ಮಂಡ್ಯ: 72ಕ್ಕೇರಿದ ಕೋವಿಡ್‌ 19 ಸೋಂಕು


Team Udayavani, May 18, 2020, 7:11 AM IST

dakhale

ಮಂಡ್ಯ: ಜಿಲ್ಲೆಯಲ್ಲಿ ಮೊದಲ ಬಾರಿಗೆ ದಾಖಲೆಯ 22 ಕೋವಿಡ್‌ 19 ಸೋಂಕು ಪ್ರಕರಣಗಳು ಭಾನುವಾರ ದೃಢಪಟ್ಟಿವೆ. ಇವರೆಲ್ಲರೂ ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲೂಕಿಗೆ ಸೇರಿದವರು. 22 ಮಂದಿ ಸೋಂಕಿತರಲ್ಲಿ 17  ಮಂದಿ ಮುಂಬೈನಿಂದ ಬಂದವರಾ ಗಿದ್ದರೆ, ಪಿ-869ರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 72ಕ್ಕೇರಿದೆ.

ಒಟ್ಟು 22 ಸೋಂಕಿತರಲ್ಲಿ 10 ಮಂದಿ ಪುರಷರು, 9 ಮಂದಿ ಮಹಿಳೆಯರು, ಓರ್ವ ಬಾಲಕಿ, ಓರ್ವ ಬಾಲಕ ಹಾಗೂ 1 ವರ್ಷದ ಗಂಡು ಮಗು ಸೇರಿದೆ. ಇವರಲ್ಲಿ 19 ಮಂದಿ ಕೆ.ಆರ್‌.ಪೇಟೆ ತಾಲೂ ಕಿಗೆ ಸೇರಿದವರಾಗಿದ್ದರೆ, ಮೂವರು ನಾಗಮಂಗಲ ತಾಲೂಕಿಗೆ ಸೇರಿದ್ದಾರೆ ಎಂದು  ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದ್ದಾರೆ. ಪಿ-1097 ರಿಂದ ಪಿ-1117 ಹಾಗೂ ಪಿ-1125 ಸೋಂಕಿತ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ಪಿ-1108, ಪಿ-1112, ಪಿ-1113, ಪಿ-1114 ಹಾಗೂ ಪಿ-1125 ಸೋಂಕಿತರು ಪಿ-869 ವ್ಯಕ್ತಿಯೊಂದಿಗೆ ಪ್ರಾಥಮಿಕ  ಸಂಪರ್ಕ ಹೊಂದಿರುವವರು.

ಪಿ-869ರ ಸಂಪರ್ಕದಲ್ಲಿದ್ದ ಐವರಿಗೆ ಸೋಂಕು: ಮುಂಬೈನಿಂದ ಬಂದಿದ್ದ ಕೆ.ಆರ್‌.ಪೇಟೆ ತಾಲೂಕು ಮರುವನಹಳ್ಳಿ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ  ಪಿ-1108 ಸೋಂಕಿತ 75 ವರ್ಷದ ವೃದ್ಧೆ, ಪಿ-1112 ಸೋಂಕಿತೆ 65 ವರ್ಷದ ಗೃಹಿಣಿ, ಪಿ-1113 ಸೋಂಕಿತೆ 60 ವರ್ಷದ ಮಹಿಳೆ, ಪಿ-1114 ಸೋಂಕಿತ 28 ವರ್ಷದ ಯುವಕ ಬೆಂಗಳೂರಿನ ಮೂಡಲಪಾಳ್ಯ ದಲ್ಲಿ ಕೆಲಸ ಮಾಡುತ್ತಿದ್ದು,  ಯುಗಾದಿ ವೇಳೆ ಕೆ.ಆರ್‌. ಪೇಟೆಗೆ ಆಗಮಿಸಿದ್ದರು. ಪಿ-1125 ಸೋಂಕಿತ 53 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ಇವರೆಲ್ಲರೂ ಮರುವನಹಳ್ಳಿಯವರು. ಪಿ-1105 ಸೋಂಕಿತೆ 48 ವರ್ಷದ ಮಹಿಳೆ ಪಿ-1104ರ ಹೆಂಡತಿ, ಪಿ-1106  ಸೋಂಕಿತೆ 32 ವರ್ಷದ ಮಹಿಳೆ ಪಿ-1104ರ ಮಗಳಾಗಿದ್ದಾರೆ. ಪಿ.1107 ಸೋಂಕಿತ 32 ವರ್ಷದ ವ್ಯಕ್ತಿ. ಮುಂಬೈ ನಲ್ಲಿ ಹೋಟೆಲ್‌ ಉದ್ಯಮಿ, ಈತ 1104ರ ಅಳಿಯ. ಪಿ-1100 ಸೋಂಕಿತೆ 11 ವರ್ಷದ ಬಾಲಕಿ ಪಿ-1104ರ ಮೊಮ್ಮಗಳು. ಪಿ-1099  ಸೋಂಕಿತ 9 ವರ್ಷದ ಬಾಲಕ ಪಿ-1004 ಸೋಂಕಿತನ ಮಗ. ಪಿ-1101 ಸೋಂಕಿತ 8 ವರ್ಷದ ಬಾಲಕ, ಈತ  ಪಿ-1104ರ ಮೊಮ್ಮಗ. ಸಹ ಪ್ರಯಾಣಿಕರು: ಪಿ.1109 ಸೋಂಕಿತ 44 ವರ್ಷದ ವ್ಯಕ್ತಿ ಮುಂಬೈ ಸಾಂತಾಕ್ರೂಸ್‌ನಲ್ಲಿ  ಕ್ಸಿ  ಚಾಲಕನಾಗಿದ್ದು, ಮೇ 11ರಂದು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಬಂದಿದ್ದರೆ,

ಪಿ.1110 ಸೋಂಕಿತ 52 ವರ್ಷದ ವ್ಯಕ್ತಿ ಮುಂಬೈ ಬಿರಾ ಕಂಪ ನಿಯಲ್ಲಿ ಗಾರ್ಡ್‌ನ್‌ ಆಗಿ ಕೆಲಸ ಮಾಡುತ್ತಿದ್ದನು. ಇವರು ಮೇ 13ರಂದು ಬಸ್‌ನಲ್ಲಿ  26 ಮಂದಿ ಸಹ ಪ್ರಯಾಣಿಕರೊಂದಿಗೆ ಆಗಮಿಸಿದ್ದರು. ಪಿ.1111 ಸೋಂಕಿತೆ 35 ವರ್ಷದ ಗೃಹಿಣಿ ಮುಂಬೈ ಸಾಂತಾಕ್ರೂಜ್‌ ವಾಸಿ. ಪಿ-1115 ಸೋಂಕಿತೆ 32 ವರ್ಷದ ಗೃಹಿಣಿ. ಮುಂಬೈನ ಜಾಧವನಗರ ನಿವಾಸಿ. ಇವರಿಬ್ಬರೂ ಟಿಟಿ  ವಾಹನದಲ್ಲಿ ಆಗಮಿಸಿದ್ದು, ಪಿ-1115ರ ಮಹಿಳೆ ನಾಗಮಂಗಲಕ್ಕೆ 12ರಂದು ಆಗಮಿಸಿದ್ದರು. ಪಿ-1116 ಸೋಂಕಿತ 39 ವರ್ಷದ ಯುವಕ, ಮುಂಬೈನ ಕಮಾನಿಕುರಾದಲ್ಲಿ ಕ್ಯಾಮರಾಮನ್‌ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪಿ-1117  ಸೋಂಕಿತ 2 ವರ್ಷದ ಮಗು ಪಿ-1116ರ ಮಗ. ತಂದೆ-ಮಗು ಕಾರಿನ ಮೂಲಕ ಮೇ 12ರಂದು ಬೆಳ್ಳೂರು ಚೆಕ್‌ಪೋಸ್ಟ್‌ಗೆ ಬಂದಿದ್ದು, 13ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ  ಸೋಂಕು ದೃಢಪಟ್ಟಿದೆ.

ಒಂದೇ ಕುಟುಂಬದ 7 ಮಂದಿಗೆ ಸೋಂಕು: ಮುಂಬೈನಿಂದ ಟಿಟಿ ಬಸ್‌ನಲ್ಲಿ ಬಂದವರಲ್ಲಿ ಪಿ-1098, ಪಿ-1099, ಪಿ-1100, ಪಿ-1101, ಪಿ-1102, ಪಿ-1103, ಪಿ-1104, ಪಿ-1105, ಪಿ-1106, ಪಿ-1107, ಪಿ-1115ರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ  ಮೇ 11ರಂದು ಮುಂಬೈನಿಂದ ಹೊರಟು ಮೇ 12ರಂದು ಕೆ.ಆರ್‌.ಪೇಟೆಯ ಆನೆಗೊಳ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದಾರೆ. 13ರಂದು ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈನ ವಿಲೇಪಾರ್ಲೆ,  ಸಾಂತಾಕ್ರೂಜ್‌ ವಾಸಿಗಳಾಗಿದ್ದಾರೆ. ಪಿ.1104 58 ವರ್ಷದ ವ್ಯಕ್ತಿ, ಈತ ಮುಂಬೈ ತೋಟವೊಂ ದರಲ್ಲಿ ಕೆಲಸ ಮಾಡುತ್ತಿದ್ದ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರೊಂದಿಗೆ ಕೆ.ಆರ್‌.ಪೇಟೆಗೆ ಬಂದಿದ್ದಾರೆ. 13ರಂದು ಪರೀಕ್ಷೆಗೊಳಪಡಿಸಿದಾಗ  ಸಿಟವ್‌ ಬಂದಿದೆ. ಈ ವ್ಯಕ್ತಿಯ ಕುಟುಂಬಕ್ಕೆ  ಸೇರಿದ 7 ಮಂದಿಗೆ ಸೋಂಕು ದೃಢಪಟ್ಟಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.