ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ
ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್‌ಗೆ ಅವಾಚ್ಯ ಪದಗಳಿಂದ ನಿಂದನೆ
Team Udayavani, May 17, 2022, 10:39 PM IST
ರಾಯಚೂರು: ಹಿಂದೊಮ್ಮೆ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ವಿವಾದ ಸೃಷ್ಟಿಸಿಕೊಂಡಿದ್ದ ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ ಈಗ ಮತ್ತೊಬ್ಬ ಅಧಿಕಾರಿಯನ್ನು ಅದೇ ಮಾದರಿಯಲ್ಲಿ ನಿಂದಿಸಿರುವ ಹಳೆಯ ಆಡಿಯೋ ವೈರಲ್ ಆಗಿದೆ.
ತಾವು ಹೇಳಿದಂತೆ ನಡೆದುಕೊಂಡಿಲ್ಲ ಎನ್ನುವ ಕಾರಣಕ್ಕೆ ಕರೆ ಮಾಡಿ ಅಧಿಕಾರಿಗೆ ಅವಾಚ್ಯ ಪದದಿಂದ ನಿಂದಿಸಿದ್ದಾರೆ. ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಆಗಿದ್ದ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸಿದ್ದಾರೆ. ಇದು ನಾಲ್ಕು ತಿಂಗಳು ಹಿಂದಿನ ಆಡಿಯೋ ಎನ್ನಲಾಗುತ್ತಿದ್ದು, ಈಗ ಅಧಿಕಾರಿ ಕೂಡ ಆ ಹುದ್ದೆಯಲ್ಲಿಲ್ಲ.
ಆಡಿಯೋದಲ್ಲೇನಿದೆ?: 1400 ಕೋಟಿ ರೂ. ಕಾಮಗಾರಿಗೆ ಸಂಬಂಧಿಸಿದ ಬಿಲ್ ಪಾಸ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿರುವ ಶಿವನಗೌಡ, ನನ್ನ ಗಮನಕ್ಕೆ ತಾರದೆ ಹೇಗೆ ಬಿಲ್ ಪಾಸ್ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಐದು ನಿಮಿಷಗಳ ಅವಧಿ ಇರುವ ಆಡಿಯೋದಲ್ಲಿ, ಅಧಿಕಾರಿ ಮಾತ್ರ ತಾಳ್ಮೆಯಿಂದಲೇ ಪ್ರತ್ಯುತ್ತರ ನೀಡಿದ್ದಾರೆ. ಶಾಸಕ ಬೈಯ್ಯುವಾಗ ಆ ರೀತಿ ಬೈಬೇಡಿ, ಸರಿಯಾಗಿ ಮಾತನಾಡಿ ಎಂದು ಮಾತ್ರ ಪ್ರತಿಕ್ರಿಯಿಸಿದ್ದಾರೆ. ನಾನು ಬಂದು ಕೇವಲ ಒಂದು ತಿಂಗಳಾಗಿದೆ. ನೀವು ಹಿಂದೆ ಸೂಚನೆ ನೀಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಅಧಿಕಾರಿ ಸಮಜಾಯಿಷಿ ನೀಡಿದರೂ ಶಾಸಕರು ಕೇಳುವ ವ್ಯವಧಾನ ತೋರಿಲ್ಲ.
ಹಿಂದೆ ಕೂಡ ಜಿಲ್ಲಾ ಮಟ್ಟದ ಅಧಿಕಾರಿಯನ್ನು ಇದೇ ರೀತಿ ನಿಂದಿಸಿದ ಪರಿಣಾಮ ದೊಡ್ಡ ವಿವಾದವಾಗಿತ್ತು. ಸರ್ಕಾರಿ ನೌಕರರೆಲ್ಲ ಪ್ರತಿರೋಧ ವ್ಯಕ್ತಪಡಿಸಿ ಆಗ ಉಸ್ತುವಾರಿ ಸಚಿವರಾಗಿದ್ದ ವೆಂಕಟರಾವ್ ನಾಡಗೌಡರಿಗೆ ದೂರು ನೀಡಿದ್ದರು. ಅಧಿಕಾರಿ ಇಂಥ ವಾತಾವರಣದಲ್ಲಿ ನನಗೆ ಕೆಲಸ ಮಾಡಲು ಆಗುವುದಿಲ್ಲ ವರ್ಗಾವಣೆ ಮಾಡುವಂತೆ ಕೋರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ
ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್ ಇನ್ನಿಲ್ಲ
ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ