ಮಂಗಳೂರು ಜ್ಯುವೆಲ್ಲರಿ ಕಳವು ಕೇಸ್:ಇಬ್ಬರು ಅಘ್ಘಾನಿ ಪ್ರಜೆ ಸೇರಿ ಮೂವರ ಸೆರೆ

Team Udayavani, Sep 26, 2019, 2:59 PM IST

ಮಂಗಳೂರು: ಮಂಗಳೂರಿನ ಭವಂತಿ ಸ್ಟ್ರೀಟ್‍ನಲ್ಲಿನ ಅರುಣ್ ಜ್ಯುವೆಲ್ಲರ್ಸ್‍ನಲ್ಲಿ ಇತ್ತೀಚೆಗೆ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಘ್ಘಾನಿಸ್ತಾನದ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಕಾಸರಗೋಡಿನ ಇಲ್ಲಾಪು ವಲಪ್ಪು, ಕಲ್ನಾಡ್ ಗ್ರಾಮ, ಚೆಂಬರಿಕಾ, ಚೆಮ್ನಾಡ್‍ನ ಮುತಾಸಿಮ್ ಸಿ ಎಮ್ ಅಲಿಯಾಸ್ ತಸ್ಲೀಮ್ (39) , ಅಪ್ಘಾನಿಸ್ತಾನದ ಕಾಬೂಲ್ ಜಿಲ್ಲೆಯ ಕಾಬೂಲ್ ನ, ಪ್ರಸ್ತುತ ನ್ಯೂ ಡೆಲ್ಲಿಯ ಕಿರ್ಕಿ ಎಕ್ಸ್ ಟೆನ್ಷನ್ ನ ಮಾಳವೀಯಾ ನಗರದಲ್ಲಿ ನೆಲೆಸಿರುವ ವಲಿ ಮೊಹಮ್ಮದ್ ಶಫಿ ಅಲಿಯಾಸ್ ವಲಿ (45), ಅಜೀಮ್ ಮೊಹಮ್ಮದ್ ಕುರಮ್ ಅಲಿಯಾಸ್ ಅಜೀಂ (22) ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಾಸರಗೋಡಿನ ಕುನ್ನಿ ಅಹಮ್ಮದ್, ಅಪ್ಘಾನಿಸ್ತಾನದ ಫರೀದ್ ತಲೆ ಮರೆಸಿಕೊಂಡಿರುತ್ತಾರೆ.

ಈ ಕಳವು ಪ್ರಕರಣದಲ್ಲಿ ಚಿನ್ನಾಭರಣ, ಬೆಳ್ಳಿಯ ಆಭರಣ ಸೇರಿದಂತೆ ಓಟ್ಟು 1,12,06,871 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದು, ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಮಾಹಿತಿ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ