Udayavni Special

31ಕ್ಕೆ ದಸರಾ ಗಜಪಡೆ 2ನೇ ತಂಡ ಅರಮನೆಗೆ

Team Udayavani, Aug 26, 2017, 4:37 PM IST

mys 2.jpg

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಗಜಪಡೆಯ 2ನೇ ತಂಡ ಆ.31ರಂದು ಅರಮನೆ ಸೇರಲಿವೆ. ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಿವಿಧ ಆನೆ ಕ್ಯಾಂಪ್‌ಗಳಿಂದ ಅಂದು ಬೆಳಗ್ಗೆ ಲಾರಿಗಳಲ್ಲಿ ಹೊರಡುವ 7 ಆನೆಗಳು ಮಧ್ಯಾಹ್ನದ ವೇಳೆಗೆ ಅರಮನೆಗೆ ತಲುಪಲಿವೆ. ದಸರಾ ಗಜಪಡೆ 2ನೇ ತಂಡದಲ್ಲಿ 2 ಹೊಸ ಆನೆಗಳಾದ ಮತ್ತಿಗೋಡು ಆನೆ ಶಿಬಿರದಲ್ಲಿರುವ ದ್ರೋಣ, ಕೃಷ್ಣ ಸೇರಿದಂತೆ ಗೋಪಾಲಸ್ವಾಮಿ, ದುಬಾರೆ ಆನೆ ಶಿಬಿರದಿಂದ ವಿಕ್ರಮ, ಗೋಪಿ, ಹರ್ಷ ಮತ್ತು ಪ್ರಶಾಂತ ಆನೆಗಳು ಆಗಮಿಸಲಿವೆ ಎಂದು ಡಿಸಿಎಫ್ ವಿ.ಏಡುಕೊಂಡಲು ತಿಳಿಸಿದರು. ಆನೆ ಶಿಬಿರಗಳಲ್ಲಿ ದಸರಾಗೆ ಬರುವ ಎಲ್ಲಾ ಆನೆಗಳಿಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈಗಾಗಲೇ ಮೊದಲ
ತಂಡದಲ್ಲಿ ಆ.17ರಿಂದ ಅಂಬಾರಿ ಆನೆ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ಭೀಮ, ಕಾವೇರಿ, ವಿಜಯ, ವರಲಕ್ಷ್ಮೀ ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ
ಜಂಬೂಸವಾರಿ ಮೆರವಣಿಗೆ ತಾಲೀಮಿನಲ್ಲಿ ತೊಡಗಿವೆ. ಸೆ.30ರಂದು ಜಂಬೂಸವಾರಿ ಮೆರವಣಿಗೆ ನಡೆಯುವುದರಿಂದ 2ನೇ ಹಂತದ ಆನೆಗಳು ಸೆ.1ರಿಂದಲೇ ಜಂಬೂಸವಾರಿ ಮೆರವಣಿಗೆ ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು. 2ನೇ ಹಂತದಲ್ಲಿ ಆಗಮಿಸಲಿರುವ 7 ಆನೆಗಳಿಗೆ ಹಾಗೂ ಅವುಗಳ ಮಾವುತರು ಮತ್ತು ಕಾವಾಡಿಗರ ಕುಟುಂಬ ಸದಸ್ಯರ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯ ನಡೆದಿದೆ. ಅರಮನೆ ಆವರಣದಲ್ಲಿರುವ ಶ್ರೀಭುವನೇಶ್ವರಿ ದೇವಾಲಯದ ಸಮೀಪ ಶೆಡ್‌ ನಿರ್ಮಿಸಲಾಗುತ್ತಿದೆ. ಮೈಸೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ನಗರದ ಎಸ್‌ಎಂಪಿ ಫೌಂಡೇಷನ್‌ ವತಿಯಿಂದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.ನಗರದ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಿರಿಜನ ಕುಟುಂಬದ ಪುರುಷರಿಗೆ ವಸ್ತ್ರ, ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಶಾಲಾ ಬ್ಯಾಗ್‌ ಹಾಗೂ ನೋಟ್‌ಪುಸ್ತಕ ವಿತರಿಸಲಾಯಿತು. ಎಸ್‌ ಎಂಪಿ ಫೌಂಡೇಷನ್‌ ಅಧ್ಯಕ್ಷ ಎಸ್‌.ಎಂ.ಶಿವಪ್ರಕಾಶ್‌ ಮಾತನಾಡಿ, ಸಂಸ್ಥೆಯು ಹಲವು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಅದರ ಅಂಗವಾಗಿ ದಸರಾ ಗಜಪಡೆ ಮಾವುತರು, ಕಾವಾಡಿಗರ ಕುಟುಂಬಕ್ಕೆ ಸವಲತ್ತುಗಳನ್ನು ವಿತರಿಸಲಾಗಿದೆ ಎಂದರು. ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ದಸರಾ ಉತ್ಸವ ಯಶಸ್ವಿಯಾಗಲು ಆನೆ ಮಾವುತರು, ಕಾವಾಡಿಗರ ಪರಿಶ್ರಮ ಅಪಾರ. ಅವರ ಸೇವೆಯನ್ನು ಪರಿಗಣಿಸಿ ಎಸ್‌ಎಂಪಿ ಸಂಸ್ಥೆ ವಿವಿಧ ಸವಲತ್ತುಗಳನ್ನು ನೀಡಿರುವುದು ಶ್ಲಾಘನೀಯ. ಇಂತಹ ಸಮಾಜಮುಖೀ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಅವಶ್ಯಕತೆ ಇದೆ ಎಂದರು. ಆರ್‌ಎಫ್ಒ ದೇವರಾಜ್‌ ಇತರರು ಇದ್ದರು.

ಟಾಪ್ ನ್ಯೂಸ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

vhfghftght

ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mysore news

ತಿರಸ್ಕರಿಸಿದ ಹಾಲನ್ನು ಏನ್‌ ಮಾಡಲಿ?

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಹುಣಸೂರು: ನಗರಸಭೆ ನೂತನ ಅಧ್ಯಕ್ಷೆ ಸೌರಭ ಸಿದ್ದರಾಜು ಅಧಿಕಾರ ಸ್ವೀಕಾರ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Untitled-1

ಮಾಹಿತಿ ನೀಡಲು ವಿಫಲವಾದ ಹುಣಸೂರು ನಗರಸಭೆ ಅಧಿಕಾರಿಗೆ ಎರಡನೇ ಬಾರಿಗೆ 5 ಸಾವಿರ ರೂ ದಂಡ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gujgutyuyt

ಮೂವರು ಅಂತಾರಾಜ್ಯ ಸುಲಿಗೆಕೋರರ ಬಂಧನ  

hgyyuyuy

ಕಿತ್ತೂರು ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.