Udayavni Special

‘ಡಿಯರ್‌ ಕಾಮ್ರೆಡ್‌’ ತೆಲುಗು ಅವತರಣಿಕೆ ಪ್ರದರ್ಶನಕ್ಕೆ ವಿರೋಧ

ಕನ್ನಡ ಡಬ್ಬಿಂಗ್‌ ಸಿನಿಮಾ ಪ್ರದರ್ಶನಕ್ಕೆ ಕರವೇ ಆಗ್ರಹ • ಸಂಜಯ ಚಿತ್ರಮಂದಿರದ ಎದುರು ಪ್ರತಿಭಟನೆ

Team Udayavani, Jul 30, 2019, 4:09 PM IST

mandya-tdy-2

ಮಂಡ್ಯದ ಸಂಜಯ ಚಿತ್ರಮಂದಿರದ ಮುಂದೆ 'ಡಿಯರ್‌ ಕಾಮ್ರೆಡ್‌' ಚಿತ್ರದ ಕನ್ನಡ ಅವತರಣಿಕೆ ಪ್ರದರ್ಶಿಸುವಂತೆ ಒತ್ತಾಯಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯ: ಡಿಯರ್‌ ಕಾಮ್ರೆಡ್‌ ಕನ್ನಡ ಆವೃತ್ತಿ ಇದ್ದರೂ ತೆಲುಗು ಅವತರಣಿಕೆಯಲ್ಲಿ ಚಿತ್ರ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಸೋಮವಾರ ನಗರದ ಸಂಜಯ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದರು.

ಚಿತ್ರಮಂದಿರದ ಎದುರು ಜಮಾಯಿಸಿದ ರಕ್ಷಣಾ ವೇದಿಕೆ ಕಾರ್ಯಕರ್ತರು ಡಿಯರ್‌ ಕಾಮ್ರೆಡ್‌ ಸಿನಿಮಾವನ್ನು ತೆಲುಗು ಅವತರಣಿಕೆ ಬದಲು ಕನ್ನಡ ಅವತರಣಿಕೆಯಲ್ಲಿ ಪ್ರದರ್ಶಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ವಿಶ್ವದ ಎಲ್ಲ ಸಿನಿಮಾ, ಜ್ಞಾನ ಎಲ್ಲವೂ ಕನ್ನಡ ಭಾಷೆಯಲ್ಲೇ ಬರಬೇಕು. ಇದರಿಂದ ಕನ್ನಡ ಭಾಷೆ ಬೆಳೆಯುತ್ತದೆ. ಇದರ ಭಾಗವಾಗಿಯೇ ಕನ್ನಡ ಸಿನಿಮಾ ರಂಗದಲ್ಲಿ ಅಘೋಷಿತ ನಿಷೇಧ ಹೇರಿದ್ದ ಡಬ್ಬಿಂಗ್‌ ಸಿನಿಮಾ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟದ ಭಾಗವಾಗಿಯೇ ಡಿಯರ್‌ ಕಾಮ್ರೆಡ್‌ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಹೆಚ್.ಡಿ.ಜಯರಾಂ ಹೇಳಿದರು.

ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಶೇ.90ರಷ್ಟು ಕನ್ನಡ ಮಾತನಾಡುವ ಕನ್ನಡಿಗರಿರುವ ಜಿಲ್ಲೆಯಾಗಿದೆ. ನಂದಾ ಚಿತ್ರಮಂದಿರದಲ್ಲಿ ಡಿಯರ್‌ ಕಾಮ್ರೆಡ್‌ ಸಿನಿಮಾದ ಕನ್ನಡ ಅವತರಣಿಕೆ ಪ್ರದರ್ಶಿತವಾಗುತ್ತಿದೆ. ಹೀಗಿರುವಾಗ ಸಂಜಯ ಚಿತ್ರಮಂದಿರದಲ್ಲಿ ಅದೇ ಸಿನಿಮಾದ ತೆಲುಗು ಅವತರಣಿಕೆ ಪ್ರದರ್ಶಿಸುವ ಅನಿವಾರ್ಯತೆ ಏನಿದೆ. ಪರಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಂತ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ತಕ್ಷಣದಿಂದ ತೆಲುಗು ಬದಲಿಗೆ ಕನ್ನಡ ಆವೃತ್ತಿಯನ್ನೇ ಪ್ರದರ್ಶಿಸುವಂತೆ ಒತ್ತಾಯಿಸಿದರು.

ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎಲ್ಲ ಪರಭಾಷಾ ಚಿತ್ರಗಳು ಕನ್ನಡದಲ್ಲೇ ಡಬ್‌ ಆಗಿ ಪ್ರದರ್ಶನಗೊಳ್ಳಬೇಕು. ತಪ್ಪಿದಲ್ಲಿ ಪ್ರದರ್ಶನ ತಡೆಹಿಡಿಯಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಯಿತು. ಚಿತ್ರಮಂದಿರದ ವ್ಯವಸ್ಥಾಪಕ ಕುಶಾಲ್ ಗೌಡ ಮನವಿ ಸ್ವೀಕರಿಸಿ ಇಂದು ಸಂಜೆಯಿಂದಲೇ ಕನ್ನಡ ಆವೃತ್ತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸಂಪತ್‌ ಕುಮಾರ್‌, ಕಾವೇರಿ ಕಣಿವೆ ರೈತ ಒಕ್ಕೂಟದ ಜಿ.ಬಿ.ನವೀನ್‌ಕುಮಾರ್‌, ಎಂ,ಬಿ,ನಾಗಣ್ಣಗೌಡ, ಗಿರೀಗೌಡ, ಚಿತ್ರ ನಿರ್ದೇಶಕ ರವಿಕೀರ್ತಿ, ವಿಶ್ವಾಸ್‌ ಇತರರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

.0.0.

ಮುಂಬೈvs ಆರ್ ಸಿಬಿ ಬಲಾಢ್ಯರ ಕಾದಾಟ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ನಿತೀಶ್ 4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

ಫ್ರಾನ್ಸ್‌ನಲ್ಲಿ ಮತ್ತೆ ಕೋವಿಡ್‌ ಅಬ್ಬರ: ಮತ್ತೂಮ್ಮೆ ಲಾಕ್‌ಡೌನ್‌ ಜಾರಿಗೆ ಸಜ್ಜು ?

ಫ್ರಾನ್ಸ್‌ನಲ್ಲಿ ಮತ್ತೆ ಕೋವಿಡ್‌ ಅಬ್ಬರ: ಮತ್ತೂಮ್ಮೆ ಲಾಕ್‌ಡೌನ್‌ ಜಾರಿಗೆ ಸಜ್ಜು ?

ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದು ಅವಧಿ ನವೆಂಬರ್ 30ರವರೆಗೆ ವಿಸ್ತರಣೆ

ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದು ಅವಧಿ ನವೆಂಬರ್ 30ರವರೆಗೆ ವಿಸ್ತರಣೆ

ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಜೆಡಿಎಸ್‌ ಕಾರ್ಯಕರ್ತರ ಕಡೆಗಣನೆ

ಜೆಡಿಎಸ್‌ ಕಾರ್ಯಕರ್ತರ ಕಡೆಗಣನೆ

ಅಧ್ಯಕ್ಷ ಸ್ಥಾನಕ್ಕಾಗಿ ಕೈ-ಕಮಲ ಕಸರತ್ತು

ಅಧ್ಯಕ್ಷ ಸ್ಥಾನಕ್ಕಾಗಿ ಕೈ-ಕಮಲ ಕಸರತ್ತು

ಲಾಕ್‌ಡೌನ್ ಸಂದರ್ಭದಲ್ಲಿಯೇ ಕಂಪ್ಯೂಟರ್‌ಗಳ ಕಳ್ಳತನ: 7 ಮಂದಿ ಆರೋಪಿಗಳ ಬಂಧನ

ಅಂತರ್ ಜಿಲ್ಲಾ ಕಳ್ಳರ ಬಂಧನ; 61 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

mandya-tdy-2

ಪೊಲೀಸರಿಂದ ಸಾಂಪ್ರದಾಯಿಕ ಆಯುಧ ಪೂಜೆ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

.0.0.

ಮುಂಬೈvs ಆರ್ ಸಿಬಿ ಬಲಾಢ್ಯರ ಕಾದಾಟ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

avalu-tdy-1

ಗೃಹಿಣಿಯೇ ಸಾಧಕಿ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ನಿತೀಶ್ 4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.