ಎಚ್‌ಡಿಕೆ ಮೈಸೂರಿಗೆ ಏನು ಕೊಡ್ತಾರೆ?

Team Udayavani, Feb 8, 2019, 7:09 AM IST

m2-hmysori.jpg

ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ 2ನೇ ಮುಂಗಡಪತ್ರದಲ್ಲಿ ಮೈಸೂರು ಜಿಲ್ಲೆಗೆ ಯಾವ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಹಿಂದಿನ ಐದು ವರ್ಷಗಳ ಕಾಲ ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರಿಂದ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿದೆ. ಜೊತೆಗೆ ವಿಧಾನಸಭೆ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಅವರು ಮಂಡಿಸಿದ್ದ 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ಸಾಕಷ್ಟು ಯೋಜನೆಗಳು ಇನ್ನೂ ಕಾರ್ಯಗತ ವಾಗಬೇಕಿದೆ.

ನೀರು ತುಂಬಿಸುವ ಯೋಜನೆ: ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕರೆದಿದ್ದ ಬಜೆಟ್ ಪೂರ್ವ ಸಭೆಯಿಂದ ಹೊರಗುಳಿದಿದ್ದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ತಾರಕ ಜಲಾಶಯಕ್ಕೆ ಸಮರ್ಪಕವಾಗಿ ನೀರು ತುಂಬಿಸುವ ದೃಷ್ಟಿಯಿಂದ ಈಗ ಕಬಿನಿ ಹಿನ್ನೀರಿಗೆ ಅಳವಡಿಸಿರುವ ಪೈಪ್‌ಲೈನ್‌ ವಿಸ್ತರಿಸಬೇಕು.

ಮೈಸೂರು ವಿಶ್ವವಿದ್ಯಾಲಯದಲ್ಲಿ ನಾಡು ಕಂಡ ಅಪ್ರತಿಮ ರೈತ ಹೋರಾಟಗಾರ ದಿ.ಕೆ.ಎಸ್‌.ಪುಟ್ಟಣ್ಣಯ್ಯ ನವರ ಹೋರಾಟ, ಚಿಂತನೆ, ದೂರದೃಷ್ಟಿತ್ವದ ಬಗ್ಗೆ ಅಧ್ಯಯನ ನಡೆಸಲು ಅಧ್ಯ ಯನ ಪೀಠ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದು ಸಲಹೆ ನೀಡಲಾಗಿದೆ.

ರೈತರ ಬೇಡಿಕೆ: ರಾಜ್ಯಕಬ್ಬು ಬೆಳೆಗಾರರ ಸಂಘದಿಂದ ಸರ್ಕಾರ ಸಾಲಮನ್ನಾ ಘೋಷನೆ ಮಾಡಿ ಹಲವು ಷರತ್ತು ಗಳನ್ನು ವಿಧಿಸಿರುವುದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಜೊತೆಗೆ ಸರ್ಕಾರ ಬ್ಯಾಂಕ್‌ಗಳಿಗೆ ಸಾಲಮನ್ನಾದ ಹಣ ಪಾವತಿಸಬೇಕು. ಇಲ್ಲವಾದಲ್ಲಿ ರೈತರಿಗೆ ಹೊಸ ಸಾಲ ದೊರೆಯುವುದಿಲ್ಲ. ಬೆಳೆವಿಮೆಯನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಾಡದೆ ಪ್ರತಿ ರೈತನ ಹೊಲದಲ್ಲಿ ಆದ ನಷ್ಟಕ್ಕೆ ಸಂಬಂಧಿಸಿದಂತೆ ವಿಮೆ ಪಾವತಿಸುವ ಕೆಲಸವಾಗಬೇಕು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿ ಸುವುದು ಮಾತ್ರವಲ್ಲ. ಖರೀದಿ ಭದ್ರತೆ ಯನ್ನೂ ನೀಡಬೇಕು. ಜೊತೆಗೆ ಹಣ್ಣು- ತರಕಾರಿ ಸೇರಿದಂತೆ ರೈತ ಬೆಳೆದ ಎಲ್ಲ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿತಂದು ಬಾಕಿ ಪಾವತಿಸದ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂದು ಮನವಿ ಮಾಡಲಾಗಿದೆ.

ದಸರಾ ಪ್ರಾಧಿಕಾರ: ರಾಜ್ಯದ ಪ್ರಮುಖ ಪ್ರವಾಸಿ ತಾಣ ವಾದ ಮೈಸೂರು ನಗರಕ್ಕೆ ನಿಯಮಿತವಾಗಿ ಪ್ರವಾಸಿಗರನ್ನು ಆಕರ್ಷಿಸಲು ಪೂರಕ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ತರಾತುರಿಯಲ್ಲಿ ದಸರಾ ಸಿದ್ಧತೆ ಮಾಡುವ ಬದಲು ದಸರಾ ಪ್ರಾಧಿಕಾರ ರಚಿಸುವಂತೆ ಬಹು ವರ್ಷಗಳ ಬೇಡಿಕೆ ಇದೆ.

ನಿವೇಶನಗಳ ಕೊರತೆಯಿಂದ ಬಡ ವರ್ಗದವರಿಗೆ ವಸತಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲಾಗು ತ್ತಿಲ್ಲ. ಸಮ್ಮಿಶ್ರ ಸರ್ಕಾರ ದಸರಾ ಪ್ರಾಧಿಕಾರ ರಚನೆ ಮಾಡ ಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಜಿಲ್ಲೆಯವರೇ ಪ್ರವಾಸೋದ್ಯಮ ಸಚಿವರಾಗಿರುವುದರಿಂದ ಜಿಲ್ಲೆಗೆ ಯಾವ ಹೊಸ ಪ್ರವಾಸಿ ಯೋಜನೆಗಳನ್ನು ತರಲಿ ದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಆದಿವಾಸಿಗಳಿಗೆ ಸೌಲಭ್ಯ: ಜಿಲ್ಲೆಯಲ್ಲಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಆದಿವಾಸಿಗಳ ಕುಟುಂಬ ಗಳಿಗಾಗಿ ಹೊಸ ಹಾಡಿಗಳ ನಿರ್ಮಾಣ, ಕೃಷಿಭೂಮಿ, ಮನೆ ಒದಗಿಸುವುದು, ಆದಿವಾಸಿಗಳು ಹೆಚ್ಚಿರುವ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕುಗಳಲ್ಲಿ ಬಿರ್ಸಾ ಮುಂಡಾ ಭವನ ನಿರ್ಮಾಣ,

ಆದಿವಾಸಿಗಳ ಹಾಡಿಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ತೆರೆಯುವುದು, ಅರಣ್ಯ ಹಕ್ಕು ಸಮಿತಿಗಳ ಬಲವರ್ಧನೆ, ಮೊರ,ಕುಕ್ಕೆ, ಲಾಂಟನ ಕಡ್ಡಿಯಲ್ಲಿ ಪೀಠೊಪಕರಣ ಮಾಡುವ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಆದಿವಾಸಿ ಕುಟುಂಬಗಳಿಗೆ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಟಾಪ್ ನ್ಯೂಸ್

Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 8 ಕುಸಿತ, ಮುಸ್ಲಿಂ ಶೇ.43 ಏರಿಕೆ

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 8 ಕುಸಿತ, ಮುಸ್ಲಿಂ ಶೇ.43 ಏರಿಕೆ

1-24-thursday

Daily Horoscope: ವ್ಯವಹಾರದಲ್ಲಿ ಪ್ರಗತಿ, ಹಳೆಯ ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

Weather ಬಿಸಿಲ ತಾಪ: ಪದವಿ ತರಗತಿ ಬೇಗ ಆರಂಭಿಸಲು ತೀರ್ಮಾನ

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 8 ಕುಸಿತ, ಮುಸ್ಲಿಂ ಶೇ.43 ಏರಿಕೆ

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 8 ಕುಸಿತ, ಮುಸ್ಲಿಂ ಶೇ.43 ಏರಿಕೆ

1-24-thursday

Daily Horoscope: ವ್ಯವಹಾರದಲ್ಲಿ ಪ್ರಗತಿ, ಹಳೆಯ ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.