ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ಗುಡ್ಡದಲ್ಲಿ ಕಾಮಗಾರಿ ನಡೆಸುವಾಗಿ ಕೊಳವೆ ಒಡೆದ ವಿದ್ಯುತ್‌ ಇಲಾಖೆ , ಕಳೆದ ಎರಡ್ಮೂರು ದಿನಗಳಿಂದ ನೀರಿನ ಅಭಾವ

Team Udayavani, Apr 13, 2021, 4:08 PM IST

ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ನಂಜನಗೂಡು: ಇಲಾಖೆಗಳ ಯಡವಟ್ಟಿನಿಂದ ಬರೋಬ್ಬರಿ 16 ಗ್ರಾಮ ಗಳಿಗೆ ಕುಡಿಯುವ ನೀರು ಇಲ್ಲದಂತಾಗಿದ್ದು, ಅದರಲ್ಲೂ ಹಬ್ಬದ ಹಿಂದೆ ಮುಂದೆಯೇ ನೀರಿಲ್ಲದೇ ಪರಿತಪಿಸುವಂತೆ ಆಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಸದ್ಯಕ್ಕೆ ನೀರು ಸಿಗುವುದು ಅನುಮಾನವಾಗಿದೆ.

16 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ: ಕೌಲಂದೆ ಹೋಬಳಿಯ ಸುಮಾರು 57 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಹದೇವನಗರದ ಪರ್ವತಾಂಜನೇಯನ ಗುಡ್ಡದ ಮೇಲೆ 2008ರಲ್ಲಿ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದೆ. 5 ಲಕ್ಷ ಗ್ಯಾಲನ್‌ ನೀರು ಸಾಮರ್ಥ್ಯದ ಟ್ಯಾಂಕ್‌ಗೆ ಪ್ರತಿದಿನ ಕಬಿನಿ ನದಿ ಮೂಲಕ ನೀರು ತುಂಬಿಸಿ, ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 57 ಹಳ್ಳಿಗಳಿಗೆ ನೀಡಬೇಕಾಗಿದ್ದ ನೀರನ್ನು ಕೇವಲ 16 ಗ್ರಾಮಗಳಿಗೆ ನೀಡಲಾಗುತ್ತಿದೆ. ಅದೂ ಕೂಡ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.

ವಿದ್ಯುತ್‌ ಇಲಾಖೆ ಯಡವಟ್ಟು: ಗುಡ್ಡದ ಮೇಲೆ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದ್ದು, ಇಲ್ಲಿರುವ ಹಳೆಯ ವಿದ್ಯುತ್‌ ಕಂಬಗಳನ್ನು ಬದಲಾಯಿಸಿ ಹೈಟೆಕ್‌ ವ್ಯವಸ್ಥೆ ಮಾಡಲು ಹೊರಟ ವಿದ್ಯುತ್‌ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿ ಈ ಟ್ಯಾಂಕ್‌ಗೆ ನೀರು ಸರಬರಾಜಾ ಗುವ ಕೊಳವೆ ಒಡೆದುಹೊಗಿದೆ. ಹೀಗಾಗಿ ನೀರು ಗುಡ್ಡದಲ್ಲೇ ಸೋರಿಕೆಯಾಗುತ್ತಿರುವುದರಿಂದ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಕೊಳವೆಗೆ ಹಾನಿಯಾದ ತಕ್ಷಣವೇ ವಿದ್ಯುತ್‌ ಇಲಾಖೆಯ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಯಾರಿಗೂ ಹೇಳದೆ ಅಲ್ಲಿಂದ ವಾಪಸ್ಸಾಗಿ ಮೌನ ವಹಿಸಿದರು.

ಇದೀಗ ಟ್ಯಾಂಕ್‌ಗೆ ನೀರು ತುಂಬಲು ಮೋಟಾರ್‌ ಚಾಲನೆ ಮಾಡಿದ ತಕ್ಷಣವೇ ಭಾರೀ ಪ್ರಮಾಣದ ನೀರು ನೀರು ಗುಡ್ಡದ ಮೇಲೆ ಸೋರಿಕೆಯಾಗುತ್ತಿದೆ. ಟ್ಯಾಂಕಿಗೆ ತೊಟ್ಟು ನೀರು ಸಹ ತಲು ಪುತ್ತಿಲ್ಲ. ಸದ್ಯದ ಮಟ್ಟಿಗೆ ಮೋಟರ್‌ ಸ್ಥಗಿತಗೊಳಿಸಲಾಗಿದ್ದು, ಕೌಲಂದೆ ಹೋಬಳಿಯ 16 ಗ್ರಾಮಗಳ ಜನರು ಕಳೆದ ಮೂರು ದಿನಗಳಿಂದನೀರಿಲ್ಲದೇ ಪರದಾಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು, ನಮಗೆ ನೀರುಪೂರೈಸುವವರು ಯಾರು, ಅದರಲ್ಲೂ ಯುಗಾದಿ ಹಬ್ಬದ ವೇಳೆಯೇಈ ಪರಿಸ್ಥಿತಿ ನಿರ್ಮಾಣವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ನೀರುಸರಬರಾಜು ಇಲಾಖೆ, “ಗುಡ್ಡದ ಮೇಲೆ ನೀರು ಪೂರೈಕೆ ಕೊಳವೆ ಯನ್ನು ವಿದ್ಯುತ್‌ ಇಲಾಖೆಯವರು ಹಾನಿಪಡಿಸಿದ್ದಾರೆ. ಹೀಗಾಗಿ ಅವರೇ ಇದನ್ನು ದುರಸ್ತಿ ಮಾಡಬೇಕು’ ಎಂದು ಸ್ಪಷ್ಟನೆ ನೀಡಿದೆ.ಆದರೆ, ನೀರು ಪೂರೈಕೆ ಕೊಳವೆ ಒಡೆದಿರುವ ವಿದ್ಯುತ್‌ ಇಲಾಖೆಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಳವೆ ಒಡೆದುನಾಲ್ಕು ದಿನ ಕಳೆದರೂ ಯಾರೊಬ್ಬರೂ ದುರಸ್ತಿಗೆ ಮುಂದಾಗಿಲ್ಲ. ಒಟ್ಟಾರೆ ಇಲಾಖೆಗಳ ನಿರ್ಲಕ್ಷ್ಯ ಧೋರಣೆ, ಅಸಡ್ಡೆ ಮನೋಭಾವ ದಿಂದ16 ಹಳ್ಳಿಗಳ ಸಹಸ್ರಾರು ಮಂದಿ ನೀರಿಲ್ಲದೇ ಪರಿತಪಿ ಸು ವಂತಾಗಿದೆ. ಈ  ಅವ್ಯವಸ್ಥೆಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ವಿದ್ಯುತ್‌ ಇಲಾಖೆಯೇ ಜವಾಬ್ದಾರಿ ಹೊರಲಿ :

ಗುಡ್ಡದ ಮೇಲೆ ವಿದ್ಯುತ್‌ ಕಂಬ ಬದಲಾಯಿಸುವಕಾಮಗಾರಿ ನಡೆಸುತ್ತಿದ್ದ ವಿದ್ಯುತ್‌ ಇಲಾಖೆಯೇಜೆಸಿಬಿ ಯಂತ್ರದ ಮೂಲಕ ಕೊಳವೆಯನ್ನುಒಡೆದಿದೆ. ಇಲಾಖೆ ಅಧಿಕಾರಿಗಳೇ ಕೊಳವೆಯನ್ನುದುರಸ್ತಿಪಡಿಸಬೇಕು. ಇಲ್ಲದಿದ್ದರೆ ಅದಕ್ಕೆ ಎಷ್ಟುಖರ್ಚಾಗುತ್ತದೆಯೋ ಅಷ್ಟು ಹಣವನ್ನು ನೀಡಿದರೆ ನಾವೇ ದುರಸ್ತಿಪಡಿಸಿ ಗ್ರಾಮಗಳಿಗೆ ನೀರು ಪೂರೈಸುತ್ತೇವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ರಂಗನಾಥ್‌ ತಿಳಿಸಿದ್ದಾರೆ.

ಜಟಾಪಟಿ ಬಿಟ್ಟು ಕೊಳವೆ ದುರಸ್ತಿಪಡಿಸಿ ನೀರು ಪೂರೈಸಿ :  ಎರಡು ಇಲಾಖೆಗಳ ಜಟಾಪಟಯಿಂದ 16 ಗ್ರಾಮಗಳ ಜನರು ಬಿರು ಬೇಸಿಗೆ ವೇಳೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಕೊಳವೆ ಒಡೆದು ನಾಲ್ಕೈದು ದಿನ ಕಳೆದರೂ ದುರಸ್ತಿಗೆ ಯಾರೂಮುಂದಾಗುತ್ತಿಲ್ಲ. ಯುಗಾದಿ ಹಬ್ಬದ ಸಮಯದಲ್ಲೇ ನಮಗೆ ನೀರಿಲ್ಲ ದಂತಾಗಿದೆ. ಇನ್ನೆಷ್ಟು ದಿನ ಕಾಯಬೇಕು, ಯಾರು ಹೊಣೆಹೊರಬೇಕು ಎಂಬುದು ಗೊಂದಲ ಮಯವಾಗಿದೆ. ಅಸಡ್ಡೆಮನೋಭಾವ ಬಿಟ್ಟು ಇಲಾಖೆಗಳ ಅಧಿಕಾರಿಗಳು ಪರಸ್ಪರಮಾತುಕತೆ ನಡೆಸಿ, ಒಂದು ತೀರ್ಮಾನಕ್ಕೆ ಬಂದು ಕೊಳವೆದುರಸ್ತಿಪಡಿಸಿ ನಮಗೆ ನೀರು ಪೂರೈಸಬೇಕು ಎಂದು ಕೌಲಂದೆ ಹೋಬಳಿಯ ಬದನವಾಳು, ಕೌಲಂದೆ, ದೇವನೂರು ಚುಂಚನಳ್ಳಿ ಮತ್ತಿತರ ಹಳ್ಳಿಗಳ ಜನರು ಆಗ್ರಹಿಸಿದ್ದಾರೆ.

ವಿದ್ಯುತ್‌ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆಯೊಳಗೆ ಒಡೆದಿರುವ ಕೊಳವೆದುರಸ್ತಿಪಡಿಸಬೇಕು. ಇಲ್ಲದಿದ್ದರೆ ಬುಧವಾರ ನಾವೇಅದನ್ನು ದುರಸ್ತಿ ಮಾಡಿ ಗ್ರಾಮಗಳಿಗೆ ನೀರು ಪೂರೈಸಲುಕ್ರಮ ಕೈಗೊಳ್ಳುತ್ತೇವೆ. ಚರಿತಾ, ತಾಲೂಕು ಗ್ರಾಮೀಣ  ನೀರು ಸರಬರಾಜು ಅಧಿಕಾರಿ

 

 – ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

web exclusive

ಆರೋಗ್ಯವೇ ಭಾಗ್ಯ; ನಿದ್ರಾ ಹೀನತೆಯಲ್ಲಿ ಮೂರು ವಿಧಗಳಿವೆ…ಅವುಗಳಿಂದಾಗುವ ಪರಿಣಾಮಗಳೇನು?

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ  ಯುವಕರಿಬ್ಬರಿಗೆ ಚೂರಿ ಇರಿತ

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ  ಯುವಕರಿಬ್ಬರಿಗೆ ಚೂರಿ ಇರಿತ

ಸಾಗರ: 46 ವರ್ಷಗಳಿಂದ ಮನೆಯಂಗಳದಲ್ಲಿಯೇ ಧ್ವಜಾರೋಹಣ!

ಸಾಗರ: 46 ವರ್ಷಗಳಿಂದ ಮನೆಯಂಗಳದಲ್ಲಿಯೇ ಧ್ವಜಾರೋಹಣ!

ವಂಶಾಡಳಿತ ದೇಶಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ರಾಹುಲ್ ನಕಾರ

ವಂಶಾಡಳಿತ ದೇಶಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ರಾಹುಲ್ ನಕಾರ

ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್‌ ಜಾರಿ

ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್‌ ಜಾರಿ

lal singh chaddha four day collection

ನಾಲ್ಕು ದಿನಗಳಲ್ಲಿ ಆಮಿರ್ ಚಿತ್ರ ಲಾಲ್ ಸಿಂಗ್ ಛಡ್ಡಾ ಗಳಿಸಿದ್ದೆಷ್ಟು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರದಲ್ಲಿ ತಾಲೂಕಿನ 104 ದೇಗುಲ ಸಚ್ಛತೆ

ವಾರದಲ್ಲಿ ತಾಲೂಕಿನ 104 ದೇಗುಲ ಸಚ್ಛತೆ

ರವಿ ಬೋಪಣ್ಣ ಚಿತ್ರ ಯಶಸ್ಸಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆ

ರವಿ ಬೋಪಣ್ಣ ಚಿತ್ರ ಯಶಸ್ಸಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು 

ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು 

tdy-18

ಕಾಂಗ್ರೆಸ್ ನಿಂದ ಜನಹಿತ,ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ : ಧ್ರುವನಾರಾಯಣ್ ವಾಗ್ದಾಳಿ

1-dsadad

ವರದಕ್ಷಿಣೆ ದಾಹಕ್ಕೆ ಗೃಹಿಣಿ ಬಲಿ: ಪತಿ ಸೇರಿ ಮೂವರ ಬಂಧನ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

udayavani youtube

ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ಹಾರಿದ ರಾಷ್ಟ್ರಧ್ವಜ

ಹೊಸ ಸೇರ್ಪಡೆ

ದೇಸಿ ಕ್ರೀಡೆಯತ್ತ ಆಕರ್ಷಣೆಗೆಸಚಿವ ಖೂಬಾ ಪ್ರಶಂಸೆ; ಸಚಿವ ಖೂಬಾ

ದೇಸಿ ಕ್ರೀಡೆಯತ್ತ ಆಕರ್ಷಣೆಗೆಸಚಿವ ಖೂಬಾ ಪ್ರಶಂಸೆ; ಸಚಿವ ಖೂಬಾ

web exclusive

ಆರೋಗ್ಯವೇ ಭಾಗ್ಯ; ನಿದ್ರಾ ಹೀನತೆಯಲ್ಲಿ ಮೂರು ವಿಧಗಳಿವೆ…ಅವುಗಳಿಂದಾಗುವ ಪರಿಣಾಮಗಳೇನು?

tdy-11

ಆ.17 ರಂದು ನಾಳೆ ಮಹಾಲಿಂಗಪುರ ಬಂದ್: ಸಾಮೂಹಿಕ ನಾಯಕತ್ವದಡಿ ಹೋರಾಟ

ಮಂತ್ರಾಲಯದ ಶ್ರೀ ರಾಯರ ಆರಾಧನೆ ಸಂಪನ್ನ

ಮಂತ್ರಾಲಯದ ಶ್ರೀ ರಾಯರ ಆರಾಧನೆ ಸಂಪನ್ನ

ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿದ ಅಶೋಕ್‌

ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿದ ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.