Udayavni Special

ಸೊಳ್ಳೆಪುರ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆ

ರಸ್ತೆ, ಕುಡಿಯುವ ನೀರು ಗ್ರಾಮಕ್ಕಿನ್ನೂ ಸಿಕ್ಕಿಲ್ಲ, ಮುಂಬರುವ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

Team Udayavani, Nov 26, 2020, 2:04 PM IST

ಸೊಳ್ಳೆಪುರ ಗ್ರಾಮಕ್ಕೆ ಅಭಿವೃದ್ಧಿ ಮರೀಚಿಕೆ

ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಪಂ ವ್ಯಾಪ್ತಿಯ ಸೊಳ್ಳೆಪುರ ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವಲ್ಲಿ ವಿಫ‌ಲವಾಗಿರುವ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಮುಂಬರುವ ಗ್ರಾಪಂ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ತಾಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಸೊಳ್ಳೆಪುರ ಗ್ರಾಮಕ್ಕೆ 50 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ಅರ್ಹ ಫ‌ಲಾನುಭವಿಗಳಿಗೆ ತಲುಪಿಸದೆ ಗ್ರಾಮ ಹಾಳುಕೊಂಪೆಯಾಗಿದೆ. ಎರಡು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮವು, ಹೆಚ್ಚು ಕೃಷಿಕರನ್ನು ಹೊಂದಿದೆ. 1300 ಮತದಾರರಿದ್ದು, ಚುನಾವಣೆ ವೇಳೆ ಗ್ರಾಮಕ್ಕೆ ಭೇಟಿ ನೀಡುವ ಶಾಸಕರು, ಸಂಸದರು ಹಾಗೂ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಚುನಾವಣೆ ಬಳಿಕ ಇತ್ತ ತೆಲೆಹಾಕಿಯೂ ಮಲಗುವುದಿಲ್ಲ.

ಸಮಸ್ಯೆಗಳ ಆಗರ: ಗ್ರಾಮದಲ್ಲಿ ಹೊಲ, ಗದ್ದೆಗಳಿಗೆ ತೆರಳುವ ರಸ್ತೆಗಳು ಕೆಸರು ಗದ್ದೆಯಾಗಿಮಾರ್ಪಟ್ಟಿವೆ. ಗ್ರಾಮದ ರಸ್ತೆಯುದ್ಧಕ್ಕೂ ತಿಪ್ಪೆಗುಂಡಿಗಳ ದರ್ಶನ, ಹೂಳು ತುಂಬಿರುವ ಚರಂಡಿ, ಇಕ್ಕೆಲಗಳಲ್ಲಿ ಗಿಡಗಂಟೆಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ. ಗ್ರಾಮದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ದುರ್ವಾಸನೆ ಬೀರುವುದಲ್ಲದೆ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಜತೆಗೆ ವಿದ್ಯುತ್‌ವ್ಯವಸ್ಥೆ, ಬೀದಿದೀಪ, ಕುಡಿಯುವ ನೀರು, ರಸ್ತೆ, ಚ‌ರಂಡಿ, ಇನ್ನಿತರೆ ಮೂಲ ಸೌಲಭ್ಯಗಳು ಇಲ್ಲದಂತಾಂಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ಗ್ರಾಮ ದೂರ ಉಳಿದಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೈಬರಹದಲ್ಲೇ ಇವೆ ರೈತರ ದಾಖಲೆಗಳು: ಸೊಳ್ಳೆಪುರ ಗ್ರಾಮವು ಕೇವಲ ಮತದಾನಕಷ್ಟೇ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿದ್ದು ಗ್ರಾಮದ ಜನತೆಯ ಬಹುಪಾಲು ಕೃಷಿ ಭೂಮಿ ಮಂಡ್ಯ ತಾಲೂಕಿನ ಹೊನ್ನಗ ‌ಳ್ಳಿ ಮಠ ವ್ಯಾಪ್ತಿಗೆ ಒಳಪಡಲಿದ್ದು ಜಮೀನಿನ ದಾಖಲೆಗಳು, ಗಣಕೀಕರಣ ಕಾಣದೆ ಕೈಬರಹ ದಾಖಲೆಗಳಲ್ಲೇ ಉಳಿದಿರುವುದು ಅಚ್ಚರಿಗೆ ‌ ಕಾರಣವಾಗಿದೆ. ಆರ್‌ಟಿಸಿ, ಮೂಲ ದಾಖಲೆಗಳು, ಇನ್ನಿತರೆ ಕಾಗದ ಪತ್ರಗಳು ಗಣಕೀಕರಣ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದರು.

ಗ್ರಾಮಸ್ಥರು ಜಮೀನುಗಳ ದಾಖಲೆಗಳನ್ನುಪಡೆಯಲು, ವಿಧವಾ, ವೃದ್ಧಾಪ್ಯ, ಅಂಗವಿಕಲ, ಪಿಂಚಣಿವ್ಯವಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಯೋಜನೆಗಳನ್ನು ಪಡೆಯಲು ತಾಲೂಕು ಕೇಂದ್ರಕ್ಕೆ ಪ್ರತಿನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಜಿಪಂ, ತಾಪಂ ಹಾಗೂ ಸರ್ಕಾರದ ಗಮನಸೆಳೆದು ಪ್ರಸಕ್ತ ಎದುರಾಗುವ ಗ್ರಾಪಂ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಾಗರಿಕರಲ್ಲಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಕ್ಕೆ ಕಲ್ಪಿಸಿ ಮಾದರಿ ಗ್ರಾಮವಾಗಿಸಬೇಕೆಂಬುದು ಸ್ಥಳೀಯರ ಒಕ್ಕೊರಲಿನ ತೀರ್ಮಾನವಾಗಿದೆ.

ಸ್ಥಳೀಯರ ಆಕ್ರೋಶ :  ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದ್ದರೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಚಕಾರವೆತ್ತದೆ ಮೌನ ವಹಿಸಿದ್ದಾರೆ. ಈವರೆಗೂ ಪಂಚಾಯಿತಿಯಿಂದ ಮನೆ, ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಶಾಸಕರು, ಸಂಸದರು ಜಿಪಂ ಸದಸ್ಯರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿಸಿ ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡದಿರುವುದು, ಸ್ಥಳೀಯ ನಾಯಕರು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ಸ್ಥಳೀಯರ ಆಕ್ರೋಶಕ್ಕೆಕಾರಣವಾಗಿದೆ. ಹೀಗಾಗಿ ಮುಂದಿನ ಚುನಾವಣೆ ಬಹಿಷ್ಕರಿಸುವ ನಿಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

50 ವರ್ಷಗಳಿಂದಲೂ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆಜಿಲ್ಲಾಡಳಿತ ಹಕ್ಕುಪತ್ರ ನೀಡುವ ಮೂಲಕ ಸರ್ಕಾರದ ಯೋಜನೆಪಡೆಯಲುಅವಕಾಶಕಲ್ಪಿಸಬೇಕಾಗಿದ್ದು, ಗ್ರಾಮಕ್ಕೆ ಸೌಲಭ್ಯಕಲ್ಪಿಸಿಮಾದರಿ ಗ್ರಾಮವನ್ನಾಗಿಸಲು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳುಇತ್ತ ಗಮನ ಹರಿಸಬೇಕಗಿದೆ. ಸೋ.ಸಿ. ಪ್ರಕಾಶ್‌, ಸೊಳ್ಳೆಪುರ ನಿವಾಸಿ

ಸೊಳ್ಳೆಪುರಗ್ರಾಮ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಈಗಷ್ಟೇ  ಗಮನಕ್ಕೆ ಬಂದಿದ್ದು,ಖುದ್ದು ಸ್ಥಳಕ್ಕೆಭೇಟಿ ನೀಡಿಪರಿಶೀಲಿಸಲಾಗುವುದು.ಕ್ರಮವಹಿಸಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗುವುದು. ಮುನಿರಾಜು, ತಾಪಂ ಇಒ

 

ಎಸ್‌.ಪುಟ್ಟಸ್ವಾಮಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಮ್ಮ ರಾಜ್ಯದ ಅಭ್ಯರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

Untitled-1

ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ

Downloadable e-version of voter id card to be launched on Monday

ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್

mapple

ಐಪೋನ್-12 ಸೇರಿದಂತೆ ಹಲವು ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಮಾಹಿತಿ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಬೀಳಗಿಯ ಓರ್ವ ವಶಕ್ಕೆ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಬೀಳಗಿಯ ಓರ್ವ ವಶಕ್ಕೆ

Pawan Kalyan donates Rs 30 lakh for construction of Ram Temple in Ayodhya

ರಾಮಮಂದಿರ ನಿರ್ಮಾಣಕ್ಕೆ ಪವನ್ ಕಲ್ಯಾಣ್ ನೀಡಿದ ದೇಣಿಗೆ ಎಷ್ಟು ಗೊತ್ತಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

The purpose of  privatization

ಖಾಸಗೀಕರಣ ಸರ್ಕಾರದ ಉದ್ದೇಶ

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

Traffic rules for life protection

ಜೀವ ರಕ್ಷಣೆಗಾಗಿ ಸಂಚಾರ ನಿಯಮ ಪಾಲಿಸಿ

MUST WATCH

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

ಹೊಸ ಸೇರ್ಪಡೆ

ನಮ್ಮ ರಾಜ್ಯದ ಅಭ್ಯರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

Untitled-1

ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ

Downloadable e-version of voter id card to be launched on Monday

ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್

mapple

ಐಪೋನ್-12 ಸೇರಿದಂತೆ ಹಲವು ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.