ಶುಭ ಸಮಾರಂಭಗಳಲ್ಲಿ ಹೂಕುಂಡ ಕೊಟ್ಟು ಸ್ವಾಗತಿಸಿ

ಪ್ಲಾಸ್ಟಿಕ್‌ ನಿರ್ಮೂಲನೆಗೆ ಜನರ ಸಹಕಾರ ಅಗತ್ಯ: ಡೀಸಿ ಸಾರ್ವಜನಿಕರಿಗೆ ಹೂ ಕುಂಡ ವಿತರಣೆಗೆ ಚಾಲನೆ

Team Udayavani, Feb 13, 2020, 3:57 PM IST

ಮಂಡ್ಯ: ಶುಭ ಸಮಾರಂಭಗಳಲ್ಲಿ ಸಾರ್ವಜನಿಕರು, ಹಿರಿಯರು, ಸ್ನೇಹಿತರಿಗೆ ಶುಭಕೋರುವ ಸಮಯದಲ್ಲಿ ಹೂವಿನ ಕುಂಡಗಳನ್ನು ನೀಡುವ ಮೂಲಕ ಸ್ವಾಗತಿಸುವುದರೊಂದಿಗೆ ಪ್ಲಾಸ್ಟಿಕ್‌ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮನವಿ ಮಾಡಿದರು.

ಬುಧವಾರ ತೋಟಗಾರಿಕೆ ಇಲಾಖಾ ಆವರಣದಲ್ಲಿ ನಡೆದ ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಜಾತಿಯ ಹೂವಿನ ಗಿಡಗಳ ಕುಂಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುಷ್ಪಕೃಷಿ ಪ್ರೋತ್ಸಾಹಿಸಿ: ಹೂಗುಚ್ಛಗಳ ತಯಾರಿಕೆಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್‌ ಬಳಸಲಾಗುತ್ತಿದೆ. ಹೂಗುತ್ಛಗಳು ಕೇವಲ 1 ರಿಂದ 2 ನಿಮಿಷ ಬಾಳಿಕೆ ಬರುವಂತಹವು. ಬಳಿಕ ಅವು ಕಸದ ಬುಟ್ಟಿ ಸೇರುತ್ತವೆ. ಅದರ ಬದಲು ಹೂವಿನ ಕುಂಡಗಳನ್ನು ನೀಡುವುದರಿಂದ ಪುಷ್ಪಕೃಷಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಬಿದಿರಿನ ಬುಟ್ಟಿಗಳಲ್ಲಿ ನೀಡುವುದರಿಂದ ಗುಡಿ ಕೈಗಾರಿಕೆಯನ್ನೂ ಉತ್ತೇಜಿಸಿ ದಂತಾಗುವುದು ಎಂದು ಹೇಳಿದರು.

ಸಕಾರಾತ್ಮಕ ಭಾವನೆ: ವಿವಿಧ ಬಗೆಯ ಹೂವಿನ ಕುಂಡಗಳನ್ನು ಕಚೇರಿ, ಮನೆಗಳಲ್ಲಿ ಇಡುವುದರಿಂದ ಹಸಿರಿನ ವಾತಾವರಣ, ಹೆಚ್ಚಿನ ಆಮ್ಲಜನಕ ಉತ್ಪಾದನೆಯೊಂದಿಗೆ ಸಕಾರಾತ್ಮಕ ಭಾವನೆಗಳು ಮೂಡುತ್ತವೆ. ದೀರ್ಘ‌ಕಾಲ ಬಾಳಿಕೆ ಬರುವ ಹೂವಿನ ಗಿಡಗಳು ಮನೆಯ ಸೊಬಗನ್ನು ಹೆಚ್ಚಿಸುತ್ತವೆ. ಆದ್ದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೂವಿನ ಕುಂಡಗಳನ್ನು ಶುಭ ಸಮಾರಂಭಗಳಲ್ಲಿ ಭಾಗವಹಿಸುವವರಿಗೆ ನೀಡುವಂತೆ ಕೋರಿದರು.

ಹೂವು, ಹಣ್ಣು ಗಿಡ: ಒಂದು ಹೂವಿನ ಕುಂಡಕ್ಕೆ 50 ರೂ. ಬಿದಿರಿನ ಬುಟ್ಟಿಗೆ 50 ರೂ. ಸೇರಿ 100 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಹಾಪ್‌ ಕಾಮ್ಸ್‌ಗಳಲ್ಲಿ ದೊರೆಯುವಂತೆಯೂ ವ್ಯವಸ್ಥೆ ಮಾಡಲಾಗಿದೆ. ಪುಷ್ಪಗಳ ಜೊತೆಗೆ ಹಣ್ಣಿನ ಗಿಡಗಳನ್ನೂ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ವಾರ್ತಾಧಿಕಾರಿ ಹರೀಶ್‌ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಜಿಲ್ಲೆಯಲ್ಲಿ 9 ಕಡೆ ಜ್ವರ ತಪಾಸಣೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ...

  • ಮಂಡ್ಯ: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ನಗರದೊಳಗೆ...

  • ನಾಗಮಂಗಲ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ತೀವ್ರವಾಗಿ ಹರಡುತ್ತಾ ಜನರನ್ನು ಆತಂಕ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 144 ನೇ ಸೆಕ್ಷನ್‌...

  • ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಕಳೆದ ಮಂಗಳವಾರ (ಮಾ.17) ಮೃತಪಟ್ಟಿದ್ದ ಪೆಲಿಕಾನ್‌ಗೆ ಹಕ್ಕಿಜ್ವರವಿಲ್ಲ ಎಂದು ಬೆಂಗಳೂರು ಹೆಬ್ಟಾಳದ...

  • ಮಂಡ್ಯ: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು...

ಹೊಸ ಸೇರ್ಪಡೆ