ಭಕ್ತರಿಗಿದೆ ಉಟಕನೂರು ತಾತನ ಶ್ರೀರಕ್ಷೆ


Team Udayavani, Jan 30, 2019, 10:28 AM IST

ray-2.jpg

ಬಳಗಾನೂರು: ನಾಡಿನ ಅನೇಕ ಮಠಮಾನ್ಯಗಳು ಆಧ್ಯಾತ್ಮ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿವೆ. ಅಂತಹ ಮಠಗಳಲ್ಲಿ ಉಟಕನೂರು ಶ್ರೀ ಮರಿಬಸವಲಿಂಗ ಶಿವಯೋಗಿಗಳ ಮಠವೂ ಒಂದಾಗಿದೆ. ಉಟಕನೂರು ತಾತನ ಆಶೀರ್ವಾದ, ಶ್ರೀರಕ್ಷೆ ಸದಾ ಭಕ್ತರಿಗೆ ಇದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಸಮೀಪದ ಉಟಕನೂರು ಗ್ರಾಮದಲ್ಲಿ ಶ್ರೀ ಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ, 28ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಆಧ್ಯಾತ್ಮ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಟಕನೂರು ತಾತಪ್ಪ ಎಂದೇ ಖ್ಯಾತರಾದ ಶ್ರೀ ಮರಿಬಸವಲಿಂಗ ಶಿವಯೋಗಿಗಳ ಪಾದ ಸ್ಪರ್ಶದಿಂದ ಈ ಗ್ರಾಮ ಪುಣ್ಯಕ್ಷೇತ್ರವಾಗಿದೆ. ತಾತಪ್ಪನವರ ನುಡಿಗಳು ಭಕ್ತರಲ್ಲಿ ಆತ್ಮಸ್ಥೈರ್ಯ ತುಂಬಿ ಬಾಳು ಬೆಳಗಿದೆ. ತಾತನವರ ಕೃಪಾಶೀರ್ವಾದಿಂದ ತಾವು ಮೂರು ಬಾರಿ ಶಾಸಕರಾಗಿದ್ದಾಗಿ ಹೇಳಿದರು.

ಉಪನ್ಯಾಸ ನೀಡಿದ ಮಲ್ಲಣ್ಣ ನಾಗರಾಳ, ಪ್ರತಿಯೊಬ್ಬರಿಗೂ ತುತ್ತು ಅನ್ನ ನೀಡುವ ಒಕ್ಕಲುತನ ಎಲ್ಲ ಉದ್ಯೋಗಗಳ ಮೂಲವಾಗಿದೆ. ಮಣ್ಣು ನಂಬಿ ಬದುಕಿದವರಿಗೆ ಯಾವತ್ತಿಗೂ ಬಡತನ ಬರುವುದಿಲ್ಲ. ಮಣ್ಣಿನ ಸಂರಕ್ಷಣೆ, ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಹಿರಿಯ ಕೃಷಿಕರ ಮಾರ್ಗದರ್ಶನದಲ್ಲಿ ಯುವಜನತೆ ಕೃಷಿಯಲ್ಲಿ ಮುಂದುವರಿಯಬೇಕು. ಕೃಷಿಕರಾದ ನಾವೇ ದೇಶದ ಸಂಪತ್ತು ಎನ್ನುವುದನ್ನು ಮರೆಯಬಾರದು ಎಂದರು.

ಯೋಧರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಸಂಗನಗೌಡ ಸಿಂಧನೂರು, ಬಿಎಸ್‌ಎಫ್‌ ಯೋಧ ನೀರಮಾನ್ವಿ ಜೆ. ಹನುಮಂತಪ್ಪ, ಸಿಆರ್‌ಎಫ್‌ಇ ಉಟಕನೂರಿನ ಗುಡದಯ್ಯ ಪ್ರಜಾರಿ, ಮಾಜಿ ಸೈನಿಕ ಶೇಖರಪ್ಪ ತಡಕಲ್‌. ಬಿಎಸ್‌ಎಫ್‌ ಯೋಧ ರಮೇಶ ಮುಷ್ಟೂರು, ಸಿಆರ್‌ಎಫ್‌ಇ ಹನುಮಂತಪ್ಪ ನಸಲಾಪುರ, ತಿಪ್ಪಣ್ಣ ಹರವಿ ಅವರನ್ನು ಗೌರವಿಸಲಾಯಿತು.

ರೈತರಿಗೆ ಸನ್ಮಾನ: ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಾದ ಸಿರಗುಪ್ಪ ಪಂಪನಗೌಡ ಜಗಿನಾಳ, ರೈತ ಹೋರಾಟಗಾರ ಬಸವರಾಜಪ್ಪಗೌಡ ಹರ್ವಾಪುರ ಅವರನ್ನು ಸನ್ಮಾನಿಸಲಾಯಿತು.

ವೈದ್ಯರಿಗೆ ಸನ್ಮಾನ: ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ಶಂಕರಗೌಡ ಸಿಂಧನೂರು, ಡಾ| ಬಿ. ಬಸವರಾಜಪ್ಪ ಉಟಕನೂರು, ಡಾ| ಅಮರೇಶ ನಾಗಲೀಕರ ಬಳಗಾನೂರು, ಡಾ| ಬಸವಲಿಂಗಪ್ಪ ದಿವಟರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ನಿವೃತ್ತ ಮುಖ್ಯಗುರು ಬಳಗಾನೂರಿನ ವೀರಣ್ಣ ಹಂಪಗುಂದಿ ಅವರನ್ನು ಸನ್ಮಾನಿಸಲಾಯಿತು. ಸಂತೆಕಲ್ಲೂರಿನ ಶ್ರೀ ಮಹಾಂತಲಿಂಗ ಸ್ವಾಮೀಜಿ, ಕರೆಗುಡ್ಡದ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ನೇತೃತ್ವ ವಹಿಸಿದ್ದ ಶ್ರೀ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅವರು ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಶ್ರೀಮಠಕ್ಕೆ ಸೇವೆಗೈದ ಭಕ್ತರು, ದಾನಿಗಳು, ಕಲಾವಿದರಿಗೆ ಆಶೀರ್ವದಿಸಿದರು.

ಗೌಡನಬಾವಿ ಶ್ರೀಮಠದ ನಾಗಪ್ಪ ತಾತನವರು, ಮುಖಂಡರಾದ ಶೇಖರಪ್ಪ ಮೇಟಿ, ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಸೇರಿದಂತೆ ಮುಖಂಡರು, ಸುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.