- Saturday 14 Dec 2019
ಮೈದುಂಬಿದ ಲಕ್ಷ್ಮಣತೀರ್ಥ: ಹನಗೋಡು ಡ್ಯಾಂ ಭರ್ತಿ
Team Udayavani, Jul 14, 2019, 3:00 AM IST
ಹುಣಸೂರು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ತಪ್ಪಲಿನ ಇರ್ಪು ಬಳಿ ಸುರಿಯುತ್ತಿರುವ ಮಳೆಯಿಂದ ಲಕ್ಷ್ಮಣತೀರ್ಥ ಮೈದುಂಬಿ ತುಂಬಿ ಹರಿಯುತ್ತಿದೆ. ಇದರಿಂದ ಹನಗೋಡು ಅಣೆಕಟ್ಟೆ ಮೇಲೆ ಒಂದೂವರೆ ಅಡಿ ನೀರು ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಅಣೆಕಟ್ಟೆ ಮೇಲೆ 980ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿದೆ. ಅಣೆಕಟ್ಟೆಯನ್ನು ಆಧುನೀಕರಣಗೊಳಿಸಿರುವುದರಿಂದ ಕೋಡಿ ನೀರು ಅಂದ ಚೆಂದವಾಗಿ ಕಾಣುತ್ತಿದೆ. ನಿತ್ಯ ಸಹಸ್ರಾರು ಮಂದಿ ನೀರು ಹರಿಯುವ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕೊಚ್ಚಿಹೋದ ಕೊಳಚೆ ನೀರು: ಕಳೆದ ಇಪ್ಪತ್ತು ದಿನಗಳಿಂದ ಅಣೆಕಟ್ಟೆ ಮೇಲೆ ನೀರು ಹರಿಯುತ್ತಿದ್ದು, ಹುಣಸೂರು ನಗರದ ಮಧ್ಯ ಭಾಗದಲ್ಲಿ ಹರಿಯುವ ನದಿಗೆ ಚರಂಡಿ ನೀರು ಸೇರಿ ಸಂಪೂರ್ಣ ಕಲುಷಿತಗೊಂಡಿತ್ತಲ್ಲದೇ ಇಡೀ ನದಿಯನ್ನೇ ಆವರಿಸಿಕೊಂಡಿದ್ದ ಅಂತರಗಂಗೆಯನ್ನು (ಹಸಿರೆಲೆ ಬಳ್ಳಿ )ಇದೀಗ ನದಿ ನೀರು ಕೊಚ್ಚಿಕೊಂಡು ಹೋಗಿದ್ದು, ಕಟ್ಟೆಮಳಲವಾಡಿ ಅಣೆಕಟ್ಟೆಯ ಬಳಿ ಸಂಗ್ರಹಗೊಂಡಿದೆ. ದೊಡ್ಡ ಪ್ರಮಾಣದಲ್ಲಿ ನೀರು ಬಂದರಷ್ಟೆ ಅಂತರಗಂಗೆ ಸಂಪೂರ್ಣ ಹೊತ್ತೂಯ್ಯಲಿದೆ. ನದಿಯಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ದುರ್ವಾಸನೆ ಸಹ ಬೀರುತ್ತಿದೆ.
ನಾಲೆಗೆ ನೀರು ಹರಿಸಿ: ಅಣೆಕಟ್ಟೆ ಮೇಲೆ ಸಾಕಷ್ಟು ನೀರು ಹರಿಯುತ್ತಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ಆದೇಶ ನೀಡಿಲ್ಲವೆಂಬ ನೆಪವನ್ನಿಟ್ಟುಕೊಂಡು ಹಾರಂಗಿ ಎಂಜಿನಿಯರುಗಳು ನಾಲೆಗೆ ನೀರು ಹರಿಸದ ಪರಿಣಾಮ ರೈತರು ಆಕ್ರೋಶಗೊಂಡಿದ್ದರೆ. ಮುಖ್ಯ ನಾಲೆ ಸೇರಿದಂತೆ ಬಹುತೇಕ ನಾಲೆಗಳು ಆಧುನಿಕರಣಗೊಂಡಿದ್ದು, ನೀರು ಬಿಟ್ಟರೆ ವೇಗವಾಗಿ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಕ್ಕೂ ತಲುಪಲಿದೆ. ನೀರಿಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೂ ತಡವಾದರೆ ಅಣೆಕಟ್ಟೆ ನೀರಿನಿಂದಲೇ 40 ಕ್ಕೂ ಹೆಚ್ಚು ಕೆರೆ-ಕಟ್ಟೆಗಳು ತುಂಬ ಬೇಕಿದ್ದು, ಈ ಸಾರಿ ಈ ಬಯಲು ನೀರಾವರಿ ಆಗುವುದೇ ಎಂಬ ಅನುಮಾನ ಕಾಡುತ್ತಿದೆ.
ಡ್ಯಾಂ ನೀರು ಹರಿಸದಿದ್ದರೆ ಪ್ರತಿಭಟನೆ: ಹನಗೋಡು ಅಣೆಕಟ್ಟು ಭರ್ತಿಯಾಗಿದ್ದರೂ ಕಾಮಗಾರಿ ನೆಪದಲ್ಲಿ ನಾಲೆಗಳಿಗೆ ನೀರು ಹರಿಸದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣವೇ ನೀರು ಹರಿಸದಿದ್ದಲ್ಲಿ ಜು.16 ರಂದು ಹಾರಂಗಿ ಕಚೇರಿ ಎದುರು ರಾಜ್ಯ ರೈತಸಂಘವು ಅಚ್ಚುಕಟ್ಟದಾರ ರೈತರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೊಡಗಿನಲ್ಲಿ ಕಳೆದ 20 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಭರ್ತಿಯಾಗಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದ್ದರೂ ಕಾಮಗಾರಿ ನೆಪದಲ್ಲಿ ಹನುಮಂತಪುರ ನಾಲಾ ಹಾಗೂ ಉದ್ದೂರು ಕಾವಲು ನಾಲೆಗಳಿಗೆ ನೀರು ಹರಿಸದ ಪರಿಣಾಮ ಕೆರೆಗಳು ಬತ್ತಿ ಹೋಗಿವೆ. ನಾಲಾ ವ್ಯಾಪ್ತಿಯಲ್ಲಿ ತಾಲೂಕಿನ ಸುಮಾರು 28 ಸಾವಿರ ಎಕರೆ ಇದ್ದು, ಅದಕ್ಕಿಂತ ಮಿಗಿಲಾಗಿ 42 ಕೆರೆಗಳಿಗೆ ನೀರನ್ನು ತುಂಬಿಸದೆ ನಿರ್ಲಕ್ಷ್ಯವಹಿಸಲಾಗಿದೆ. ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ 156 ಕೋಟಿ ವೆಚ್ಚದ ಹನಗೋಡು ಅಣೆಕಟ್ಟೆ ಹಾಗೂ ನಾಲಾ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಹಲವೆಡೆ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸುವ ಸಲುವಾಗಿ ಎಂಜಿನಿಯರ್‌ಗಳು ನೀರು ಬಿಡಲು ಸಬೂಬು ಹೇಳುತ್ತಿದ್ದಾರೆ. ಕಾಮಗಾರಿ ನಡೆಯುವ ವೇಳೆ ಮುಚ್ಚಿ ಹೋಗಿರುವ ತೂಬು, ಉಪನಾಲೆಗಳನ್ನು ಸರಿಪಡಿಸಿ, ಬೇಗ ನೀರು ಹರಿಸಿ ಮೊದಲು ಕೆರೆ-ಕಟ್ಟೆಗಳನ್ನು ತುಂಬಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆಲ್ಲಾ ಅಣೆಕಟ್ಟೆ ತುಂಬಿದ ತಕ್ಷಣ ನೀರು ಬಿಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅನುಮತಿ ಬೇಕಿದೆ. ಈಗಾಗಲೇ ನೀರು ಬಿಡಲು ಮುಖ್ಯ ಎಂಜಿನಿಯರ್‌ಗೆ ಅನುಮತಿ ಕೋರಲಾಗಿದ್ದು, ಆದೇಶ ಬಂದ ತಕ್ಷಣ ಕಾಲುವೆಗೆ ನೀರು ಹರಿಸಲಾಗುವುದು.
-ಶಶಿಕುಮಾರ್, ಹಾರಂಗಿ ಎಇಇ
ಈ ವಿಭಾಗದಿಂದ ಇನ್ನಷ್ಟು
-
ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ...
-
ಮೈಸೂರು: ತೆರಿಗೆ ಹೆಚ್ಚಳದಿಂದ ವಸತಿ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದ್ದು, ಮಧ್ಯಮ ಮತ್ತು ಬಡವರ್ಗದ ಜನರು ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವುದು...
-
ಮೈಸೂರು: ರಾಜ್ಯ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಮೈಸೂರಿನಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ...
-
ಪಿರಿಯಾಪಟ್ಟಣ: ಪಟ್ಟಣದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗ ಮತ್ತು ರಾಜಕಾಲುವೆಗಳ ಸರ್ವೆ ನಡೆಸಿ, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರ ಸಭಾ ಮುಖ್ಯಾಧಿಕಾರಿ...
-
ಮೈಸೂರು: "ನಾನು ಜೆಡಿಎಸ್ ಶಾಸಕನಾಗಿಯೇ ಮುಂದುವರಿಯುತ್ತೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ವಿಚಾರವಿಲ್ಲ' ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ...
ಹೊಸ ಸೇರ್ಪಡೆ
-
ಹಾಮಿರ್ಪುರ: ಕಾರೊಂದು ಆಳವಾದ ಕಮರಿಗೆ ಉರುಳಿ ಬಿದ್ದು ಮೂವರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಹಾಮಿರ್ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೆ ಮೂವರು...
-
ದೆಹಲಿ: ಪಶ್ಚಿಮ ದೆಹಲಿಯ ಮುಂಡ್ಕಾ ಪ್ರದೇಶದ ಮರದ ಕಾರ್ಖಾನೆಯೊಂದರಲ್ಲಿ ಇಂದು ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವುನೋವು...
-
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಯಾವುದೇ ರೀತಿಯ ಎನ್ ಆರ್ಸಿ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು...
-
ನಾನು 10ನೇ ತರಗತಿಯಲ್ಲಿದ್ದೆ. ಪ್ರತಿ ರಾತ್ರಿ 8 ಗಂಟೆ ನೈಟ್ ಶಿಫ್ಟ್ ಮಾಡಿ, ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ. ಡಿಸ್ಲೆಕ್ಸಿಯಾದ ಸಮಸ್ಯೆಯಿತ್ತು, ಕೆಲಸದ ಒತ್ತಡದಿಂದ...
-
ಬೆಂಗಳೂರು: ವಿದ್ಯಾರ್ಥಿಗಳಿಗೆ ಸಂವಿಧಾನದ ಮೂಲ ಆಶಯ ತಿಳಿಸುವ ಮತ್ತು ಸಂವಿಧಾನವನ್ನು ಎಲ್ಲೆಡೆ ಪ್ರಚಾರ ಮಾಡುವ ಉದ್ದೇಶದಿಂದ ಶಾಲೆಗಳಲ್ಲಿರುವ ಮುಖ್ಯ ಶಿಕ್ಷಕರ...