ಹಿಂದುಳಿದ ವರ್ಗಕ್ಕೆ ಅರಸು ಧ್ವನಿಯಾಗಿದ್ದರು..

ಅರಸು ಸಾಮಾಜಿಕ ನ್ಯಾಯದಡಿ ಸ್ಪರ್ಶಿಸದ ಕ್ಷೇತ್ರಗಳಿಲ್ಲ • 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿಜಯಶಂಕರ್‌ ಅಭಿಮತ

Team Udayavani, Jun 7, 2019, 12:09 PM IST

ಅರಸು ಜಾಗೃತಿ ಅಕಾಡೆಮಿ ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 37ನೇ ಪುಣ್ಯಸ್ಮರಣೆಯಲ್ಲಿ ಗಣ್ಯರಿಗೆ 'ಧ್ವನಿ ಕೊಟ್ಟ ಧಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು: ಮೀಸಲಾತಿ, ಧ್ವನಿ ಇಲ್ಲದ ಹಿಂದುಳಿದ ಸಮುದಾಯಗಳಿಗೆ ಧ್ವನಿ ಕೊಟ್ಟ ಮೇರು ವ್ಯಕ್ತಿ ದೇವರಾಜ ಅರಸು ಎಂದು ಮಾಜಿ ಸಂಸದ ಸಿ.ಎಚ್. ವಿಜಯಶಂಕರ್‌ ಹೇಳಿದರು.

ಅರಸು ಜಾಗೃತಿ ಅಕಾಡೆಮಿ ಗುರುವಾರ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರ 37ನೇ ಪುಣ್ಯಸ್ಮರಣೆ ಮತ್ತು ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಮೇಲ್ವರ್ಗಕ್ಕೂ ಸೇರದೆ, ಕೆಳ ವರ್ಗಕ್ಕೂ ಸೇರದೆ ಮಧ್ಯಮ ವರ್ಗವಾಗಿದ್ದ ಹಿಂದು ಳಿದ ವರ್ಗಗಳಿಗೆ ಧ್ವನಿ ಕೊಟ್ಟಿದ್ದು ಡಿ.ದೇವರಾಜ ಅರಸು. ನಾವೆಲ್ಲರೂ ಇಂದು ಅಂಜಿಕೆಯಿಲ್ಲದೆ ಮಾತ ನಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ದೇವರಾಜ ಅರಸು. ಅವರು ಜಾರಿಗೆ ತಂದ ಭೂಸುಧಾರಣೆ ಕಾಯಿದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಧ್ವನಿ ಇಲ್ಲದ ಜನಾಂಗಗಳಿಗೆ ಧ್ವನಿ ಕೊಟ್ಟ ಕಾರ್ಯಕ್ರಮಗಳು ಇಂದಿಗೂ ಪ್ರಸಿದ್ಧಿಯಾಗಿವೆ ಎಂದು ಹೇಳಿದರು.

ಯಾರಲ್ಲಿ ಉಪಕಾರ ಸ್ಮರಣೆ ಇದೆಯೋ ಅವರು ದೇವರಾಜ ಅರಸರನ್ನು ನೆನೆಯಬೇಕಿತ್ತು. ಇಂದಿನ ಕಾರ್ಯಕ್ರಮ ಜಾತ್ರೆಯಂತಿರಬೇಕಿತ್ತು. ಅರಸು ಸಾಮಾಜಿಕ ನ್ಯಾಯದಡಿ ಸ್ಪರ್ಶಿಸದ ಕ್ಷೇತ್ರಗಳಿಲ್ಲ. ಹಾಗೆ ಅವರನ್ನು ಸಾಮಾಜಿಕ ನ್ಯಾಯಕ್ಕೆ ಸೀಮಿತ ಮಾಡುವುದೂ ಸರಿಯಲ್ಲ ಎಂದರು.

ಮೈಸೂರು ಜಿಲ್ಲೆಗೆ ವರುಣ ನಾಲೆ ಸಿಗಬೇಕೆಂಬ ಬದ್ಧತೆಯಿಂದ ಮಂಡ್ಯದ ಜನರ ವಿರೋಧ ಕಟ್ಟಿ ಕೊಂಡು ನಾಲೆ ಸ್ಥಾಪಿಸಿದರು. ಅಂದುಕೊಂಡ ಕಾರ್ಯ ಬಿಡದೆ ಮಾಡುವ ಛಲಗಾರ. ಅಂಬೇಡ್ಕರ್‌ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿದಂತೆ ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ನೀಡಿದ್ದು ಅರಸು ಎಂದರು.

ಅರಸು ಪ್ರೇರಣೆ, ವಾಜಪೇಯಿ ಆದರ್ಶ: ತನ್ನ ರಾಜಕೀಯ ಜೀವನದಲ್ಲಿ ಡಿ. ದೇವರಾಜ ಅರಸು ಪ್ರೇರಣೆಯಾಗಿದ್ದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮುತ್ಸದ್ಧಿಯಾಗಿ ಆದರ್ಶವಾಗಿದ್ದಾರೆ. ಲಾಲ್ ಬಹದ್ಧೂರ್‌ ಶಾಸ್ತ್ರಿ ಕೂಡ ಸ್ಮರಣೀಯರು. ಮೈಸೂರಿನಲ್ಲಿ ಡಿ.ದೇವರಾಜ ಅರಸರ ಪ್ರತಿಮೆ ಸ್ಥಾಪಿಸಲು ಮೈತ್ರಿ ಸರ್ಕಾರದೊಂದಿಗೆ ಮಾತನಾಡು ತ್ತೇನೆ. ಇದುವರೆಗೆ ಮುಖ್ಯಮಂತ್ರಿಗಳನ್ನು ಭೇಟಿ ಯಾಗುವ ಸಂದರ್ಭ ಬಂದಿಲ್ಲ. ಆದರೆ, ಅರಸರ ಪ್ರತಿಮೆ ಸ್ಥಾಪನೆಗೆ ತಾನೇ ಭೇಟಿಯಾಗುತ್ತೇನೆಂದರು.

ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್‌, ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಹಿಂದುಳಿದ ವರ್ಗಗಳ ಮೀಸ ಲಾತಿಯು ಇಂದಿಗೂ ಬದಲಾಗಿಲ್ಲ. ಈಗಿನ ಮೀಸ ಲಾತಿ ಅವೈಜ್ಞಾನಿಕವಾಗಿದ್ದು ಈ ಸಂಬಂಧ ರಾಜ್ಯಾದ್ಯಂತ ಹೋರಾಟದ ಅಗತ್ಯವಿದೆ. ದುರಾದೃಷ್ಟವಶಾತ್‌ ಅರಸು ಜಾರಿಗೆ ತಂದಿದ್ದ ಒಬಿಸಿ ಮೀಸಲಾತಿ ಇಂದಿಗೂ ಜಾರಿಯಾಗದೆ, 1994ರಲ್ಲಿ ಆಗಿನ ಸಿಎಂ ಎಂ.ವೀರಪ್ಪ ಮೊಯ್ಲಿ ಜಾರಿಗೆ ತಂದಿರುವ ಒಂದು ವರ್ಷದ ಮೀಸಲಾತಿ ಇಂದಿಗೂ ಜಾರಿಯಲ್ಲಿದೆ. ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಒಬಿಸಿ ವರ್ಗದವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದರು.

ಡಾ. ಎಂ.ಜಿ.ಆರ್‌. ಅರಸ್‌ ಮಾತನಾಡಿ, ಮೈಸೂರಿ ನಿಂದ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಡಿ. ದೇವರಾಜ ಅರಸರ ಪ್ರತಿಮೆ ನಗರದಲ್ಲಿ ಇಲ್ಲದಿರು ವುದು ನೋವಿನ ಸಂಗತಿ ಎಂದರು.

ಅರಸು ಅಭಿವೃದ್ಧಿ ಮಾದರಿಯಿಂದ ಪ್ರೇರಣೆ: ಬಲಿಷ್ಠ ಜಾತಿಗಳ ಹಿಡಿತಕ್ಕೆ ಒಳಗಾಗಿದ್ದ ಕೆಪಿಎಸ್ಸಿಯಲ್ಲಿ ಹಲವು ರೀತಿಯ ಬದಲಾವಣೆ ತಂದು, ಅಲ್ಲಿ ದಲಿತ ಮತ್ತು ಹಿಂದುಳಿದವರಿಗೂ ಅವಕಾಶ ಕಲ್ಪಿಸುವಂತೆ ಮಾಡಿದ್ದು ಅರಸು ಅವರು. 70ರ ದಶಕದಲ್ಲಿ ಇಂದಿರಾಗಾಂಧಿ ಅವರ 20 ಅಂಶಗಳನ್ನು ದೇಶದಲ್ಲೇ ಉತ್ತಮವಾಗಿ ಜಾರಿಗೆ ತಂದ ರಾಜ್ಯ ಕರ್ನಾಟಕ. ಆಗ ಅರಸು ಅವರೇ ಮುಖ್ಯಮಂತ್ರಿಯಾಗಿದ್ದರು. ಈ ವೇಳೆಗೆ ಅರಸು ಅವ ರನ್ನು ಮಹಾಭ್ರಷ್ಟ, ಗೂಂಡಾಗಳನ್ನು ಬೆಳೆಸುತ್ತಿರುವ ಮುಖ್ಯಮಂತ್ರಿ ಎಂದು ಅನೇಕರು ಟೀಕಿಸಿದರು. ಬಲಿಷ್ಠ ಜಾತಿಗಳ ರಾಜಕೀಯ ಕುತಂತ್ರಕ್ಕೆ ಒಳಗಾಗಿ, ಪಕ್ಷಾಂತರ ಮಾಡುವ ಶಾಸಕರನ್ನು ಹಿಡಿದಿಟ್ಟುಕೊಳ್ಳ ಬೇಕಿತ್ತು. ಅವರ ಸ್ವಾರ್ಥಕ್ಕೆ ಎಂದೂ ಭ್ರಷ್ಟ ರಾಜಕೀಯ ಮಾಡಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಂ.ಜಿ.ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ರಂಗಭೂಮಿ ಕಲಾವಿದ ನಾ. ನಾಗಚಂದ್ರ, ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರ ಶೇಖರ್‌, ಕನ್ನಡ ಪರಿಚಾರಕ ಕೊ.ಸು.ನರಸಿಂಹ ಮೂರ್ತಿ, ಅರಸು ಮಂಡಳಿ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‌ ಜಿ.ಅರಸ್‌, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್‌ ಅವರಿಗೆ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್‌.ಜಿ.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಸಂಧ್ಯಾ ಸುರಕ್ಷಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌. ನಟರಾಜ ಜೋಯಿಸ್‌, ಎಂಸಿಸಿಐ ಅಧ್ಯಕ್ಷ ಎ.ಎಸ್‌. ಸತೀಶ್‌, ಅನ್ವೇಷಣಾ ಸೇವಾ ಟ್ರಸ್ಟಿನ ಗೌರವ ಕಾರ್ಯದರ್ಶಿ ಅರಮನಾಥರಾಜೇ ಅರಸ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಗಲಕೋಟೆ: ಕಳೆದ ತಿಂಗಳ ಮೂರು ನದಿಗಳ ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ಜನರು ಈಗ ಡೆಂಘೀ ಜ್ವರ ಉಲ್ಬಣಗೊಂಡಿರುವುದರಿಂದ ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ.ಜಿಲ್ಲೆಯಲ್ಲಿ...

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...