ನಕಲಿ ದಾಖಲೆ ಸೃಷ್ಟಿಸಿ ಅಕ್ರಮಖಾತೆ: ಡೀಸಿ ಗರಂ
Team Udayavani, Nov 27, 2020, 4:23 PM IST
ತಿ.ನರಸೀಪುರ: ನಕಲಿ ಮರಣ ಪ್ರಮಾಣ ಅಥವಾ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಖಾತೆ ಮಾಡಿರುವ ದೂರುಗಳ ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಿಮಿ ನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಕಲಿ ಮರಣ ಪ್ರಮಾಣ ಪತ್ರ ಸಲ್ಲಿಸಿ ಖಾತೆಗಳನ್ನು ಮಾಡಿರುವ ಬಗ್ಗೆ ದೂರುಗಳಿವೆ. ರಂಗಸಮುದ್ರದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ಸತ್ತಿದ್ದಾರೆಂದು ನಕಲಿ ದಾಖಲೆಸೃಷ್ಟಿಸಿಖಾತೆಮಾಡಿಸಿರುವಬಗ್ಗೆಪ್ರಸ್ತಾಪಿಸಿದ ಅವರು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
65 ಅರ್ಜಿ: ಬಹುತೇಕ ಅರ್ಜಿಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬಂದಿದ್ದು, ಉಳಿದಂತೆ ಪುರಸಭಾ ವ್ಯಾಪ್ತಿಗೆ ಸಂಬಂಧಿಸಿದ ಖಾತೆ ವಿಳಂಬ ಬಗ್ಗೆ ದೂರುಗಳು ಬಂದಿವೆ ತಾಲೂಕಿನಲ್ಲಿ ಸಲ್ಲಿಕೆಯಾಗಿರುವ 65 ಅರ್ಜಿಗಳನ್ನು ಪರಿಶೀಲಿಸಿ ಸೂಕ್ತವಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. 15 ದಿನಗಳ ಒಳಗೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಹೆಚ್ಚು ಟೆಸ್ಟ್: ಕೋವಿಡ್ ನಿಯಂತ್ರಣಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಅವರಿಂದ ಮಾಹಿತಿ ಪಡೆದ ಅವರು, ಕೋವಿಡ್ ಪರೀಕ್ಷೆ ಹೆಚ್ಚು ಮಾಡಬೇಕು. ಹಾಗೂ ವಯಸ್ಸಾದವರ ಸಮೀಕ್ಷೆ ಮಾಡಿಸಿ ಅವರ ಆರೋಗ್ಯದ ಕಾಳಜಿ ವಹಿಸಲು ಹಾಗೂ ಕೊರೊನಾ ಮರಣ ದರ ತಗ್ಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭತ್ತ ಖರೀದಿ ಕೇಂದ್ರ: ಭತ್ತ ಖರೀದಿ ಕೇಂದ್ರ ತೆರೆಯಲು ಕೃಷಿ ಇಲಾಖೆ ಸಂಬಂಧಿಸಿದ ಇಲಾಖೆಗಳ ಜತೆ ಸಮಾಲೋಚಿಸಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಬಹುತೇಕ ಮಂದಿ ಇದರ ಬಗ್ಗೆ ಸಾಕಷ್ಟು ಮನವಿ ಮಾಡುತ್ತಿದ್ದಾರೆ ಎಂದರು.
ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರೈತರ ಪೋಡುಗಳ ಬಗ್ಗೆ ಹೆಚ್ಚು ಸಮಸ್ಯೆ ಇದೆ. ಅದನ್ನು ತ್ವರಿತವಾಗಿ ಮಾಡಿಸುವ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡುವಂತೆ ಹಾಗೂ ತಲಕಾಡು ಮತ್ತು ಬನ್ನೂರು ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿಗೆಕ್ರಮ ವಹಿಸುವಂತೆ ಹೇಳಿದರು. ಸಭೆಯಲ್ಲಿ ಜಿಪಂ ಸಿಇಒ ಡಿ.ಭಾರತಿ,
ಉಪವಿಭಾಗಾಧಿಕಾರಿ ಡಾ.ವೆಂಕಟರಾಜು. ತಹಶೀಲ್ದಾರ್ ಡಿ. ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಅಶೋಕ್, ಸಿಪಿಐ ಎಂ.ಆರ್.ಲವ, ಬಿಇಒ ಮರಿ ಸ್ವಾಮಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿ ಜಯರಾಮಯ್ಯ, ಕಂದಾಯಾಧಿಕಾರಿಗಳಾದ ಬಿ.ಸಿ. ಮಹದೇವನಾಯಕ, ಚೆಲುವರಾಜು ಇತರರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಂಐ ಫೋನ್ ಕಂಪನಿಯಿಂದ ಬಡ ವಿದ್ಯಾರ್ಥಿಗಳಿಗೆ ಫೋನ್ಗಳ ದೇಣಿಗೆ
ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು: ಡಿಸಿಎಂ ಲಕ್ಷ್ಮಣ ಸವದಿ
ಪರಿಷತ್ ಉಪಸಭಾಪತಿ ಚುನಾವಣೆ: BJPಯಿಂದ ಪ್ರಾಣೇಶ್, ಕಾಂಗ್ರೆಸ್ ನಿಂದ ಕೆ.ಸಿ.ಕೊಂಡಯ್ಯ ಸ್ಪರ್ಧೆ
ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್ ಪ್ಲಸ್ 9 ಫೋನ್ ನ ಚಿತ್ರ..!
ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ