ಬಸ್- ಸ್ಕೂಟರ್ ಡಿಕ್ಕಿಯಾಗಿ ಅಪ್ಪ- ಮಗ ಸ್ಥಳದಲ್ಲೇ ಸಾವು

Team Udayavani, Dec 8, 2019, 2:28 PM IST

ಮೈಸೂರು: ಕೆ.ಎಸ್ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಕೋಟೆ ಹುಂಡಿ ಸರ್ಕಲ್ ಬಳಿ ಈ ಘಟನೆ ನಡೆದಿದೆ.  ಪ್ರಕಾಶ್ (50) ಸುರೇಶ್ (23) ಮೃತಪಟ್ಟವರು.  ಮೃತರು ಕಟ್ಟೆ ಹುಣಸೂರು ನಿವಾಸಿಗಳಾಗಿದ್ದು ಮೈಸೂರಿನ ಜೆ.ಪಿ.ನಗರದ ಮಹದೇವು ಪರದಲ್ಲಿ ವಾಸವಿದ್ದರು.

ಪ್ರಕಾಶ್ ಮತ್ತು ಸುರೇಶ್ ರೇಷನ್ ಅಕ್ಕಿಗಾಗಿ ಥಂಬ್ ಇಂಪ್ರೆಷನ್ ಕೊಡಲು ಕಟ್ಟೆ ಹುಣಸೂರಿಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಯಮಸ್ವರೂಪಿಯಾಗಿ ಬಂದ ಕೆಎಸ್ ಆರ್ ಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ