ಸುಳ್ಳು ಮಾಹಿತಿ ನೀಡುವ ಅಧಿಕಾರಿಗಳ ವಜಾಗೊಳಿಸಿ

ನಿವೇಶನಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭ

Team Udayavani, Oct 13, 2020, 2:05 PM IST

mandya-tdy-2

ಮಂಡ್ಯ: ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಬೇಕು. ಸುಳ್ಳು ಮಾಹಿತಿ ನೀಡುತ್ತಿರುವ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗ ಹಾಗೂ ಭೂ ಮಾಪ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ಹಳೇಬೂದನೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ತಾಲೂಕಿನ ಬೂದನೂರು ಗ್ರಾಪಂ ವ್ಯಾಪ್ತಿಯಲ್ಲಿ 170ಕ್ಕೂ ಹೆಚ್ಚು ನಿವೇಶನ ರಹಿತರಿಗೆ ಸರ್ಕಾರ ಭೂಮಿ ವಿತರಿಸಬೇಕೆಂದು ಆಗ್ರಹಿಸಿ 4 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಜಿಲ್ಲಾಡಳಿತಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳ ಹಾಗೂಹಣದ ಆಮಿಷಕ್ಕೆ ಒಳಗಾಗಿ ನಿವೇಶನ ರಹಿತರಿಗೆವಂಚಿಸುವಕೆಲಸ ನಡೆದಿದೆ. ಇದಲ್ಲದೆ ಸ್ಥಳ ಪರಿಶೀಲನೆ ಬಂದಿದ್ದ ಎಸಿ ಹಾಗೂ ತಹಶೀಲ್ದಾರ್‌ ಅವರಿಗೆ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗಹಾಗೂಭೂಮಾಪನಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಪರಿಶೀಲನೆ ನಡೆಸಿಲ್ಲ: ಗ್ರಾಮದ ಸರ್ವೇ ನಂ 190/ಪಿ10ನ 6.20 ಎಕರೆ ಭೂಮಿಯೇ ಕಾಣುತ್ತಿಲ್ಲ ಎಂದು ಪೂರ್ವ ದಿಕ್ಕಿನಲ್ಲಿರುವ ಭೂಮಿಯ ಪರಿಶೀಲನೆ ನಡೆಸದೆ ಪಶ್ಚಿಮ ದಿಕ್ಕಿನಲ್ಲಿರುವ ಭೂಮಿಯನ್ನು ಎಸಿ, ತಹಶೀಲ್ದಾರ್‌ ಅವರಿಗೆ ತೋರಿಸಿ ವಂಚಿಸಲಾಗಿದೆ. ಬೂದನೂರು ಗ್ರಾಮದ ದಲಿತರ ಇನಾಮು, ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕ ದಾರಿಗಳನ್ನು ಕಬಳಿಸಿರುವ ಭೂಗಳ್ಳರು ಬಡವರ ನಿವೇಶನ ಭೂಮಿಯನ್ನು ಕಬಳಿಸಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆ ಕೈ ಬಿಡುವುದಿಲ್ಲ: ತಾಲೂಕುಕಚೇರಿಯಲ್ಲಿ ಬೂದನೂರು ನಿವೇಶನರಹಿತರಿಗೆ ಭೂಮಿ ಮಂಜೂರು ಮಾಡುವ ಸಂಬಂಧದ ಕಡತಗಳನ್ನೇಅಧಿಕಾರಿಗಳು ಬಚ್ಚಿಟ್ಟು ಕಳೆದುಹೋಗಿದೆಎನ್ನುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ, ಕಡತ ಪತ್ತೆ ಹಚ್ಚಿ ನಿವೇಶನ ಕಲ್ಪಿಸುವವರೆಗೂ ಪ್ರತಿಭಟನೆಕೈಬಿಡುವುದಿಲ್ಲ ಎಂದು ಎಚ್ಚರಿಸಿದರು. ಈಗಾಗಲೇಗುರುತಿಸಿರುವ ಸರ್ಕಾರಿ ಭೂಮಿಯನ್ನು 1-5 ಮಾಡಿರುವ ಪ್ರಕಾರ ಅಳತೆ ಮಾಡಿ ಹದ್ದುಬಸ್ತ್ ಗೊಳಿಸಿ ನಿವೇಶನ ರಹಿತರಿಗೆ ನೀಡಬೇಕು. ತಕ್ಷಣವೇ ಡೀಸಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಬೇಕು. ಬೂದನೂರು ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಮಾಡಿರುವ ಆದೇಶ ಮತ್ತು ಆಗಿರುವ ಕ್ರಮದ ನಕಲು ಪ್ರತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಕರುನಾಡು ಸೇವಕರು ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ, ವಕೀಲ ರಾಮಯ್ಯ,ಕಾರಸವಾಡಿ ಮಹದೇವು, ಲಕ್ಷ್ಮೀ, ಮಾದೇವಿ, ರೇವಮ್ಮ, ಪುಟ್ಟ ತಾಯಮ್ಮ, ಶೋಭಾ, ಸುಧಾ, ಕುಪ್ಪಯ್ಯ, ಮೋಹನ್‌ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಹಳೇಬೂದನೂರು ಗ್ರಾಮದ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬಂಧ ಇದ್ದಕಡತಗಳು ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಭಾವಿಗಳ ಜೊತೆ ಸೇರಿಕೊಂಡು ಬಡವರ ನಿವೇಶನಕಬಳಿಸಲು ಮುಂದಾಗಿದ್ದಾರೆ. ಕೂಡಲೇ ಇದರ ಬಗ್ಗೆಕ್ರಮಕೈಗೊಳ್ಳಬೇಕು. ಇಲ್ಲಿಯವರೆಗೆಕ್ರಮಕೈಗೊಂಡಿರುವ ಬಗ್ಗೆ ತಿಳಿಸಬೇಕು. ಬಿ.ಕೆ.ಸತೀಶ, ಗ್ರಾಪಂ ಮಾಜಿ ಸದಸ್ಯ

ಸ್ವಂತ ಮನೆ ಹಕ್ಕಿಗಾಗಿ ಸಾಕಷ್ಟು ಬಾರಿ ಹೋರಾಟ ಮಾಡಿ, ಮನವಿಸಲ್ಲಿಸಿದರೂ ಸರ್ಕಾರ, ಜಿಲ್ಲಾಡಳಿತವಾಗಲೀಯಾವುದೇಕ್ರಮ ಕೈಗೊಂಡಿಲ್ಲ. ನಿವೇಶನ ರಹಿತರಿಗೆ ನಿವೇಶನ ನೀಡುವವರೆಗೂ ಹೋರಾಟ ಮುಂದುವರಿಯಲಿದೆ. ಎಂ.ಬಿ.ನಾಗಣ್ಣಗೌಡ, ಗೌರವಾಧ್ಯಕ್ಷರು, ಕರುನಾಡ ಸೇವಕರು ಸಂಘಟನೆ

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮಸ್ಥರು

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

krs

ಕೆಆರ್‌ಎಸ್‌ ಜಲಾಶಯ ಭರ್ತಿಗೆ 3 ಅಡಿ ಬಾಕಿ

28

ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿದ್ದೇವೆ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

Mysugar needs modern touches

ಮೈಷುಗರ್‌ಗೆ ಬೇಕಿದೆ ಆಧುನಿಕ ಸ್ಪರ್ಶ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

9power

ನಿರಂತರ ವಿದ್ಯುತ್‌ ನೀಡಲು ಮನವಿ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.