ಕುರುಬ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ: ಸಿದ್ದರಾಮಯ್ಯಗೆ ವಿಶ್ವನಾಥ್ ಎಚ್ಚರಿಕೆ
Team Udayavani, Jan 20, 2021, 1:55 PM IST
ಮೈಸೂರು: ಕುರುಬ ಸಮಾಜದ ಪಾದಯಾತ್ರಗೆ ಆರ್ ಎಸ್ಎಸ್ ಹಣ ನೀಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದ್ದು, ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಇಡೀ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆರೋಪದಿಂದ ನನಗೆ ಬಹಳ ನೋವಾಗಿದೆ. ಅವರು ನಮ್ಮ ಸಮುದಾಯದ ಸ್ವಾಮೀಜಿ, ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ ಎಂದರು.
ಮಠದ ಧಾರ್ಮಿಕ ಸಂಘಟನೆಯಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂದು ಸಿದ್ದರಾಮಯ್ಯ ಮರೆತಿದ್ದಾರೆ. ಅವರಿಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ಗೌರವವಿಲ್ಲ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ನಮ್ಮದು ‘ಮಾಡು ಇಲ್ಲವೇ ಮಡಿ’ ಹೋರಾಟ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ನಮ್ಮ ಬಗ್ಗೆ ನೀವು ಹೇಳಿ ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ. ನೀವು ತುಂಬಾ ಚಿಕ್ಕವರಾಗಿದ್ದೀರಾ ಸಿದ್ದರಾಮಯ್ಯ ಎಂದು ಎಂಎಲ್‌ಸಿ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಬಿಳಿ ಬಟ್ಟೆ ಹಾಕಿರುವ ಸಿದ್ದರಾಮಯ್ಯಗೆ ಜನರ ಕಷ್ಟ ಸುಖಗಳು ಅರ್ಥ ಆಗುತ್ತಿಲ್ವ. ಇಡೀ ಸಮುದಾಯವನ್ನು ಅವಮಾನ ಮಾಡುತ್ತಿದ್ದೀರಿ. ಮಠ ಕಟ್ಟಲು ಭಿಕ್ಷೆ ಎತ್ತಿದ್ದೇವೆ. ಈ ಮಠಕ್ಕೆ ನಿಮ್ಮಿಂದ 10 ಪೈಸೆ ಇದೆಯಾ? ಬಹಳ ಲಘವಾಗಿ ಮಠವನ್ನ ಸಮಾಜವನ್ನು, ಸ್ವಾಮಿಗಳ ಬಗ್ಗೆ ಮಾತನಾಡುವುದು ಶೋಭೆ ತರುವಂತದಲ್ಲ ಎಂದರು.
ಇದನ್ನೂ ಓದಿ: ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!
ಜನರನ್ನ ದಿಕ್ಕುತಪ್ಪಿಸಬೇಡಿ. ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದ ನೀವು ಇಷ್ಟೆಲ್ಲ ಆಗಿದ್ದು, ಈ ಇಬ್ಬಂದಿತ ನಿಲ್ಲಿಸಿ. ಏಕಮಾದ್ವಿತೀಯ ಎಂದು ತಿಳಿದುಕೊಂಡಿದ್ದೀರಿ. ಈ ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ. ಈ ಹೇಳಿಕೆ ವಾಪಸು ಪಡೆಯಬೇಕು ಇಲ್ಲದಿದ್ದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ವಿಶ್ವನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
ರಾಜ್ಯದಲ್ಲಿ ಕಾಂಗ್ರೆಸ್ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ
ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್