ಲಿ ತೋರಿಸುತ್ತಿಲ್ಲ. ಸೋಲಿನ ಹತಾಶೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಗಳು ಜಿಲ್ಲೆಯ ಜನರನ್ನು ಕಾಡುತ್ತಿದೆ.

 ಎಚ್‌.ಶಿವರಾಜು 

ಟಾಪ್ ನ್ಯೂಸ್

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

mohammad-mokhber

Iran President ಇಬ್ರಾಹಿಂ ರೈಸಿ ದುರ್ಮರಣ; ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್

3-banahatti

Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು      

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

is there any reserve day for ipl qualifiers? what rule says

IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?

Rachana Rai is the heroine of Darshan’s film Devil

Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

11-mandya

Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

mohammad-mokhber

Iran President ಇಬ್ರಾಹಿಂ ರೈಸಿ ದುರ್ಮರಣ; ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್

3-banahatti

Boys Drowned: ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು      

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.