Udayavni Special

ಜೋಡಿ ರಸ್ತೆ ವಿಸ್ತರಣೆಯಲ್ಲಿ ಜನರಿಗೆ ಧೂಳಿನಿಂದ ಮುಕಿ


Team Udayavani, May 28, 2018, 4:15 PM IST

mys-1.jpg

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯನ್ನು 100 ಅಡಿಗೆ ವಿಸ್ತರಿಸುವ ಕಾಮಗಾರಿ ಭರದಿಂದ ಸಾಗಿದೆ. ಪ್ರಸ್ತುತ ರಸ್ತೆಯ ಒಂದು ಬದಿಗೆ ಕ್ವಾಲಿಟಿ ಸಿಮೆಂಟ್‌ ಕಾಂಕ್ರೀಟ್‌ ಹಾಕುವ ಕೆಲಸ ನಡೆದಿದೆ. ರಸ್ತೆ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದ್ದು, ಜನರಿಗೆ ಧೂಳಿನಿಂದ ಮುಕ್ತಿ ದೊರೆಯುತ್ತಿದೆ.

ನಗರದ ಪಚ್ಚಪ್ಪ ವೃತ್ತದಿಂದ ರಾಮಸಮುದ್ರದ ವರೆಗೆ 3.10 ಕಿ.ಮೀ. ದೂರದವರೆಗೆ ಬಿ. ರಾಚಯ್ಯ ಜೋಡಿ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೇಂದ್ರ ಭೂಸಾರಿಗೆ ಮಂತ್ರಾಲಯವು 2016- 17ನೇ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 35 ಕೋಟಿ ರೂ. ಅನುದಾನ ನೀಡಿದ್ದು, ಎಂಎಸ್‌ ಆರ್‌ ಕನ್ಸ್‌ಟ್ರಕ್ಷನ್‌ ಎಂಬ ಕಂಪೆನಿ ಕಾಮಗಾರಿ ನಡೆಸುತ್ತಿದೆ.
 
2017ರ ಆಗಸ್ಟ್‌ 8ರಂದು ಈ ರಸ್ತೆ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಧೂಳೆದ್ದು ಜನರು ಹಲವು ತಿಂಗಳು ಕಾಲ ಪರಿತಪಿಸ ಬೇಕಾ
ಯಿತು. ಮಾಸ್ಕ್ ಧರಿಸಿ ಸಂಚರಿಸು ವಂತಾಗಿತ್ತು. ಮೊದಲಿಗೆ 80 ಅಡಿ ಅಗಲೀ ಕರಣಗೊಳಿಸುವ ಕಾಮಗಾರಿಯನ್ನು ನಂತರ 100 ಅಡಿಗೆ ಬದಲಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಿಗೆ ಜಿಲ್ಲಾಡಳಿತ, ನಗರಸಭೆ ಯಾವುದೇ ಪರಿಹಾರ ನೀಡದಿದ್ದರಿಂದ ಕೆಲವು ಕಟ್ಟಡ ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿತ್ತು.

ಈಗ ಒಂದು ವಾರದಿಂದ, ರಸ್ತೆಯ ಒಂದು ಬದಿಗೆ ಅಂದರೆ 10.50 ಮೀ. ಅಗಲಕ್ಕೆ ಪಿಕ್ಯೂಸಿ – (ಪೇವ್‌ಮೆಂಟ್‌ ಕ್ವಾಲಿಟಿ
ಕಾಂಕ್ರೀಟ್‌) ಹಾಕಲಾಗುತ್ತಿದೆ. ಇದು ರಸ್ತೆಯ ನಿರ್ಮಾಣದಲ್ಲಿ ಅಂತಿಮ ಹಂತದ ಕಾಮಗಾರಿ. ಇದರ ಅಡಿಗೆ, ಜಿಎಸ್‌ಬಿ (ಗ್ರಾನುಲರ್‌ ಸಬ್‌ ಬೇಸ್‌) ಹಾಗೂ ಡಿಎಲ್‌ಸಿ (ಡ್ರೈಲೀನ್‌ ಕಾಂಕ್ರೀಟ್‌) ಹಾಕಲಾಗಿತ್ತು. ಒಟ್ಟಾರೆ ಈ ರಸ್ತೆಯ ಎತ್ತರ 250 ಮಿ.ಮೀ ಇರಲಿದೆ. 

ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹಳೆಯ ಕಿತ್ತು ಹೋಗಿರುವ ಇನ್ನೊಂದು ಬದಿಯ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಬಹಳ ಸಂಕಷ್ಟದಲ್ಲಿ ಸಂಚರಿಸಬೇಕಾಗಿದೆ. ಇನ್ನೊಂದು ಬದಿಗೆ ಪೂರ್ತಿ 3.10 ಕಿ.ಮೀ.ಗೆ ಪಿಕ್ಯೂಸಿ ಹಾಕುವ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾಗಲಿದೆ! ಪಿಕ್ಯೂಸಿ ಕೆಲಸ ಮುಗಿದ ಮೇಲೆ ಒಂದು ತಿಂಗಳ ಕಾಲ ಕ್ಯೂರಿಂಗ್‌ಗೇ ರಸ್ತೆಯನ್ನು ಬಿಡಬೇಕಾಗಿದೆ. ಹಾಗಾಗಿ ಇನ್ನೂ ಮೂರು ತಿಂಗಳ ಕಾಲ ಸಾರ್ವಜನಿಕರು ತೊಂದರೆಯನ್ನು ಸಹಿಸಿಕೊಳ್ಳಬೇಕಾಗಿದೆ.

ಇನ್ನೊಂದು ಬದಿಯಲ್ಲಿ ಕಾಮಗಾರಿ ಪೂರ್ಣ ಗೊಂಡು ಸಂಚಾರಕ್ಕೆ ತೆರವುಗೊಳಿಸಿದರೆ ಶೇ.75 ರಷ್ಟು ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ. 10.50 ಮೀ. ರಸ್ತೆ ದೊರಕುವುದರಿಂದ ವಾಹನ ಸಂಚಾರಕ್ಕೆ ಎಷ್ಟೋ ಅನುಕೂಲವಾಗಲಿದೆ. ಆಗ ಬಾಕಿ ಉಳಿಯುವ ಇನ್ನೊಂದು ಬದಿ ರಸ್ತೆ ಕಾಮಗಾರಿಗೆ ಹೆಚ್ಚಿನ ತೊಡಕುಂಟಾಗುವುದಿಲ್ಲ.
ಜನರಿಗೂ ಈಗಿನಷ್ಟು ಕಿರಿಕಿರಿ ಇರುವುದಿಲ್ಲ. ವಾಹನ ಪಾರ್ಕಿಂಗ್‌ಗೆಸ್ಲಾಬ್‌ ಸದ್ಯಕ್ಕಿಲ್ಲ!

ಈಗ 80 ಅಡಿ ರಸ್ತೆ ನಿರ್ಮಾಣಕ್ಕಷ್ಟೇ ಅನುದಾನ ಲಭ್ಯವಿದೆ. ಗುತ್ತಿಗೆದಾರರು 80 ಅಡಿ ರಸ್ತೆ ಮತ್ತು ಚರಂಡಿ ನಿರ್ಮಾಣ
ಮಾಡಲಿದ್ದಾರೆ. ವಾಹನಗಳ ಪಾರ್ಕಿಂಗ್‌ಗೆ ಬೇಕಾದ ಇನ್ನುಳಿದ ಜಾಗಕ್ಕೆ ಸ್ಲಾಬ್‌ ಹಾಕಲು ಹೊಸ ಅನುದಾನ ಮಂಜೂರಾಗಬೇಕು. 

ಅಲ್ಲಿಯವರೆಗೂ ಪಾರ್ಕಿಂಗ್‌ ಜಾಗಕ್ಕೆ ಇಂಟರ್‌ ಲಾಕಿಂಗ್‌ ಸ್ಲಾಬ್‌ ಹಾಕುವುದಿಲ್ಲ. ಅದಕ್ಕೆ ಮಣ್ಣು ಹಾಕಿ ಹಾಗೆ ಬಿಡಲಾಗುತ್ತದೆ. 80 ಅಡಿಗೆ ಯೋಜನೆಯಾಗಿದ್ದ ರಸ್ತೆಯನ್ನು ಜಿಲ್ಲಾಡಳಿತ 100 ಅಡಿಗೆ ಮಾಡಬೇಕೆಂದು ದಿಢೀರ್‌ ಎಂದು ಸೂಚನೆ ನೀಡಿದ್ದು ಇದಕ್ಕೆ ಕಾರಣ. ಗುತ್ತಿಗೆದಾರರು ಯೋಜನೆಯಲ್ಲಿ ದ್ದಂತೆ 80 ಅಡಿ ರಸ್ತೆ ಹಾಗೂ ಚರಂಡಿ
ನಿರ್ಮಿಸುತ್ತಿದ್ದಾರೆ. ಉಳಿದ ಜಾಗಕ್ಕೆ ಸ್ಲಾಬ್‌ ನಿರ್ಮಿಸಲು ಜಿಲ್ಲಾಡಳಿತ ಹೊಸ ಅನುದಾನ ತರಬೇಕಾಗಿದೆ. 

„ ಕೆ.ಎಸ್‌.ಬನಶಂಕರ ಆರಾಧ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

mysuru-tdy-2

ಮೈಸೂರು: ಸತತ 2ನೇ ದಿನವೂ 17 ಸಾವು

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.