ಹುಲಿ ದಾಳಿಗೆ ರಾಸು ಬಲಿ: ಕಾರ್ಯಾಚರಣೆ

Team Udayavani, Sep 7, 2019, 3:00 AM IST

ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು, ಮತ್ತೊಂದು ಜಾನುವಾರು ಬಲಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ಕೆ.ಜಿ.ಹೆಬ್ಬನಕುಪ್ಪೆಯ ತರಗನ್‌ ಎಸ್ಟೇಟ್‌ನಲ್ಲಿ ಎಸ್ಟೇಟ್‌ ಮಾಲೀಕರಿಗೆ ಸೇರಿದ ಜಾನುವಾರು ಬಲಿಯಾಗಿದ್ದು, ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು-ತಿಂದು ಹಾಕಿದೆ.

ಘಟನೆ ವಿವರ: ಜಾನುವಾರುಗಳನ್ನು ಎಸ್ಟೇಟ್‌ನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಒಂದು ಜಾನುವಾರು ಹೊರತು ಪಡಿಸಿ, ಉಳಿದೆಲ್ಲ ಜಾನುವಾರುಗಳು ಗುರುವಾರ ಸಂಜೆ ವಾಪಸ್ಸಾಗಿದ್ದವು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಆರ್‌ಎಫ್‌ಒ ಹನುಮಂತರಾಯ ಹಾಗೂ ಸಿಬ್ಬಂದಿ ಎಸ್ಟೇಟ್‌ನಲ್ಲಿ ಸಾಕಾನೆಗಳ ಸಹಾಯದಿಂದ ಕೂಂಬಿಂಗ್‌ ನಡೆಸಿದ ವೇಳೆ ಹುಲಿ ದಾಳಿ ನಡೆಸಿದ್ದು, ಜಾನುವಾರ ಸಾವಿಗೀಡಾಗಿರುವುದು ಪತ್ತೆಯಾಗಿದೆ.

ಹುಲಿ ಪತ್ತೆಗೆ ಸಿಸಿ ಕ್ಯಾಮೆರಾ: ಇದೀಗ ಸ್ಥಳದಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಹುಲಿಯೋ, ಹುಲಿ ಮರಿಯೋ ಎಂಬುದನ್ನು ತಿಳಿದು ಸೆರೆ ಹಿಡಿಯಲು ಬೋನ್‌ ಇಡಲಾಗುವುದು ಎಂದು ಅರಣ್ಯಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ವರ್ಷದಿಂದ ಹುಲಿ ಉಪಟಳ: ಕಳೆದ ಒಂದು ವರ್ಷದಿಂದೀಚೆಗೆ ಆಡು-ಕುರಿ ಸೇರಿದಂತೆ 15ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಈ ಭಾಗದಲ್ಲಿ ಜನರು ಓಡಾಡಲು ಹೆದರುತ್ತಿದ್ದು, ಹುಲಿ ಸೆರೆ ಹಿಡಿದು ಆತಂಕವನ್ನು ದೂರಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೈಸೂರು/ ಬೆಂಗಳೂರು: ಪಾಕಿಸ್ಥಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯಾ ಲಿಯೋನಾಗೆ ನಕ್ಸಲ್‌ ನಂಟು ಇರುವುದು ಸಾಬೀತಾ ಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ...

  • ಮೈಸೂರು: ಕೃಷಿ ಹೆಮ್ಮೆಯ, ನೆಮ್ಮದಿಯ ಕೆಲಸ ಎನ್ನುವಂತಾಗಬೇಕಾದರೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಕೃಷಿಯನ್ನು ಲಾಭದಾಯಕ ಕಸುಬಾಗಿಸಲು ತಮ್ಮ ಸರ್ಕಾರ...

  • ಮೈಸೂರು ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವನ ದೇಗುಲಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ಶಿವನಾಮ ಸ್ಮರಣೆ ಮಾರ್ದನಿಸಿತು. ವಿಶೇಷ ಪೂಜೆ, ಅಭಿಷೇಕ,...

  • ಮೈಸೂರು: ರಂಗಭೂಮಿ ಕಟ್ಟಲು ಮತ್ತು ರಂಗಾಯಣ ಬೆಳೆಸಲು ನಾನು ಭದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘ ಪರಿವಾರದ ಹಿಡನ್‌ ಅಜೆಂಡಾವನ್ನಾಗಲಿ ಅಥವಾ ಬಿಜೆಪಿಯ...

  • ಮೈಸೂರು: ಮಹಾಪರಾಕ್ರಮಿ, ಮೃದು ಮನಸ್ಸಿನವನಾಗಿದ್ದ ಶಿವಾಜಿ ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತಿದ್ದ. ಜೊತೆಗೆ ಉತ್ತಮ ಆಡಳಿತದ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ...

ಹೊಸ ಸೇರ್ಪಡೆ