ದಸರೆ ಸಿರಿ ಬೆಳಕಿನಲಿ, ಕಾವೇರಿ ತೆನೆ ಬಳುಕಿನಲಿ… ನಿತ್ಯೋತ್ಸವ


Team Udayavani, Sep 22, 2017, 7:57 AM IST

22-STATE-6.jpg

ಮೈಸೂರು: ಜಗತ್ತಿನ ಎಲ್ಲ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮೈಸೂರು, ನವರಾತ್ರಿಯ ಸೊಬಗಿಗೆ ಕಣ್ತೆರೆದು ನಿಂತಿದೆ. ನಿತ್ಯೋತ್ಸವ ಕವಿ ಪ್ರೊ.ನಿಸಾರ್‌ ಅಹ್ಮದ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ 405ನೇ ದಸರೆಗೆ ಚಾಲನೆ ನೀಡಿದ್ದಾರೆ. ಗುರುವಾರ ಬೆಳಗ್ಗೆ 9.05, ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಬೆಳ್ಳಿರಥದಲ್ಲಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ಇವರಿಬ್ಬರೂ, ಹತ್ತುದಿನಗಳ ಸಂಭ್ರಮ, ಸಡಗರಕ್ಕೆ ನಾಂದಿ ಹಾಡಿದರು.

ಬೆಟ್ಟಕ್ಕೆ ಆಗಮಿಸಿದ ಅತಿಥಿಗಳನ್ನು ಕಲಾತಂಡಗಳ ಮೂಲಕ ಬರಮಾಡಿಕೊಳ್ಳಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಕವಿ ನಿಸಾರ್‌ ಅಹ್ಮದ್‌ ಅವರು, ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್‌ ಅವರು ಸಿದ್ದರಾಮಯ್ಯ ಹಾಗೂ ನಿಸಾರ್‌ ಅಹ್ಮದ್‌ ಅವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಕ್ರೀಮ್‌ ಕಲರ್‌ನ ಹೊಸ ಸೂಟಿನಲ್ಲಿ ಮಿಂಚುತ್ತಿದ್ದ ನಿಸಾರ್‌ ಅಹ್ಮದ್‌ ಅವರು, ದೇವಸ್ಥಾನದಿಂದ ಹೊರಬಂದು ಸಮಾರಂಭದ ವೇದಿಕೆ ಮೇಲೆ ಬಂದಾಗಲೂ ಹೂವಿನ ಹಾರವನ್ನು ಹಾಕಿಕೊಂಡೇ ಇದ್ದರು. ಇದೇ ವೇಳೆ ದಸರಾ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಹಸ್ತಾಂತರಿಸಿದರು. ಇದನ್ನು ಚೆಸ್‌ಗ್ರಾಂಡ್‌ ಮಾಸ್ಟರ್‌ ತೇಜ್‌ಕುಮಾರ್‌ಗೆ ನೀಡಿದರು.

ಭಾವುಕರಾದ ನಿತ್ಯೋತ್ಸವ ಕವಿ: ಜಾತೀ, ಧರ್ಮ, ಧಾರ್ಮಿಕತೆಯನ್ನು ಮೀರಿದ ಸಾಂಸ್ಕೃತಿಕ ಆಚರಣೆ ಮೈಸೂರು ದಸರಾ ಎಂದು ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಬಣ್ಣಿಸಿದರು. ಮೈಸೂರು ದಸರಾ ಆಚರಣೆಯಲ್ಲಿ ಧಾರ್ಮಿಕತೆ ಮೀರಿದ ಸಾಂಸ್ಕೃತಿಕತೆ ಇದೆ. ಇದರ ಬೇರು ಧಾರ್ಮಿಕವಾದರೂ ಟಿಸಿಲಿನಲ್ಲಿ ಸಾಂಸ್ಕೃತಿಕತೆ ಇದೆ. ಹಜ್‌ ಯಾತ್ರೆಯನ್ನು ಕೇವಲ ಮುಸ್ಲಿಮರು ಮಾಡುತ್ತಾರೆ. ಆದರೆ, ಇಲ್ಲಿ ಜಾತಿ, ಧರ್ಮವನ್ನು ಮೀರಿ ಎಲ್ಲರೂ ದಸರೆ ಆಚರಿಸುವ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಪರಂಪರೆಯನ್ನು ಜಗತ್ತಿನಾದ್ಯಂತ ಸಾರುತ್ತಾರೆ ಎಂದರು.

ನಿತ್ಯೋತ್ಸವ ತಾಯಿ ನಿತ್ಯೋತ್ಸವ!
ನಾಡದೇವಿ ಮುಂದೆ ನಾಡಿನ ಹಾಡಾಗಿ ದಸರೆಗೆ ಚಾಲನೆ ಕೊಟ್ಟ ಕವಿ ನಿಸಾರ್‌ ಅಹ್ಮದ್‌ “ಹಲವೆನ್ನದ ಹಿರಿಮೆ, ಕುಲವೆನ್ನದ ಗರಿಮೆ’ ಸಾರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಜೋಗದ ಬೆಳಕಿನಂತೆ ಕೋರೈಸಿದ್ದ ದಸರೆಯ ಭಕುತಿಯಲಿ, ಲೋಕಾವೃತ ಸೀಮೆಗೆ ಹರಡಿದ ಅದರ ಕಂಪಿನಲಿ, ಗತಸಾಹಸ ಸಾರುವ ಶಾಸನಗಳಂತೆ ಸಾಲಾಗಿದ್ದ ಗಜಗಳ ಗಾಂಭೀರ್ಯದ ನಡುವೆ, ಸಾಮರಸ್ಯದ ತೆನೆಯನ್ನು ಬಳುಕಿಸಿದರು. ದಸರೆಯೆಂಬ ಸರ್ವಧರ್ಮದ ಶಾಂತಿಯ ಉತ್ಸವ, ಅಲ್ಲಿ ತೇಲುವ ಕನ್ನಡ ಮನಸ್ಸುಗಳ ಉತ್ಸಾಹಕೆ ಕವಿ ಮನ ಭಾವುಕವಾಗಿತ್ತು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.