ಪಡೀಲ್ ದುರ್ಘಟನೆ: ಸರಕಾರದ ಹತ್ತು ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ

Team Udayavani, Sep 9, 2019, 6:27 PM IST

ಮಂಗಳೂರು: ಪಡೀಲ್ ಬಳಿಯ ಕೊಡಕ್ಕಲ್ ಶಿವನಗರದಲ್ಲಿ ಭಾನುವಾರದಂದು ಮನೆಮೇಲೆ ತಡೆಗೋಡೆ ಕುಸಿದು ಮೃತಪಟ್ಟ ಮಕ್ಕಳಿಬ್ಬರ ಹೆತ್ತವರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರು ರಾಜ್ಯ ಸರಕಾರದ ವತಿಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರದ ಚೆಕ್ ಹಾಗೂ ತಮ್ಮ ವೈಯಕ್ತಿಕ ನೆಲೆಯಿಂದ ತಮ್ಮದೇ ಸೇವಾ ಸಂಸ್ಥೆಯಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಸೋಮವಾರದಂದು ವಿತರಿಸಿದರು.

ಇನ್ನು ಮೃತಪಟ್ಟ ಮಕ್ಕಳ ಹೆತ್ತವರಾದ ರಾಮಣ್ಣ ಗೌಡ-ರಜನಿ ದಂಪತಿಗೆ ಮನೆ ಕಟ್ಟಲು ಸರಕಾರದ ವತಿಯಿಂದ ಜಾಗ ಹಾಗೂ ಮನೆ ಕಟ್ಟಲು ಸಹಾಯ ಧನ ಕೂಡ ಸರಕಾರದ ವತಿಯಿಂದ ನೀಡುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ. ಶಾಸಕರೊಂದಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ವಸಂತ ಜೆ ಪೂಜಾರಿ, ಕಂದಾಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ