ಗ್ರಾಪಂ ಚುನಾವಣೆಗೂ ಬಹಿಷ್ಕಾರ ಅಸ್ತ್ರ!

|ನಾಲ್ಕು ಗ್ರಾಪಂ ವ್ಯಾಪ್ತಿಯ 30 ಹಳ್ಳಿಗಳ ಗ್ರಾಮಸ್ಥರ ಪ್ರತಿಜ್ಞೆ|ಆಕಾಂಕ್ಷಿಗಳಲ್ಲಿ ಶುರುವಾಯ್ತು ನಡುಕ

Team Udayavani, Dec 7, 2020, 5:42 PM IST

ಗ್ರಾಪಂ ಚುನಾವಣೆಗೂ ಬಹಿಷ್ಕಾರ ಅಸ್ತ್ರ!

ಮಸ್ಕಿ: ಎನ್‌ಆರ್‌ಬಿಸಿ 5ಎ ಕಾಲುವೆ ಅನುಷ್ಠಾನದ ಬೇಡಿಕೆ ಇಟ್ಟು ಕೇವಲ ಮಸ್ಕಿ ಕ್ಷೇತ್ರದ ಉಪಚುನಾವಣೆ ಮಾತ್ರವಲ್ಲ, ಗ್ರಾಪಂ ಚುನಾವಣೆಗೂ ರೈತರು ಬಹಿಷ್ಕಾರದ ಪ್ರತಿಜ್ಞೆ ತೊಡುತ್ತಿದ್ದು, ಈಗ ಕೇವಲ ಚುನಾಯಿತರಿಗೆ ಮಾತ್ರವಲ್ಲ ಅಧಿಕಾರಿ ವಲಯಕ್ಕೂ ತಲೆಬಿಸಿಗೆ ಕಾರಣವಾಗಿದೆ.

ಮಸ್ಕಿ ಉಪಚುನಾವಣೆ ಘೋಷಣೆ ಹೊತ್ತಲ್ಲೇ ಚುರುಕಾದ ನೀರವಾರಿ ಹೋರಾಟಗಳು ಸರಕಾರಕ್ಕೆ ಸವಾಲೊಡ್ಡಿವೆ. ರೈತರ ಚಳವಳಿಯ ಬಲ ಆಕಾಂಕ್ಷಿಗಳ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಉಪಚುನಾವಣೆ ನೆಪದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಹಾಲಿ-ಮಾಜಿ ಶಾಸಕರು, ಮಂತ್ರಿಗಳಿಗೂ ಇದರ ಬಿಸಿ ಈಗಾಗಲೇ ತಟ್ಟಿದ್ದಾಗಿದೆ. ಆದರೆ ಮಸ್ಕಿ ಉಪಚುನಾವಣೆಗೆಮುನ್ನವೇ ಗ್ರಾಪಂಗಳ ಚುನಾವಣೆಘೋಷಣೆಯಾಗಿದ್ದು, ಈ ಚುನಾವಣೆಗಳನ್ನೂ ಜನರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

30 ಹಳ್ಳಿಗಳು: ನಾರಾಯಣಪುರ ಬಲದಂಡೆನಾಲೆಯ 5ಎ ಶಾಖೆ ಕಾಲುವೆ ಅನುಷ್ಠಾನಕ್ಕಾಗಿ ಈಗಾಗಲೇ ಸಂತ್ರಸ್ತ ಹಳ್ಳಿಗಳ ರೈತರು ಕಳೆದ 17 ದಿನಗಳಿಂದ ಅನಿರ್ದಿಷ್ಟ ಅವಧಿ ಹೋರಾಟ ಆರಂಭಿಸಿದ್ದಾರೆ. ಮಸ್ಕಿ ತಾಲೂಕಿನ ಪಾಮನಕಲ್ಲೂರು ಹೋಬಳಿ ಕೇಂದ್ರದಆದಿಬಸವೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನ.20ರಿಂದ ಆರಂಭವಾಗಿದೆ. ಹೋರಾಟದ ಬಿಸಿ ಬಿಜೆಪಿ ಸರಕಾರದ ಮಂತ್ರಿಗಳು, ಕಾಂಗ್ರೆಸ್‌ ಪಕ್ಷದ ನಾಯಕರಿಗೂ ತಟ್ಟಿದೆ. ಒಂದು ರೀತಿ ಮಸ್ಕಿ ಉಪಚುನಾವಣೆಗೆ ಇದೇ ಹೋರಾಟವೇಅಸ್ತ್ರವಾಗಿ ಬಳಕೆಯಾಗಿತ್ತು. ಆದರೆ ಈಗ ವಿಧಾನಸಭೆ ಚುನಾವಣೆಗೆ ಮೊದಲು ಗ್ರಾಪಂ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಈ5ಎ ಶಾಖೆ ಕಾಲುವೆಯಿಂದ ನೀರಾವರಿ ಭಾಗ್ಯ ಹೊಂದುವ ಪ್ರಮುಖ ನಾಲ್ಕು ಪಂಚಾಯಿತಿಯ 30 ಹಳ್ಳಿಗಳು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿವೆ.

ಮಸ್ಕಿ ತಾಲೂಕಿನ ಪಾಮನಕಲ್ಲೂರು (8 ಹಳ್ಳಿ), ವಟಗಲ್‌ (5 ಹಳ್ಳಿ), ಅಂಕುಶದೊಡ್ಡಿ (6 ಹಳ್ಳಿ), ಅಮೀನಗಡ (5 ಹಳ್ಳಿ) ಗ್ರಾಪಂ ವ್ಯಾಪ್ತಿಯ 30ಕ್ಕೂ ಹೆಚ್ಚು ಹಳ್ಳಿಗರು ಈಗಾಗಲೇ ಆಯಾ ಗ್ರಾಮಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಚುನಾವಣೆ ಬಹಿಷ್ಕಾರ ನಿರ್ಧಾರದ ಜತೆಗೆ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.

ಹೆಚ್ಚಿನ ಆತಂಕ: ಎನ್‌ಆರ್‌ಬಿಸಿ 5ಎ ಕಾಲುವೆ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ರೈತರ ಧರಣಿಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸುವ ಪ್ರಯತ್ನಮಾಡಿದರು. ಈ ಯೋಜನೆ ಅನುಷ್ಠಾನಕ್ಕೆ ಪೂರಕ ಪ್ರಯತ್ನ ಮಾಡಲಾಗುವುದು. ಧರಣಿ ಕೈ ಬಿಡುವಂತೆ ನಿವೇಧಿ ಸಿಕೊಂಡಿದ್ದರು. ಆದರೆ ಈ ಯೋಜನೆಗಾಗಿ ಪ್ರತ್ಯೇಕ 500 ಕೋಟಿ ರೂ.ಗಳಾದರೂ ಘೋಷಣೆ ಮಾಡುವವರೆಗೆ ಹೋರಾಟ ನಿಲ್ಲದು ಎನ್ನುತ್ತಾರೆ ರೈತರು.

ಹೀಗಾಗಿ ಸದ್ಯ ಹೋರಾಟದ ಬಿಸಿ ಎಂಎಲ್‌ಎ ಚುನಾವಣೆ ಆಕಾಂಕ್ಷಿಗಳಿಗೆ ಮಾತ್ರವಲ್ಲ; ಗ್ರಾಪಂ ಚುನಾವಣೆ ಉಮೇದುವಾರರಿಗೂ ನುಂಗಲಾರದತುತ್ತಾಗಿದೆ. ಸದ್ಯ ಜಿಲ್ಲಾಡಳಿತಕ್ಕೆ ಚುನಾವಣೆಬಹಿಷ್ಕಾರದ ಅಸ್ತ್ರ ಸವಾಲಾಗಿದ್ದು, ಜಿಲ್ಲಾಡಳಿತಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಕಾದು ನೋಡಬೇಕಿದೆ.

ರೊಟ್ಟಿ, ದವಸ-ಧಾನ್ಯ :  ಕಳೆದ 17 ದಿನಗಳಿಂದ ನಡೆದಿರುವ ಹೋರಾಟಕ್ಕೆ ಸ್ವತಃ ಯೋಜನೆ ಬಾಧಿ ತ ಹಳ್ಳಿಗರೇ ಹೋರಾಟ ನಿರತರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಗ್ರಾಮಗಳಿಂದಲೇ ರೊಟ್ಟಿ, ಅಕ್ಕಿ ಸೇರಿ ಇತರೆ ದವಸ ಧಾನ್ಯಗಳನ್ನು ತಂದು ಧರಣಿ ಸ್ಥಳದಲ್ಲಿಯೇ ಅಡುಗೆ ಮಾಡಿ ಬಡಿಸಲಾಗುತ್ತಿದೆ. ಈ ರೀತಿಯ ಹೋರಾಟದ ಕಿಚ್ಚು ದಿನೆ-ದಿನವೂ ಹೆಚ್ಚಾಗುತ್ತಿದ್ದು, ರೈತರ ಸಂಖ್ಯೆಯೂ ಹೆಚ್ಚುತ್ತಲಿದೆ.

ಏನಿದು 5-ಕಾಲುವೆ?:  ನಾರಾಯಣಪುರ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಪೋಲಾಗುವ ನೀರನ್ನು ಬಳಸಿಕೊಂಡು 5-ಎ ಶಾಖಾ ಕಾಲುವೆ ನಿರ್ಮಾಣದ ಮೂಲಕ ರಾಯಚೂರು, ಕೊಪ್ಪಳ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶ. ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಿಂದ 5ಎ ಶಾಖಾ ಕಾಲುವೆಗಳನ್ನು ನಿರ್ಮಿಸಿಗಳ ಮೂಲಕ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 7 ತಾಲೂಕುಗಳ 107 ಹಳ್ಳಿಗಳ 72,000 ಹೆಕ್ಟೇರ್  (1,77,912 ಎಕರೆ) ಜಮೀನುಗಳಿಗೆ ನೀರು ಒದಗಿಸುವ ಯೋಜನೆಯಾಗಿದೆ. ಇದಕ್ಕಾಗಿ 2,755 ಕೋಟಿ ರೂ. ವ್ಯಯವಾಗಲಿದೆ ಎಂದು ಸರಕಾರ ಅಂದಾಜಿಸಿದೆ. ಇದರ ಪ್ರಾಥಮಿಕ ಸರ್ವೇ ಕಾರ್ಯವೂ ಆರಂಭವಾಗಿದೆ. ಆದರೆ ಈ ಯೋಜನೆ ಅನುಷ್ಠಾನದ ಕುರಿತು ಸರಕಾರದಿಂದ ಅಧಿಕೃತ ಲಿಖೀತ ಆದೇಶ ಹೊರ ಬೀಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

 

ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

ಕರಾವಳಿ: “ಆರೆಂಜ್‌ ಅಲರ್ಟ್‌’: ಬಿರುಸಿನ ಮಳೆ ಸಾಧ್ಯತೆ

ಕರಾವಳಿ: “ಆರೆಂಜ್‌ ಅಲರ್ಟ್‌’: ಬಿರುಸಿನ ಮಳೆ ಸಾಧ್ಯತೆ

ದ.ಕ.: 13.83 ಕೋ.ರೂ. ಮೊತ್ತದ ವ್ಯಾಜ್ಯ ಇತ್ಯರ್ಥ

ದ.ಕ.: 13.83 ಕೋ.ರೂ. ಮೊತ್ತದ ವ್ಯಾಜ್ಯ ಇತ್ಯರ್ಥ

ಯಂತ್ರಶ್ರೀ ರಾಜ್ಯಕ್ಕೆ ವಿಸ್ತರಣೆ: 20,000 ಹೆಕ್ಟೇರ್‌ ಕೃಷಿ ಗುರಿ

ಯಂತ್ರಶ್ರೀ ರಾಜ್ಯಕ್ಕೆ ವಿಸ್ತರಣೆ: 20,000 ಹೆಕ್ಟೇರ್‌ ಕೃಷಿ ಗುರಿ

ಬಿಜೆಪಿಯಿಂದ ರಹಸ್ಯ ಕಾರ್ಯಸೂಚಿ: ರಮಾನಾಥ ರೈ

ಬಿಜೆಪಿಯಿಂದ ರಹಸ್ಯ ಕಾರ್ಯಸೂಚಿ: ರಮಾನಾಥ ರೈ

ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಒದಗಿಸಿ: ಮಾಜಿ ಶಾಸಕ ರುಕ್ಮಯ ಪೂಜಾರಿ

ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಒದಗಿಸಿ: ಮಾಜಿ ಶಾಸಕ ರುಕ್ಮಯ ಪೂಜಾರಿ

 ಅಗ್ನಿಪಥ’ಕ್ಕೆ ವಿರೋಧ ಹಿನ್ನೆಲೆ: ದೇಶಹಿತಕ್ಕೆ ಕಾಂಗ್ರೆಸ್‌ ವಿರೋಧ: ನಳಿನ್‌ ಕುಮಾರ್‌ ಕಟೀಲು

 ಅಗ್ನಿಪಥ’ಕ್ಕೆ ವಿರೋಧ ಹಿನ್ನೆಲೆ: ದೇಶಹಿತಕ್ಕೆ ಕಾಂಗ್ರೆಸ್‌ ವಿರೋಧ: ನಳಿನ್‌ ಕುಮಾರ್‌ ಕಟೀಲು

ಬೆಂಗಳೂರಿನಲ್ಲಿ ಅಪಘಾತ : ಸೈಕಲ್‌ ಸವಾರ ಬಂಟ್ವಾಳದ ಯುವಕ ಮೃತ್ಯು

ಬೆಂಗಳೂರಿನಲ್ಲಿ ಅಪಘಾತ : ಸೈಕಲ್‌ ಸವಾರ ಬಂಟ್ವಾಳದ ಯುವಕ ಮೃತ್ಯುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22text-book

ಹಳೆ ಪಠ್ಯ-ಪುಸ್ತ ಕ ಮುಂದುವರಿಸಲು ಒತ್ತಾಯ

19road

60 ಅಡಿ ರಸ್ತೆ ಅಗಲೀಕರಣಕ್ಕೆ ಕರವೇ ಆಗ್ರಹ

18protest

2ನೇ ದಿನಕ್ಕೆ ಕಾಲಿಟ್ಟ ಧರಣಿ

ರಾಯಚೂರು: ಸೈಲೆನ್ಸರ್ ಗಳ ಸದ್ದಡಗಿಸಿದ ಪೊಲೀಸರು

ರಾಯಚೂರು: ಸೈಲೆನ್ಸರ್ ಗಳ ಸದ್ದಡಗಿಸಿದ ಪೊಲೀಸರು

21paddy

ಭತ್ತ ಖರೀದಿ ಹಣ ನೀಡದೆ ವಂಚನೆ: ರೈತರ ದೂರು

MUST WATCH

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

udayavani youtube

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು

udayavani youtube

ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

ಹೊಸ ಸೇರ್ಪಡೆ

ಕರಾವಳಿ: “ಆರೆಂಜ್‌ ಅಲರ್ಟ್‌’: ಬಿರುಸಿನ ಮಳೆ ಸಾಧ್ಯತೆ

ಕರಾವಳಿ: “ಆರೆಂಜ್‌ ಅಲರ್ಟ್‌’: ಬಿರುಸಿನ ಮಳೆ ಸಾಧ್ಯತೆ

ದ.ಕ.: 13.83 ಕೋ.ರೂ. ಮೊತ್ತದ ವ್ಯಾಜ್ಯ ಇತ್ಯರ್ಥ

ದ.ಕ.: 13.83 ಕೋ.ರೂ. ಮೊತ್ತದ ವ್ಯಾಜ್ಯ ಇತ್ಯರ್ಥ

ಯಂತ್ರಶ್ರೀ ರಾಜ್ಯಕ್ಕೆ ವಿಸ್ತರಣೆ: 20,000 ಹೆಕ್ಟೇರ್‌ ಕೃಷಿ ಗುರಿ

ಯಂತ್ರಶ್ರೀ ರಾಜ್ಯಕ್ಕೆ ವಿಸ್ತರಣೆ: 20,000 ಹೆಕ್ಟೇರ್‌ ಕೃಷಿ ಗುರಿ

ಬಿಜೆಪಿಯಿಂದ ರಹಸ್ಯ ಕಾರ್ಯಸೂಚಿ: ರಮಾನಾಥ ರೈ

ಬಿಜೆಪಿಯಿಂದ ರಹಸ್ಯ ಕಾರ್ಯಸೂಚಿ: ರಮಾನಾಥ ರೈ

ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಒದಗಿಸಿ: ಮಾಜಿ ಶಾಸಕ ರುಕ್ಮಯ ಪೂಜಾರಿ

ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಒದಗಿಸಿ: ಮಾಜಿ ಶಾಸಕ ರುಕ್ಮಯ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.