ತ್ರಿಮುಕುಟ ಕ್ಷೇತ್ರದಲ್ಲಿ ಕುಂಭಮೇಳ ಆರಂಭ

Team Udayavani, Feb 18, 2019, 7:29 AM IST

m1-trimuku.jpg

ತಿ.ನರಸೀಪುರ: ದಕ್ಷಿಣ ಪ್ರಯಾಗ ಖ್ಯಾತಿಯ ಕಾವೇರಿ, ಕಪಿಲೆ ಹಾಗೂ ಸ್ಫಟಿಕ್‌ ಸರೋವರದ ತ್ರಿವೇಣಿ ಸಂಗಮದಲ್ಲಿ ಧ್ವಜಾರೋಹಣ, ಕೊಡಗು, ಸುಳ್ವಾಡಿ ಸಹಿತವಾಗಿ ಕಾವೇರಿ ಕಣಿವೆಯಲ್ಲಿ ನಡೆದ ದುರಂತದಲ್ಲಿ ಮಡಿದರಿಗೆ, ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಗೆ ಹಾಗೂ ಉಗ್ರರ ಹೀನಕೃತ್ಯ ದಿಂದ ಹುತಾತ್ಮರಾದ ವೀರ ಯೋಧರಿಗೆ ಸಾಮೂಹಿಕ ಶ್ರದ್ಧಾಂಜಲಿ, ವಿದ್ಯಾರ್ಥಿಗಳಿಂದ ವೇದಗೋಷ, ನಾಡ ಗೀತೆಯ ಮೂಲಕ ಭಾನುವಾರ ಇಳಿ ಸಂಜೆ ಯಲ್ಲಿ ದೀಪಬೆಳಗಿ 11ನೇ ಮಹಾಕುಂಭ ಮೇಳಕ್ಕೆ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ವಿಧ್ಯುಕ್ತ ಚಾಲನೆ ನೀಡಿದರು.

ತಿ.ನರಸಿಪುರದ ದೊರೆಸ್ವಾಮೀಜಿ, ಕಾಗಿನೆಲೆ ಶಾಖಾಮಠದ ಶಿವಾನಂದಪುರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾಮಠದ ಶಿವನಂದಪುರಿ ಸ್ವಾಮೀಜಿ, ಸಂಸದ ಧ್ರುವನಾ ರಾಯಣ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅಶ್ವಿ‌ನ್‌ ಕುಮಾರ್‌ ಇದ್ದರು.

ಬೆಳಗ್ಗೆಯಿಂದಲೆ ಅಂಕುರಾರ್ಪಣಾ, ಅನು ಜ್ಞಾ ಕಾರ್ಯಕ್ರಮದ ಜತೆಗೆ ಹೋಮ, ಹವನ ಗಳು ದೀನಪೂರ್ತಿ ನಿರಂತರವಾಗಿ ನಡೆದಿದೆ. ಸಂಜೆಯಾಗುತ್ತಿದ್ದಂತೆ ತ್ರಿವೇಣಿ ಸಂಗಮಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಯಿತು. ಗುಂಜಾನರಸಿಂಹ ದೇವಸ್ಥಾನ ದಿಂದ ಮುಖ್ಯ ವೇದಿಕೆಗೆ ಬರಲು ಭಾರತೀಯ ಸೈನ್ಯದಿಂದ ತೇಲುವ ಸೇತುವೆ ನಿರ್ಮಿಸ ಲಾಗಿತ್ತು. ಹಾಗೆ ಯೇ ಅಗಸ್ತೇಶ್ವರ ದೇವಸ್ಥಾನದ ಮಾರ್ಗ ವಾಗಿ ಯೂ ಭಕ್ತರು ತ್ರಿವೇಣಿ ಸಂಗಮಕ್ಕೆ ಬಂದಿದ್ದಾರೆ.

ಮಹಾಕುಂಭಮೇಳದ ಉದ್ಘಾಟನೆಗೆ ಆಗಮಿ ಸಿದ ಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿ ವರು, ಸಂಸದರು ಸಹಿತವಾಗಿ ರಾಜಕೀಯ ಮುಖಂಡರನ್ನು ಪೂರ್ಣಕುಂಭ ಸ್ವಾಗತ ದೊಂದಿಗೆ ಅಗಸ್ತೇಶ್ವರಿ ದೇವಸ್ಥಾನದಿಂದ ತ್ರಿವೇಣಿ ಸಂಗಮ ವೇದಿಕೆಗೆ ಕರೆತರ ಲಾಯಿತು.

ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ಥಾನಕ್ಕಾಗಿ ಮೂರು ಕಡೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪವಿತ್ರ ಸ್ಥಾನ ಮುಗಿಸಿ ಶ್ರೀ ಗುಂಜಾನರಸಿಂಹ ಸ್ವಾಮಿ, ಅಗಸ್ತೇಶ್ವರ ಸ್ವಾಮಿ, ಬಿತ್ತೀಗೇಶ್ವರ, ಬಳ್ಳೇಶ್ವರ ಹಾಗೂ ಮೂಲಸ್ಥಾನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ವಾಪಾ ಸಾಗುತ್ತಿದ್ದರು.

ಗಂಗಾರತಿ: ಉತ್ತರಪ್ರದೇಶದ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗೆಗೆ ನಡೆಯುವ ಆರತಿಗೆ ವಿಶೇಷವಾದ ಹಿನ್ನೆಲೆಯಿದೆ. ಅದೇ ಮಾದರಿ ಯಲ್ಲಿ ಮಹಾಕುಂಭಮೇಳದಲ್ಲೂ ಗಂಗಾರತಿ ನಡೆದಿದೆ. ಕಾವೇರಿ, ಕಪಿಲೆ ಹಾಗೂ ಸ್ಪಟೀಕ ಸರೋವರಕ್ಕೆ ಆರತಿ ಮಾಡುವ ಮೂಲಕ ವಿಶೇಷ ನಮನ ಸಲ್ಲಿಸಲಾಯಿತು. ಇದೇ ವೇಳೆ ಭಕ್ತರು ದೀಪಗಳನ್ನು ನದಿಯಲ್ಲಿ ತೇಲಿ ಬಿಡುತ್ತಿದ್ದರು.

ಅಪಾರ ಜನಸ್ತೋಮ: ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಬಂದು ತೀರ್ಥಸ್ನಾನ ಮಾಡಿದ್ದಾರೆ. ಭಾನುವಾರ ಸಂಜೆ ಭಕ್ತರ ದಂಡೆ ಹರಿದು ಬಂದಿತ್ತು. ನದಿಯ ಮಧ್ಯದಲ್ಲಿ ಭಕ್ತರಿಗಾಗಿ ವ್ಯವಸ್ಥೆ ಮಾಡಿದ ಸ್ಥಳ ಸಂಪೂರ್ಣ ಭರ್ತಿಯಾಗಿತ್ತು. ದೇವಸ್ಥಾನದ ಮುಂಭಾಗ ದಲ್ಲಿರುವ ಕಟ್ಟೆಗಳು ಮತ್ತು ರಸ್ತೆಯಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ತೆಲುವ ಸೇತುವೆ: ಭಾರತೀಯ ಸೈನ್ಯದಿಂದ ನಿರ್ಮಿಸಿರುವ ತೇಲುವ ಸೇತುವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತೇಲುವ ಸೇತುವೆ ವ್ಯವಸ್ಥೆ ಮಾಡದೇ ಇದ್ದಿದ್ದರೆ ಭಕ್ತರಿಗೆ ಗುಂಜಾನರಸಿಂಹ ದೇವಸ್ಥಾನದಿಂದ ತ್ರಿವೇಣಿ ಸಂಗಮದ ಪ್ರದೇಶಕ್ಕೆ ಹೋಗಲು ತುಂಬ ಕಷ್ಟವಾಗುತಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೈನ್ಯದಿಂದ ಇದನ್ನು ನಿರ್ಮಿಸಲಾಗಿದೆ. ಅಲ್ಲದೆ, ರಕ್ಷಣೆಗೂ ಸೈನಿಕರೇ ನಿಂತಿದ್ದರು. ಯಾವುದೇ ರೀತಿಯ ನೂಕುನುಗ್ಗಲು ಆಗಬಾರದು ಎಂಬ ಉದ್ದೇಶದಿಂದ ತೇಲುವ ಸೇತುವೆ ಮಧ್ಯದಲ್ಲಿ ಹಗ್ಗ ಕಟ್ಟಿ, ಹೋಗಲು ಮತ್ತು ಬರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಕುಂಭಮೇಳದ ಇತಿಹಾಸ: ದೇಶದ ಉತ್ತರ ಭಾಗದಲ್ಲಿ ಹರಿಯುವ ಗಂಗೆಯು ದಕ್ಷಿಣದ ಕಾವೇರಿಗೆ, ಯಮುನೆಯು ಕಪಿಲೆಗೆ ಹಾಗೂ ಗುಪ್ತ ಗಾಮಿನಿಯಾಗಿರುವ ಸರಸ್ವತಿ ನದಿಯು ಸ್ಫಟಿಕ ಸರೋವರಕ್ಕೆ ಸಮಾನ ಎಂಬ ಪ್ರತೀತಿ ಇದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿ ಸೇರುವ ಉತ್ತರ ಪ್ರದೇಶದ ಪ್ರಯಾಗದಲ್ಲಿ ನಡೆಯುವ ಕುಂಭಮೇಳದ ಮಾದರಿಯಲ್ಲೇ ಕರ್ನಾಟಕದ ಕಾವೇರಿ, ಕಪಿಲೆ ಹಾಗೂ ಸ್ಫಟಿಕ ಸರೋವರ ಸೇರುವ ತಿರುಮಕೂಡಲುನಲ್ಲಿ ಕುಂಭ ಮೇಳ ನಡೆಸಲು ನಾಡಿನ 5 ಮಠಗಳ ಯತಿಗಳು ಸೇರಿ ನಿರ್ಧಾರ ಕೈಗೊಂಡರು.

ಉತ್ತರ ಭಾರತದ ಜನರು ಪ್ರಯಾಗದಲ್ಲಿ ಪವಿತ್ರ ಸ್ನಾನ ಮಾಡು ವಂತೆ, ದಕ್ಷಿಣ ಭಾರತದ ಭಕ್ತರೂ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ಥಾನ ಮಾಡ ಬೇಕು ಎಂಬ ಉದ್ದೇಶದಿಂದ ಕೈಲಾಸಾಶ್ರಮದ ತಿರುಚ್ಛಿ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಹಾ ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಸೇರಿ ಮೊದಲ ಬಾರಿಗೆ 1989ರಲ್ಲಿ ಮಹಾಕುಂಭ ಮೇಳವನ್ನು ತ್ರಿವೇಣಿ ಸಂಗಮ ತಿರುಮಕೂಡಲದಲ್ಲಿ ಚಾಲನೆ ನೀಡಿದರು.

ಅಲ್ಲಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. 1992, 1995,1998, 2001,2204, 2007,2010, 2013 ಹಾಗೂ 2016 ಹೀಗೆ 1ಂ ಕುಂಭಮೇಳ ನಡೆದಿದ್ದು, ಈಗ 11ನೇ ಕುಂಭಮೇಳ ವೈಭವವಾಗಿ ನಡೆಯುತ್ತಿದೆ ಎಂದು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ ಪೂರ್ತಿ ಮಾಹಿತಿ ನೀಡಿದರು.

ಕಪಿಲೆ ಮತ್ತು ಕಾವೇದಿ ದಡದಲ್ಲಿರುವ ಗುಂಜಾನರಸಿಂಹ ದೇವಸ್ಥಾನ ಮತ್ತು ಅಗಸ್ತೇಶ್ವರ ದೇವಸ್ಥಾನವು ಶೈವ ಮತ್ತು ವೈಷ್ಣವರ ಸಾಮರಸ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಗಸ್ತ್ಯ ಮುನಿಗಳು ಇಲ್ಲಿ ಮಣ್ಣಿನ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದರು ಎಂಬ ವಾಡಿಕೆ ಇದೆ. ಹಾಗೆಯೇ ಗುಂಜಾ ನರಸಿಂಹ ದೇವರ ಕೈಯಲ್ಲಿ ಇರುವ ತಕ್ಕಡಿಯು ಇಲ್ಲಿ ಹರಿಯುವ ತೀರ್ಥವು ಗಂಗಾ ತೀರ್ಥಕ್ಕಿಂತ ಒಂದು ಗುಲಗಂಜಿ ಪ್ರಮಾಣದಷ್ಟು ಶ್ರೇಷ್ಠ ಎಂಬುದನ್ನು ಸಾರುತ್ತದೆ.

ಈ ಕ್ಷೇತ್ರಕ್ಕೆ ಸಾಕಷ್ಟು ಮಹತ್ವ ಇದೆ ಎಂದು ವಿವರಿಸಿದರು. ಕುಂಭಮೇಳದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾ ನಂದನಾಥ ಸ್ವಾಮೀಜಿ, ಸುತ್ತೂರು ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೈಲಾಸಾ ಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶತೀರ್ಥರು, ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ,

ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಅಭಿನವ ವಾಗೀಶ ಮಹಾದೇಶಿರ್ಕ ಸ್ವಾಮೀಜಿ, ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಆರ್ಟ್‌ ಆಫ್ ಲಿವಿಂಗ್‌ ನ ರವಿಶಂಕರ ಗುರೂಜಿ, ಮೈಸೂರು ರಾಮಕೃಷ್ಣ ಆಶ್ರಮದ ಆತ್ಮಜ್ಞಾನಾ ನಂದ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದಾ ಲಯದ ರಾಜಯೋಗಿನಿ ಲಕ್ಷ್ಮೀ ಜೀ ಸಹಿತವಾಗಿ 60ಕ್ಕೂ ಅಧಿಕ ಮಠಾಧೀಶರು, ನಾಗಸಾಧುಗಳ ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.