ಹುಣಸೂರು: ಮತ್ತೆ ಕಾಣಿಸಿಕೊಂಡ ಹುಲಿ; ಜಾನುವಾರುಗಳ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ


Team Udayavani, Nov 17, 2020, 9:39 PM IST

hunusooru

ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿ ಹುಲಿಯ ಉಪಟಳ ಮುಂದುವರೆದಿದ್ದು. ಹಾಡುಹಗಲೇ ಎಮ್ಮೆಗಳ ಮೇಲೆರಗಿದ ಹುಲಿಯು ಮೂರು ಎಮ್ಮೆಗಳನ್ನು ಗಾಯಗೊಳಿಸಿರುವ ಘಟನೆ ನೇರಳಕುಪ್ಪೆ ಹಾಡಿಯ ಬಳಿ ನಡೆದಿದೆ.

ಎಮ್ಮೆಗಳನ್ನು ಮೇಯಿಸುತ್ತಿದ್ದ ದನಗಾಹಿ ಮಾಕಮ್ಮ ಹುಲಿ ಕಂಡು ಕಿರುಚಿ ಹಾಡಿಯತ್ತ ಓಡಿ ಹೋಗಿದ್ದರಿಂದ ಪಾರಾಗಿದ್ದಾರೆ. ಹಾಡಿಯ ಮಂದಿಯ ಕಿರುಚಾಟದಿಂದ ಎಮ್ಮೆಗಳನ್ನು ಬಿಟ್ಟ ಹುಲಿ ಅರಣ್ಉದೊಳಕ್ಕೆ ಸೇರಿಕೊಂಡಿದೆ. ಗಾಯಗೊಂಡಿರುವ ಎಮ್ಮೆಗಳಿಗೆ ಹನಗೋಡು ಪಶು ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿದ ಆರಣ್ಯ ಇಲಾಖೆಯ ಹುಣಸೂರು ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಓ.ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.

ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ;
ಕಳೆದ ಆರು ತಿಂಗಳ ಹಿಂದೆ ನೇರಳಕುಪ್ಪೆಯ ಕುರಿಗಾಹಿ ಜನದೀಶನನ್ನು ಕೊಂದಿದ್ದ ಹುಲಿ ರುಂಡ ಮಾತ್ರ ಬಿಟ್ಟು ಹೋಗಿತ್ತು. ದಾಳಿ ನಡೆದ ಒಂದು ದಿನದ ಅಂತರದಲ್ಲೇ ಹುಲಿ ಸೆರೆಯಾಗಿತ್ತು. ವಾರದ ಹಿಂದೆ ನೇರಳಕುಪ್ಪೆ ಸಮೀಪದ ಉಡುವೆ ಪುರದ ದನಗಾಹಿ ಮೇಲೆರಗಿದ್ದ ಹುಲಿ ದನಗಾಹಿಯನ್ನು ಗಾಯಗೊಳಿಸಿತ್ತು. ಇದೀಗ ಮತ್ತೆ ತನ್ನ ಇರುವಿಕೆಯನ್ನು ತಿಳಿಸಲು ಎಮ್ಮೆ ಮೇಲೆ ದಾಳಿನಡೆಸಿದೆ.

ಪ್ರಾಣ ಹಾನಿಗೂ ಮುನ್ನ ಹುಲಿ ಸೆರೆ ಹಿಡಿಯಬೇಕು. ವನ್ಯಜೀವಿಗಳ ದಾಳಿಗೊಳಗಾದ ಜನ- ಜಾನುವಾರುಗಳಿಗೆ ಸೂಕ್ತ ಪರಿಹಾರ ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾ ಎಸ್.ಸಿ.ಎಸ್.ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಅರಣ್ಯಾಧಿಕಾರಿಗಳ ಸ್ಪಷ್ಟನೆ:
ಜನ ಮತ್ತು ಜಾನುವಾರುಗಳ ಮೇಲೆ ಹುಲಿ ದಾಳು ನಡೆಸಿದೆ. ಆದರೆ ಹುಲಿಯು ಅರಣ್ಯದಿಂದ ಹೊರ ಬಂದಿಲ್ಲ. ಬದಲಿಗೆ ಎಷ್ಟೇ ಮನವಿ ಮಾಡಿದರೂ ಕಾಡಂಚಿನ ಗ್ರಾಮದವರು ಜಾನುವಾರುಗಳನ್ನು ಅರಣ್ಯದೊಳಕ್ಕೆ ಬಿಟ್ಟು ಮೇಯಿಸುತ್ತಿದ್ದು. ಈವೇಳೆ ದಾಳಿನಡೆಸುತ್ತಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಸೂಚನೆಗಳನ್ನು ಪಾಲಿಸುವಂತೆ ಎಸಿಎಫ್ ಸತೀಶ್ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.