ಗ್ರಾಮೀಣದಲ್ಲಿ ಕೋವಿಡ್ ಸೋಂಕಿತರೇ ಸೂಪರ್‌ ಸ್ಪ್ರೆಡರ್ಸ್!

ಹಳ್ಳಿಗಳಗೆ ಕಂಟಕವಾಗುತ್ತಿರುವ ಸಿಟಿ ಸಂಪರ್ಕ

Team Udayavani, May 15, 2021, 10:10 AM IST

ಗ್ರಾಮೀಣದಲ್ಲಿ ಕೋವಿಡ್ ಸೋಂಕಿತರೇ ಸೂಪರ್‌ ಸ್ಪ್ರೆಡರ್ಸ್!

ಸಿಂಧನೂರು: ನಗರದಲ್ಲಿನ ಸರಕಾರಿ ಹಾಗೂ ಖಾಸಗಿ ಕೋವಿಡ್‌ ಆಸ್ಪತ್ರೆಗಳಿಗೆ ಬಂದು ಹೋಗುವ ರೋಗಿಗಳ ಸಂಬಂಧಿಕರೇ ಗ್ರಾಮೀಣ ಭಾಗದ ಹಳ್ಳಿಗಳ ಪಾಲಿಗೆ ಕೊರೊನಾ ಸೂಪರ್‌ ಸ್ಪ್ರೆಡರ್ಗಳಾಗಿ ಕಾಡುತ್ತಿದ್ದಾರೆ.

ತಾಲೂಕಿನಲ್ಲಿ ಕಠಿಣ ನಿರ್ಬಂಧ ನಿಯಮ ಜಾರಿಯಲ್ಲಿದ್ದರೂ ಬೆಳಗ್ಗೆ 10ಗಂಟೆ ನಂತರವೂ ಜೀವಂತಿಕೆ ಪಡೆದುಕೊಳ್ಳುತ್ತಿದೆ. ಅದಕ್ಕೂ ಮುನ್ನಜನ ಸಂಚಾರ, ಮಾರುಕಟ್ಟೆ ಸೇರಿದಂತೆ ರಸ್ತೆಗಳಲ್ಲಿಜನಜಂಗುಳಿ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಹಳ್ಳಿಯಿಂದ ಚಿಕಿತ್ಸೆ ಹಿನ್ನೆಲೆಯಲ್ಲಿ ನಗರಕ್ಕೆ ಬಂದವರು ಆಹಾರ, ಅಗತ್ಯ ವಸ್ತು ಖರೀದಿಗೆ ನಗರದಲ್ಲಿ ಮುಕ್ತವಾಗಿ ಸುತ್ತಾಡುತ್ತಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ದಾಖಲಾದರೂ ಮುನ್ನೆಚ್ಚರಿಕೆ ಕ್ರಮಗಳು ಮಂಕಾಗಿವೆ. ಬೆಳಗ್ಗೆ 10ಗಂಟೆ ನಂತರವೇ ಪೊಲೀಸರು ಹಾಗೂ ಅಧಿಕಾರಿಗಳು ಬೀದಿಗೆ ಇಳಿಯುತ್ತಿರುವುದರಿಂದ ಕೊರೊನಾ ಹರಡಲು ಕಾರಣವಾಗುತ್ತಿದಿಯಾ? ಎಂಬ ಪ್ರಶ್ನೆ ಉದ್ಬವಿಸಿದೆ.

ಸಮಸ್ಯೆ ಏನು?: ವಾರದ ಹಿಂದೆ ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ 800ರಷ್ಟಿತ್ತು.ಆಗ 500ಕ್ಕೂ ಹೆಚ್ಚು ಪ್ರಕರಣ ಗ್ರಾಮೀಣ ಭಾಗದಲ್ಲೇ ವರದಿಯಾಗಿದ್ದವು. ದಿನಕ್ಕೆನಾಲ್ಕೈದು ನೂರು ಪ್ರಕರಣ ಜಿಲ್ಲೆಯಲ್ಲಿ ಹೊರಬಿದ್ದರೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 150ಕ್ಕೂ ಮೇಲ್ಪಟ್ಟು ಇರುವ ದಿನಗಳೇ ಹೆಚ್ಚು. ಜಿಲ್ಲೆಯಲ್ಲಿ ಸೋಂಕಿತರಅಂಕಿ-ಸಂಖ್ಯೆಗಳನ್ನು ಸರಾಸರಿಗೆ ಹೋಲಿಸಿದಾಗ ಶೇ.10ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರುತಾಲೂಕಿನಲ್ಲಿ ಪತ್ತೆಯಾಗಿದ್ದರು. ಇಂತಹ ಸಂದರ್ಭದಲ್ಲಿ ಸೂಪರ್‌ ಸ್ಪ್ರೆಡರ್ ರೂಪದಲ್ಲಿ ಕೋವಿಡ್ ಹರಡುವಿಕೆ ಇರುತ್ತದೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರಕಾರದ ಮಾರ್ಗಸೂಚಿಯೇ ಹೇಳುತ್ತದೆ. ಆದರೆ, ಮಾರ್ಗಸೂಚಿನಗರದಲ್ಲಿ ಪಾಲನೆ ಯಾಗುತ್ತಿಲ್ಲ ಎಂಬ ದೂರು ಹೆಚ್ಚಿವೆ.

ಹಳ್ಳಿಯಲ್ಲೇ ಸಾವು ನೋವು ಹೆಚ್ಚು: ಆರೋಗ್ಯ ಇಲಾಖೆ ನೀಡಿದ ಮೇ 14ರ ಮಾಹಿತಿ ಪ್ರಕಾರ,ತಾಲೂಕಿನಲ್ಲಿ 1975 ಪ್ರಕರಣಗಳಿದ್ದರೆ, 4 ಪ್ರಕರಣ ಹೊರತುಪಡಿಸಿ ಉಳಿದೆಲ್ಲ ಪಾಸಿಟಿವ್‌ ಕೇಸ್‌ ಹಳ್ಳಿಗೆ ಸಂಬಂಧಿಸಿವೆ. ಕೋವಿಡ್ 2ನೇ ಅಲೆಗೆ ಈವರೆಗೂ 27 ಜನ ಮೃತಪಟ್ಟಿದ್ದಾರೆ. ಸಿಂಧನೂರು ನಗರದಲ್ಲಿ 7 ಜನ ಮತ್ತು 20 ಜನ ಗ್ರಾಮೀಣ ಭಾಗಕ್ಕೆ ಸೇರಿದ್ದಾರೆ. ಖಾಸಗಿ ಆಸ್ಪತ್ರೆ ಹೊರತುಪಡಿಸಿ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಗುರುತಿಸಿದ ಪ್ರಕರಣಮಾತ್ರ ದಾಖಲೆಗೆ ಸಿಗುತ್ತಿವೆ. ಅಲಬನೂರು, ದೀನಸಮುದ್ರ, ಹೊಸಳ್ಳಿ, ಕುರುಕುಂದಾ, 3ನೇ ಮೈಲ್‌ ಕ್ಯಾಂಪ್‌, ಕಾನಿಹಾಳ, ಸಾಲಗುಂದಾ, ಉಮಲೂಟಿ, ಜವಳಗೇರಾ, ಬಳಗಾನೂರು, ಬೆಳ್ಳಿಗನೂರು, ದೇವಿಕಯಾಂಪ್‌, ಗಾಂ ಧಿನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಿಂಧನೂರು ನಗರದಲ್ಲಿ 7,ತಿಡಿಗೋಳದಲ್ಲಿ 2, ರೈತನಗರ ಕ್ಯಾಂಪಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ನಗರದಿಂದ ಹಳ್ಳಿಗೆ ಸೋಂಕು ಲಗ್ಗೆ: ಸಿಂಧನೂರು ನಗರಕ್ಕೆ 150 ಹಳ್ಳಿಯ ಜನ ನಿತ್ಯದ ವ್ಯವಹಾರಕ್ಕೆ ಆಗಮಿಸುವುದರಿಂದ ಅವರನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿನ ಕೊರೊನಾಸೋಂಕಿತರಿಗೆ ಆಸ್ಪತ್ರೆಯ ಮೂಲಕವೇ ಊಟದವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಎರಡು ದಿನದ ಹಿಂದೆ ಆದೇಶ ಹೊರಡಿಸಿದ್ದರೂ ಅದು ಅನುಷ್ಠಾನಗೊಂಡಿಲ್ಲ. ಒಬ್ಬ ವ್ಯಕ್ತಿಯಿಂದ ಕನಿಷ್ಠ 10 ಜನರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸೋಂಕಿತರೇ ತಾಲೂಕಿನಲ್ಲಿ ಸೂಪರ್‌ ಸ್ಪ್ರೆಡರ್‌ಗಳಾಗುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಹೋಂ ಕ್ವಾರಂಟೈನ್‌ ದುಷ್ಪರಿಣಾಮ :

ಕೋವಿಡ್ ಸೋಂಕು ತಗುಲಿದ ಬಳಿಕ ಹೋಂ ಕ್ವಾರಂಟೈನ್‌ಗೆ ಒಳಪಡುವಂತೆ ಹೇಳಿದ ಆಡಳಿತ ಮರಳಿ ಅವರತ್ತ ತಿರುಗಿ ನೋಡಿಲ್ಲ. ದಾಖಲೆಗಳಿಗೆ ಮಾತ್ರವೇ ಆರೋಗ್ಯ ಇಲಾಖೆಯಿಂದ ಕರೆ ಮಾಡಿ, ಪ್ರಾಥಮಿಕ ಸಂಪರ್ಕಿತರು ಇತರೆ ವಿವರ ಗಳನ್ನು ಪಡೆಯಲಾಗುತ್ತಿದೆ. ಅವರು ಯಾವ ಚಿಕಿತ್ಸೆ ಪಡೆದುಕೊಳ್ಳಬೇಕು, ಏನೇನು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸುತ್ತಿಲ್ಲ. ಇದರ ಪರಿ ಣಾಮ ಕೊರೊನಾ ಸೋಂಕಿತರು ಕೂಡ ಗ್ರಾಮೀಣ ಭಾಗದಲ್ಲಿ ಬಹಿರಂಗವಾಗಿ ಸುತ್ತಾಡುತ್ತಿದ್ದಾರೆಂಬ ದೂರು ಹೆಚ್ಚಿವೆ. ಅಲ್ಲಲ್ಲಿ ಕಟ್ಟೆಗೆ ಕುಳಿತು ಹರಟೆ ಹೊಡೆಯುತ್ತಾರೆಂಬ ದೂರು ನೀಡುತ್ತಿದ್ದರೂ ಅಧಿ ಕಾರಿಗಳು ದೇವಿಕ್ಯಾಂಪಿನಿಂದ ಮಾತ್ರ 10 ಜನರನ್ನು ಸರಕಾರಿ ಕ್ವಾರಂಟೈನ್‌ಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ನಿತ್ಯವೂ ಅಗತ್ಯ ವಸ್ತು ಖರೀದಿಸಬೇಕಾದ ಸಂದರ್ಭ ಇರುವುದಿಲ್ಲ. ಆದರೂ,ಬೆಳಗ್ಗೆ 6ರಿಂದ 10ಗಂಟೆಯ ತನಕ ಯಥಾರೀತಿ ಜನಸಂಚಾರ ಇದ್ದು, ಅದನ್ನು 10ಗಂಟೆಯನಂತರ ನಿರ್ಬಂಧಿ ಸಲಾಗುತ್ತದೆ. ಈರೀತಿಯ ಕ್ರಮ ಸರಿಯಲ್ಲ. ಜನರೂ ಕೂಡ ಜಾಗೃತರಾಗಬೇಕು. -ಅವಿನಾಶ್‌ ದೇಶಪಾಂಡೆ, ಸಾಮಾಜಿಕ ಕಾರ್ಯಕರ್ತ, ಸಿಂಧನೂರು

ಸರಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಂಡವರ ಎಲ್ಲ ವಿವರ ಸಂಗ್ರಹಿಸಲಾಗುತ್ತಿದೆ. ಸಿಟಿ ಸ್ಕ್ಯಾನ್‌ಮಾಡಿಸಿಕೊಂಡವರ ವಿವರ ಲಭ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. -ಡಾ| ಜೀವನೇಶ್ವರಯ್ಯ, ಕೋವಿಡ್‌ ನೋಡಲ್‌ ಅಧಿಕಾರಿ, ಸಿಂಧನೂರು

 

-ಯಮನಪ್ಪ ಪವಾರ

ಟಾಪ್ ನ್ಯೂಸ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26road

ರಸ್ತೆ ಕಾಮಗಾರಿ ಪರಿಶೀಲನೆ

25problem1

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

24develop

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

14amrith

ಅಮೃತ ಯೋಜನೆಯಡಿ 19.35 ಕೋಟಿ

13formers

ಖರೀದಿ ಕೇಂದ್ರದ ಒಳಗೆ ಹೋಗದ ರೈತರು!

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಸಮಸ್ಯೆ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಸಮಸ್ಯೆ

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಕರಾವಳಿಯಲ್ಲಿ ಜಾನುವಾರುಗಳಿಗೆ ಬೈಹುಲ್ಲು ಕೊರತೆ

ಕರಾವಳಿಯಲ್ಲಿ ಜಾನುವಾರುಗಳಿಗೆ ಬೈಹುಲ್ಲು ಕೊರತೆ

27kalla

ಕಳ್ಳಿಲಿಂಗಸುಗೂರು-ಮುದಗಲ್‌ ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ

26road

ರಸ್ತೆ ಕಾಮಗಾರಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.