ವಸತಿ ನಿಲಯಗಳ 3.5 ಕೋಟಿ ರೂ. ಬಾಡಿಗೆ ಬಾಕಿ

ಲಾಕ್‌ಡೌನ್‌ ಬಳಿಕ ಪಾವತಿಯಾಗಿಲ್ಲ ಬಿಡಿಗಾಸು,ಉಪಯೋಗಿಸದಿದ್ದರೂ ಪಾವತಿಸಬೇಕಿದೆ ಬಾಡಿಗೆ

Team Udayavani, Dec 3, 2020, 4:14 PM IST

ವಸತಿ ನಿಲಯಗಳ 3.5 ಕೋಟಿ ರೂ. ಬಾಡಿಗೆ ಬಾಕಿ

ರಾಯಚೂರು: ಸಮಾಜ ಕಲ್ಯಾಣ ಇಲಾಖೆ ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಸತಿನಿಲಯಗಳಲ್ಲಿ ಸಾಕಷ್ಟು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದು, ಲಾಕ್‌ಡೌನ್‌ ಬಳಿಕ ಈವರೆಗೂ ಬಾಡಿಗೆ ಹಣ ಪಾವತಿಸಿಲ್ಲ. ಬರೋಬ್ಬರಿ 3.5 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಕಟ್ಟಡಮಾಲೀಕರು ಅಧಿಕಾರಿಗಳ ಮೇಲೆ ಒತ್ತಡ ಹಾಕುವಂತಾಗಿದೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆವ್ಯಾಪ್ತಿಯಡಿ 80 ವಸತಿ ನಿಲಯಗಳಿದ್ದು, ಅದರಲ್ಲಿ 20 ಬಾಡಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ.ಲಾಕ್‌ಡೌನ್‌ ಪೂರ್ವದಲ್ಲಿ 1.62 ಕೋಟಿ ರೂ. ಬಿಡುಗಡೆಯಾಗಿತ್ತು. ಆಗ ಬಾಡಿಗೆಪಾವತಿಸಲಾಗಿತ್ತು. ಅದಾದ ಬಳಿಕ ಸರ್ಕಾರಎಲ್ಲ ಹಾಸ್ಟೆಲ್‌ಗ‌ಳನ್ನು ಮುಚ್ಚಿಸಿದೆ. ಆದರೆ, ಕಟ್ಟಡಗಳನ್ನು ಖಾಲಿ ಮಾಡಿಲ್ಲ. ಇದರಿಂದಉಪಯೋಗವಿಲ್ಲದಿದ್ದರೂ ಕಟ್ಟಡಗಳಿಗೆಮಾತ್ರ ಬಾಕಿ ಪಾವತಿಸಲೇಬೇಕಿದೆ. ಸರ್ಕಾರ ಹೇಗಿದ್ದರೂ ಬಾಡಿಗೆ ಕೊಡುತ್ತದೆ ಎಂಬ ಕಾರಣಕ್ಕೆ ಇದರಿಂದ ಕಟ್ಟಡ ಮಾಲೀಕರು ಕೂಡ ಮೌನಕ್ಕೆ ಶರಣಾಗಿದ್ದರು. ಆದರೆ, ಈಗ ವಸತಿ ನಿಲಯಗಳನ್ನು ಆರಂಭಿಸುತ್ತಿಲ್ಲ ಅತ್ತ ಬಾಡಿಗೆ ಪಾವತಿಸದಿರುವುದು ಗೊಂದಲಕ್ಕೆಡೆ ಮಾಡಿದೆ. ಇದರಿಂದ ಮಾಲೀಕರು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುವಂತಾಗಿದೆ.

ಬಾಕಿ ಹಣ ಬಿಡುಗಡೆಗೆ ಪ್ರಸ್ತಾವನೆ: ಮಾರ್ಚ್‌ ನಿಂದ ಈವರೆಗೆ ಬರೋಬ್ಬರಿ 3.5 ಕೋಟಿ ರೂ. ಬಾಕಿ ಹಣ ಉಳಿದಿದೆ. ಪ್ರತಿ ತಿಂಗಳು 11.62 ಲಕ್ಷ ರೂ. ಬಾಡಿಗೆ ಹಣ ಸಂದಾಯ ಮಾಡಬೇಕಿದ್ದು, ಕಳೆದ ಎಂಟು ತಿಂಗಳಿಂದ ಪಾವತಿ ಮಾಡಿಲ್ಲ. ಇಲಾಖೆ ಮುಖ್ಯ ಕಾರ್ಯದರ್ಶಿಗೆ ಬಾಕಿ ಹಣ ಪಾವತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಗುತ್ತಿಗೆ ಸಿಬ್ಬಂದಿಗೆ ಮಾತ್ರ ವೇತನ ಪಾವತಿಯಾಗಿದ್ದು, ಕಾಯಂ ಸಿಬ್ಬಂದಿಗೆ ಈಗ ವೇತನ ಪಾವತಿಸಲುಹಣಕಾಸು ಇಲಾಖೆ ಸಮ್ಮತಿ ಸೂಚಿಸಿದೆ. ಇದರಿಂದ ಬಾಡಿಗೆ ಹಣ ಈಗ ಬರಬಹುದೇ ಎಂಬುದಕ್ಕೆ ಉತ್ತರ ಸಿಗದಾಗಿದೆ.

ಸುಳಿಯದ ವಿದ್ಯಾರ್ಥಿಗಳು: ಇನ್ನೂ ಪದವಿ ಕಾಲೇಜುಗಳು ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯ 14 ವಸತಿ ನಿಲಯಗಳನ್ನು ಆರಂಭಿಸಲಾಗಿದೆ. ಆದರೆ, ಈವರೆಗೆ ಒಬ್ಬೇ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ. ಕೋವಿಡ್‌ ನಿಯಮಾನುಸಾರ ವಿದ್ಯಾರ್ಥಿಗಳನ್ನು ದಾಖಲುಮಾಡಿಕೊಳ್ಳಬೇಕಿದ್ದು, ಈಗಿರುವ ಸಂಖ್ಯೆಯ ಅರ್ಧದಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ. ಉಳಿದ ವಿದ್ಯಾರ್ಥಿಗಳನ್ನು ಪೂರ್ವ ಪ್ರಾಥಮಿಕ ವಸತಿ ನಿಲಯಗಳಿಗೆ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿತ್ತು. ಜಿಲ್ಲೆಯಲ್ಲಿ ಮೆಟ್ರಿಕ್‌ ಪೂರ್ವ ವಿಭಾಗದಲ್ಲಿ 5750 ಹಾಗೂ ಮೆಟ್ರಿಕ್‌ ನಂತರದಲ್ಲಿ 4554 ವಿದ್ಯಾರ್ಥಿಗಳಿದ್ದಾರೆ.

ಎಲ್ಲೆಲ್ಲಿ ಎಷ್ಟು ಕಟ್ಟಡ? : ರಾಯಚೂರು ತಾಲೂಕಿನಲ್ಲಿ 18ವಸತಿ ನಿಲಯಗಳಿದ್ದು, ನಾಲ್ಕು ಬಾಡಿಗೆಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಮಾನ್ವಿಯಲ್ಲಿ 10ರಲ್ಲಿ ನಾಲ್ಕು, ಸಿಂಧನೂರಿನಲ್ಲಿ 11ರಲ್ಲಿ ಆರು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಲಿಂಗಸೂಗೂರಿನಲ್ಲಿ 23ರಲ್ಲಿ ಕೇವಲ 2 ಮಾತ್ರ ಬಾಡಿಗೆ ಕಟ್ಟಡದಲ್ಲಿವೆ. ದೇವದುರ್ಗದಲ್ಲಿ 17ರಲ್ಲಿ 6 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿನಡೆಸಲಾಗುತ್ತಿದೆ. ಲಾಕ್‌ಡೌನ್‌ ಬಳಿಕ ಸರ್ಕಾರ ಹೊಸ ವಸತಿ ನಿಲಯಗಳ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ.ಈಗಾಗಲೇ ಕೆಲವಡೆ ಸ್ವಂತ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಬಳಕೆಗೆ ಮುಕ್ತಗೊಂಡಿಲ್ಲ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಸುವ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, 3.5 ಕೋಟಿ ಬಾಡಿಗೆ ಹಣ ಬಾಕಿ ಇದೆ. ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡ ಮಾಲೀಕರಿಂದ ಒತ್ತಡ ಬಂದಿಲ್ಲ. ಹಣ ಯಾವಾಗ ಬಿಡುಗಡೆ ಆಗಬಹುದು ಎಂದು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಹಣ ಬಿಡುಗಡೆಯಾಗಬಹುದು. –ಸತೀಶ ಕೆ.ಎಚ್‌, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

-ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆಯಿಂದ ಮನೆಗೋಡೆ ಕುಸಿದು ಮೂವರು ಸಾವು

ಮಾನ್ವಿ: ಮಳೆಯಿಂದ ಮನೆಗೋಡೆ ಕುಸಿದು ಮೂವರು ಸಾವು

6

ಮಕ್ಕಳ ಮನದಾಸೆ; ಬಿಸಿಯೂಟದಲ್ಲಿ ದೋಸೆ!

ಮಲ್ಲಿಕಾರ್ಜುನ ಖರ್ಗೆ ಹಾಳೂರಿಗೆ ಉಳಿದವನೇ ಗೌಡ: ಸಿ.ಎಂ.ಇಬ್ರಾಹಿಂ ಲೇವಡಿ

ಮಲ್ಲಿಕಾರ್ಜುನ ಖರ್ಗೆ ಹಾಳೂರಿಗೆ ಉಳಿದವನೇ ಗೌಡ: ಸಿ.ಎಂ.ಇಬ್ರಾಹಿಂ ಲೇವಡಿ

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.