ಒಂದು ತಿಂಗಳಿಂದ ಕೆಲಸ ಬಿಟ್ಟು ಪಡಿತರಕ್ಕಾಗಿ ಅಲೆದಾಟ

Team Udayavani, Jan 28, 2020, 7:20 PM IST

ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಓಪನ್‌ ಆಗದ ಆ್ಯಪ್‌ ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಮಾತ್ರ ಹಣ ನೀಡಿದರೆ ಓಪನ್‌ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಮೇಲೆ ಜನರಲ್ಲಿ ಅನುಮಾನ ಮೂಡುತ್ತಿದೆ.

ಪಡಿತರು ವಿತರಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ ಸರ್ಕಾರ ಆಧಾರ್‌ ಲಿಂಕ್‌ ಮಾಡಿಸುವ ಜೊತೆಗೆ ಪಡಿತರ ವಿತರಣೆ ಮಾಡುವ ಮುನ್ನ ಕಾರ್ಡ್‌ ನಲ್ಲಿರುವ ವ್ಯಕ್ತಿ ಬಂದು ಅವರ ಹೆಬ್ಬೆಟ್ಟನ್ನು ಕಂಪ್ಯೂಟರ್‌ಗೆ ನೀಡಿದ ಬಳಿಕವಷ್ಟೇ ಸರ್ಕಾರದಿಂದ ಅವರ ಕಾರ್ಡ್‌ಗೆ ಪಡಿತರ ಬಿಡುಗಡೆಯಾಗುತ್ತದೆ. ಆದರೆ ತಾಲೂಕು ಸೇರಿದಂತೆ ರಾಜ್ಯದಲ್ಲಿಯೇ ಪಡಿತರ ವಿತರಣಾ ಆಪ್‌ಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಜನವರಿ ತಿಂಗಳು ಮುಗಿಯುತ್ತಿದ್ದರೂ ಇದು ವರೆಗೂ ತಾಲೂಕಿನ ಯಾವ ನ್ಯಾಯಬೆಲೆ ಅಂಗಡಿ ಯಲ್ಲೂ ಪಡಿತರ ವಿತರಿಸಿಲ್ಲ. ತಾಲೂಕಿನಲ್ಲಿ ಹೆಬ್ಬೆಟ್ಟು ಪಡೆಯುವ ಆಪ್‌ ಸಮಸ್ಯೆಯಿಂದ ಜನರು ಒಂದು ವಾರದಿಂದ ಪಡಿತರ ಪಡೆಯಲು ಅಲೆದಾಡುತ್ತಿದ್ದಾರೆ.

ಪರಿತರಕ್ಕೆ ನಾಲ್ಕೇ ದಿನ ಬಾಕಿ: ನಾಲ್ಕು ದಿನ ಕಳೆದರೆ ಜನವರಿ ತಿಂಗಳು ಮುಕ್ತಾಯವಾಗಿ ಫೆಬ್ರವರಿ ತಿಂಗಳು ಆರಂಭವಾಗುತ್ತದೆ. ಜನವರಿ ತಿಂಗಳ ಬಾಪು ಪಡಿತರ ಫೆಬ್ರವರಿ ತಿಂಗಳು ನೀಡುವುದಿಲ್ಲ. ಸಮಸ್ಯೆ ಅರಿತಿರುವ ಮಡಿಕೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನವರಿ ತಿಂಗಳ ಪಡಿತರ ಹಿಂದಿನ ಪದ್ಧತಿಯಂತೆ ವಿತರಿಸಲು ಅನುಮತಿ ನೀಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕೆಂದು ಪಡಿತರದಾರರು ಮನವಿ ಮಾಡಿದ್ದಾರೆ.

ಕಂಪ್ಯೂಟರ್‌ ಸೆಂಟರ್‌ಗಳಲ್ಲಿ: ಸರ್ಕಾರದಿಂದ ತೆರೆದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಆಪ್‌ ಓಪನ್‌ ಆಗದೆ, ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಮಾತ್ರ ಓಪನ್‌ ಆಗುತ್ತಿರುವುದನ್ನು ಕಂಡು ಪಡಿತರದಾರರು ಹಣ ಕೊಟ್ಟರೂ ಪರವಾಗಿಲ್ಲ, ಸದ್ಯ ಆ್ಯಪ್‌ ಓಪನ್‌ ಆಗಿ ಹೆಬ್ಬಟ್ಟು ಕೊಟ್ಟರೆ ಸಾಕೆಂದು ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳ ಮುಂದೆ ಕೆಲಸ ಬಿಟ್ಟು ಸರದಿಯಲ್ಲಿ ನಿಂತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೆಚ್‌. ಗುರು...

  • ಮೇಲುಕೋಟೆ: ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆ ಹೊಂದಿರುವ ಭಾರತದ ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಏಕ್‌ ಭಾರತ್‌...

  • ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ನೀರಿನ ಬವಣೆ ನೀಗಿಸುವ ಸಲುವಾಗಿ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ...

  • ಮಂಡ್ಯ: ಮೇಲುಕೋಟೆಯಲ್ಲಿ ಫೆ.18ರಿಂದ 22ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌...

  • ಮಂಡ್ಯ:ಪ್ರಾಪ್ತ ವಯಸ್ಸಿಗೆ ಮುನ್ನವೇ ನಿಶ್ಚಿತಾರ್ಥ ಮಾಡುತ್ತಿದ್ದ ಬಾಲಕಿಯನ್ನು ರಕ್ಷಣೆ ನೀಡಲು ಕರೆತಂದು ನಿಯಮಬಾಹಿರವಾಗಿ ಹಲವು ದಿನ ವಶದಲ್ಲಿಟ್ಟುಕೊಂಡಿರುವ...

ಹೊಸ ಸೇರ್ಪಡೆ