62 ತಾಪಂ ಸ್ಥಾನ ಕಡಿತ, 4 ಜಿಪಂ ಸ್ಥಾನ ಏರಿಕೆ

ಮೈಸೂರು ಜಿಲ್ಲೆಯ ಜಿಪಂ, ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ › ಎಲ್ಲ ತಾಲೂಕಿನ ತಾಪಂ ಸ್ಥಾನ ಮೈನಸ್‌

Team Udayavani, Feb 15, 2021, 5:33 PM IST

62 ತಾಪಂ ಸ್ಥಾನ ಕಡಿತ, 4 ಜಿಪಂ ಸ್ಥಾನ ಏರಿಕೆ

ಮೈಸೂರು: ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜಿಪಂ ಸ್ಥಾನಗಳು ಹೆಚ್ಚಾಗಿದ್ದರೆ, ಜಿಲ್ಲೆಯ ಎಲ್ಲಾ ತಾಲೂಕುಗಳ ತಾಪಂ ಸ್ಥಾನಗಳು ಕಡಿತಗೊಂಡಿವೆ.

ತಾಪಂ ವ್ಯವಸ್ಥೆಯನ್ನೇ ರದ್ದುಗೊಳಿಸುವ ಬಗ್ಗೆ ಪರ-ವಿರೋಧ ಚರ್ಚೆಗಳ ಮಧ್ಯೆಯೇ ರಾಜ್ಯಚುನಾವಣಾ ಆಯೋಗವು ಜಿಪಂ, ತಾಪಂ ಚುನಾವನೆಗೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿ, ಫೆ.22ರೊಳಗೆ ಖಾತೆಗಳ ಪುನರ್‌ ವಿಂಗಡಣೆ ಹಾಗೂ ನಕ್ಷೆ ತಯಾರಿಕೆಗೆ ನಿರ್ದೇಶಿಸಿದೆ.

ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆ ವಿವರಗಳನ್ನು ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ತಾಲೂಕುವಾರು ಜಿಪಂ, ತಾಪಂ ಸ್ಥಾನಗಳನ್ನು ನಿಗದಿಪಡಿಸಿದೆ. ಅದರಂತೆ ಜಿಲ್ಲೆಯ ಜಿಲ್ಲಾ ಪಂಚಾಯ್ತಿಗೆ ನಾಲ್ಕು ಸದಸ್ಯ ಬಲವನ್ನು ಹೆಚ್ಚಿಸಿದ್ದು, 49 ಸದಸ್ಯರಿಂದ 53ಕ್ಕೆ ಹೆಚ್ಚಿಸಿದೆ. ಆದರೆ, ತಾಲೂಕು ಪಂಚಾಯ್ತಿ ಸದಸ್ಯತ್ವ ಸ್ಥಾನವನ್ನು ಇಳಿಕೆ ಮಾಡಲಾಗಿದ್ದು, 187 ಸದಸ್ಯರಿಂದ 125ಕ್ಕೆ ಇಳಿಸಲಾಗಿದೆ. 62 ಸ್ಥಾನವನ್ನು ಕಡಿತಮಾಡಲಾಗಿದೆ.

ಜಿಪಂ ವಿವರ: ಮೈಸೂರು ತಾಲೂಕಿನಲ್ಲಿದ್ದ 10 ಜಿಪಂ ಸ್ಥಾನಗಳಲ್ಲಿ ಮೂರು ಸ್ಥಾನಗಳು ಕಡಿಮೆಯಾಗಿದ್ದರೆ, 9 ಸ್ಥಾನಗಳನ್ನು ಹೊಂದಿದ್ದ ನಂಜನಗೂಡು ತಾಲೂಕಿನಲ್ಲಿ 1 ಸ್ಥಾನ ಸೇರ್ಪಡೆಯಾಗಿ 10 ಸ್ಥಾನಕ್ಕೇರಿದೆ.6 ಸ್ಥಾನ ಹೊಂದಿದ್ದ ತಿ.ನರಸೀಪುರ, ಹುಣಸುರು, ಕೆ.ಆರ್‌.ನಗರ, ಪಿರಿಯಾಪಟ್ಟಣ ತಾಲೂಕುಗಳಿಗೆ ತಲಾ 1 ಸ್ಥಾನ ಸೇರ್ಪಡೆಯಾಗಿದ್ದು, 7 ಸ್ಥಾನಗಳಿಗೆ ಹೆಚ್ಚಿಸಲಾಗಿದೆ. ಉಳಿದಂತೆ ಎಚ್‌.ಡಿ.ಕೋಟೆ ತಾಲೂಕನ್ನು ವಿಭಜಿಸಿ ಹೊಸದಾಗಿ ಸರಗೂರು ತಾಲೂಕು ಮಾಡಿರುವುದರಿಂದ ಎಚ್‌.ಡಿ.ಕೋಟೆಗೆ ಈ ಹಿಂದೆ ಇದ್ದ 6 ಸ್ಥಾನಗಳ ಪೈಕಿ ಒಂದು ಸ್ಥಾನ ಕಡಿತಗೊಳಿಸಲಾಗಿದೆ, ನೂತನ ತಾಲೂಕು ಸರಗೂರಿಗೆ ಹೆಚ್ಚುವರಿಯಾಗಿ 3 ಸ್ಥಾನ ನೀಡಲಾಗಿದೆ.

ಮೈಸೂರು ತಾಲೂಕಿಗೆ ನಷ್ಟ: ಮೈಸೂರು ತಾಲೂಕಿಗೆಜಿಪಂ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಲ್ಲಿ ನಷ್ಟವಾಗಿದೆ. ಮೈಸೂರು ವರ್ತುಲ ರಸ್ತೆಯ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ,ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುತ್ತಿರುವುದು ಹಾಗೂ ಕೆಲವು ಪ್ರದೇಶಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸುತ್ತಿರುವುದರಿಂದ ಜಿಪಂನಲ್ಲಿ ಮೂರು ಸ್ಥಾನ ಹಾಗೂ ತಾಲೂಕು ಪಂಚಾಯಿತಿಯಲ್ಲಿ 19 ಸ್ಥಾನಕಡಿಮೆಯಾಗಿದೆ. ಮೈಸೂರು ತಾಲೂಕಿನ ತಾಪಂನ 38 ಸ್ಥಾನಗಳಲ್ಲಿ ಬರೋಬ್ಬರಿ 19 ಸ್ಥಾನಗಳು ಕಡಿಮೆಯಾಗಿದ್ದು, ಈಗ 19 ಸ್ಥಾನಗಳು ಮಾತ್ರಉಳಿದುಕೊಂಡಿವೆ. ಡಿಸೆಂಬರ್‌ನಲ್ಲಿ ನಡೆದಿದ್ದ ಗ್ರಾಪಂಚುನಾವಣೆಯಲ್ಲಿ ವರ್ತುಲ ರಸ್ತೆಯ ಅಕ್ಕಪಕದ ‌R ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಬರೀ 26 ಗ್ರಾಪಂಗಳಿಗಷ್ಟೇ ಚುನಾವಣೆ ನಡೆದಿತ್ತು.

ತಾಪಂ ವಿವರ: ಹೊಸ ಮಾರ್ಗಸೂಚಿ ಅನ್ವಯ ಈ ಹಿಂದೆ ಜಿಲ್ಲೆಯಲ್ಲಿದ್ದ 7 ತಾಲೂಕುಗಳಲ್ಲೂ ಬರೋಬ್ಬರಿ62 ತಾಪಂ ಸ್ಥಾನಗಳನ್ನು ಕಡಿತಗೊಳಿಸಲಾಗಿದೆ. 38 ತಾಪಂ ಸ್ಥಾನವಿದ್ದ ಮೈಸೂರು ತಾಲೂಕಿಗೆ 19 ಹಾಗೂ 34 ಸ್ಥಾನ ಹೊಂದಿರು ನಂಜನಗೂಡು ತಾಲೂಕಿಗೆ 27, 24 ಸ್ಥಾನ ಹೊಂದಿದ್ದ ತಿ.ನರಸೀಪುರ ತಾಲೂಕಿಗೆ 19, 23 ಸ್ಥಾನ ಹೊಂದಿರು ಹುಣಸೂರು ತಾಲೂಕಿಗೆ 19 ಹಾಗೂ 22 ಸ್ಥಾನ ಹೊಂದಿದ್ದ ಕೆ.ಆರ್‌. ನಗರ ಮತ್ತು ಪಿರಿಯಾಪಟ್ಟಣ ತಾಲೂಕಿಗೆ 18 ಸ್ಥಾನ ನಿಗದಿಯಾಗಿದೆ.

ಜೊತೆಗೆ 24 ಸ್ಥಾನಗಳನ್ನು ಹೊಂದಿದ್ದ ವಿಭಜಿತ ಎಚ್‌.ಡಿ. ಕೋಟೆ ತಾಲೂಕಿಗೆ 13 ಸ್ಥಾನ ನಿಗದಿ ಮಾಡಿ, ನೂತನ ಸರಗೂರು ತಾಲೂಕಿಗೆ 11 ಸ್ಥಾನ ನೀಡಲಾಗಿದೆ. ಈ ಮೂಲಕ ಜಿಲ್ಲೆಯ 07 ತಾಲೂಕುಗಳ ತಾಪಂ ಸದಸ್ಯರ ಸಂಖ್ಯೆ ಕ್ಷೀಣಿಸಿದೆ.

 

ಸತೀಶ್‌ ದೇಪುರ

ಟಾಪ್ ನ್ಯೂಸ್

1-ddfdf

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ

1-sdfdfdsf

ಶಿವಮೊಗ್ಗ ಬಸ್ ಗಳ ನಡುವೆ ಭೀಕರ ಅಪಘಾತ ; 40 ಕ್ಕೂ ಹೆಚ್ಚು ಜನರಿಗೆ ಗಾಯ

1-hgfdgfdg

ವಿವಾದಾತ್ಮಕ ಹೇಳಿಕೆ : ಮಾಜಿ ಪ್ರಧಾನಿ ದೇವೇಗೌಡರ ಕ್ಷಮೆ ಯಾಚಿಸಿದ ಕೆ.ಎನ್.ರಾಜಣ್ಣ

bjp-congress

ಜಾರ್ಜಿಗೊಂದು ಉತ್ಸವ, ಜಮೀರನಿಗೊಂದು ಉತ್ಸವ ಮಾಡಿಬಿಡಿ! ; ಬಿಜೆಪಿ ಲೇವಡಿ

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆಟಕುವಂತಿರಬೇಕು: ಬಸವರಾಜ ಬೊಮ್ಮಾಯಿ

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆಟಕುವಂತಿರಬೇಕು: ಬಸವರಾಜ ಬೊಮ್ಮಾಯಿ

ಆದಾಯ ತೆರಿಗೆ ಇಲಾಖೆಯ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯ

ಆದಾಯ ತೆರಿಗೆ ಇಲಾಖೆಯಿಂದ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gfgfdgf

ಜನತೆಯ ಆರೋಗ್ಯ ರಕ್ಷಿಸುವಲ್ಲಿ ವೈದ್ಯರ ಸೇವೆ ಅಪಾರ: ಶಾಸಕ ಕೆ.ಮಹದೇವ್

ಎಲ್ಲಾ ರೈಲು ಸೇವೆ ಆರಂಭಿಸುವಂತೆ ಮನವಿ

ಎಲ್ಲಾ ರೈಲು ಸೇವೆ ಆರಂಭಿಸುವಂತೆ ಮನವಿ

86 ದಿನ ಬಾಕಿ ; 2 ವರ್ಷ ನಂತರ ಅದ್ದೂರಿ ದಸರಾ ಉತ್ಸವಕ್ಕೆ ಸಿದ್ಧತೆ

86 ದಿನ ಬಾಕಿ ; 2 ವರ್ಷ ನಂತರ ಅದ್ದೂರಿ ದಸರಾ ಉತ್ಸವಕ್ಕೆ ಸಿದ್ಧತೆ

7

ಹುಣಸೂರು: ನಗರಸಭಾ ಪೌರಕಾರ್ಮಿಕರ ಹಲವು ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ

ಕಸಾಯಿಖಾನೆಗೆ ಪೊಲೀಸರ ದಾಳಿ : 31 ಹಸುಗಳ ರಕ್ಷಣೆ, 200 ಕೆಜಿ ಮಾಂಸ ಜಪ್ತಿ, ಆರೋಪಿಗಳು ಪರಾರಿ

ಕಸಾಯಿಖಾನೆಗೆ ಪೊಲೀಸರ ದಾಳಿ : 31 ಹಸುಗಳ ರಕ್ಷಣೆ, 200 ಕೆಜಿ ಮಾಂಸ ಜಪ್ತಿ, ಆರೋಪಿಗಳು ಪರಾರಿ

MUST WATCH

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಹೊಸ ಸೇರ್ಪಡೆ

1-dsfsffsf

ನಿವೃತ್ತಿ ದಿನ ಚಾಲಕನಿಗೆ ತಾವೆ ವಾಹನ ಚಲಾಯಿಸಿ ಮನೆಗೆ ಬಿಟ್ಟು ಬಂದ ಆರ್ ಟಿ ಓ

1-ds-ffds

ಬಂಟ್ವಾಳ: ದನಗಳನ್ನು ಕದ್ದು ಮಾಂಸ ಮಾಡುತ್ತಿದ್ದ ಅಪ್ಪ-ಮಗ ಬಂಧನ

1-ddfdf

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ

1-dsfsdfsdf

ಸಾಗರ: ಹಲ್ಕೆ ಮುಪ್ಪಾನೆ ಲಾಂಚ್ ಪುನರಾರಂಭ

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.