ಕಾವೇರಿ ಕಣಿವೆಯಲ್ಲಿ 30,524 ಕಾಮಗಾರಿ
ಆರ್ಟ್ ಆಫ್ ಲೀವಿಂಗ್ ಸ್ವ ಇಚ್ಛೆಯಿಂದ ಕಾವೇರಿ ಕಣಿವೆಯಲ್ಲಿ ಅಂತರ್ಜಲ ಚೇತನ ಯೋಜನೆ: ಈಶ್ವರಪ್ಪ
Team Udayavani, Apr 3, 2021, 7:32 PM IST
ಮೈಸೂರು: ಆರ್ಟ್ ಆಫ್ ಲೀವಿಂಗ್ ಸ್ವ ಇಚ್ಛೆಯಿಂದ ಕಾವೇರಿ ಕಣಿವೆಯಲ್ಲಿ ಅಂತರ್ಜಲ ಚೇತನ ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಒಟ್ಟು 30,524 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸರ್ಕಾರದೊಂದಿಗೆ ಒಡಂಬಡಿಕೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿ ನಡೆಸಿದರು. ಆರ್ಟ್ ಆಫ್ ಲೀವಿಂಗ್ ಕಾಮಗಾರಿಗೆ ಬೇಕಾದ ಅನುದಾನವನ್ನು ಸಂಪೂರ್ಣವಾಗಿ ಭರಿಸಲಾಗುವುದು. ಒಟ್ಟು 206 ಮರು ಪೂರಣ ಘಟಕ, 14,703 ಇಂಗುಗುಂಡಿ, 304 ಡೆಕ್ಸ್, 201 ಕೆರೆಗಳ ಅಭಿವೃದ್ಧಿ, 14,909 ಬೋಲ್ಡರ್ ಚೆಕ್ಸ್, 201 ಅರಣ್ಯೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾಮಗಾರಿ ನಡೆಯುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿ ಮಳೆಗಾಲಕ್ಕೂ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಗ್ರಾಪಂ ವ್ಯಾಪ್ತಿಯಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ಕೆರೆಗಳಿಗೆ ನೀರು ಹರಿಯುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಕೊಡಿ, ಬದು ನಿರ್ಮಾಣ, ದೇವಸ್ಥಾನಗಳ ಬಳಿ ಇರುವ ಕಲ್ಯಾಣಿಗಳ ಪುನಶ್ಚೇತಗೊಳಿಸಲಾಗುವುದು. ಈ ಜಲಶಕ್ತಿ ಅಭಿಯಾನದ ಮೂಲಕ ಮುಂಗಾರು ಪ್ರಾರಂಭವಾಗುವ ಮೊದಲೇ ನೀರು ಸಂಗ್ರಹಣೆ ಮಾಡಬಹುದಾಗ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯಿದೆ. ಇದರಿಂದ ಅಂತರ್ಜಲ ವೃದ್ಧಿಗೆ ಇದು ನೆರವಾಗಲಿದೆ ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಪಂ ಸಿಇಒ ಎ.ಎಂ. ಯೋಗೀಶ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಟ್ಲ : ಬೈಕ್-ಪಿಕಪ್ ಡಿಕ್ಕಿ : ಓರ್ವ ಸಾವು
ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ
ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು
ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು
ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್