ಪೊಲೀಸ್‌ ಪಹರೆಯಲ್ಲಿ ಹಳ್ಳಿ ಸುತ್ತಿದ ಮಾಜಿ ಶಾಸಕ!

ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿನ ಜನರ ಮನವೊಲಿಸುವ ಪ್ರಯತ್ನ ಮಾಡಿದರು.

Team Udayavani, Jan 28, 2021, 4:31 PM IST

ಪೊಲೀಸ್‌ ಪಹರೆಯಲ್ಲಿ ಹಳ್ಳಿ ಸುತ್ತಿದ ಮಾಜಿ ಶಾಸಕ!

ಮಸ್ಕಿ: ಎನ್‌ಆರ್‌ಬಿಸಿ 5ಎ ಕಾಲುವೆ ಹೋರಾಟದ ಕಿಚ್ಚು ಹೊತ್ತಿದ ಹಳ್ಳಿಗಳಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಈಗಿನಿಂದಲೇ ಮತಕೊಯ್ಲು ನಡೆಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಪೊಲೀಸ್‌ ಪಹರೆಯಲ್ಲೇ ಈ ಹಳ್ಳಿಗಳ ಸಂಚಾರ ಬುಧವಾರ ಆರಂಭಿಸಿದ್ದಾರೆ!.

ನಾರಾಯಣಪುರ ಬಲದಂಡೆ 5ಎ ಶಾಖೆ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ತಾಲೂಕಿನಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಅನಿ ರ್ಧಿಷ್ಠ ಧರಣಿ 70 ದಿನಕ್ಕೆ ಕಾಲಿಟ್ಟಿದೆ. ಕೇವಲ ಪಾಮನಕಲ್ಲೂರು, ಅಮಿನಗಡ, ವಟಗಲ್‌, ಅಂಕುಶದೊಡ್ಡಿ ಪಂಚಾಯಿತಿಗಳಿಗೆ ಮಾತ್ರ ಸೀಮಿತವಾಗಿದ್ದ ರೈತರ ಹೋರಾಟ ವ್ಯಾಪ್ತಿ ಈಗ ಮತ್ತಷ್ಟು ವಿಸ್ತಾರವಾಗಿದೆ. ತಲೆಖಾನ್‌, ಮೆದಕಿನಾಳ, ಬಪೂ³ರ, ಗುಂಡಾ ಸೇರಿ ಹಲವು ಕಡೆಗಳಿಂದ ರೈತರ ಆಗಮನ ಶುರುವಾಗಿದೆ. ಹೀಗಾಗಿ ಆಶ್ಚರ್ಯಗೊಂಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಈ ಹೋರಾಟದ ಕಾವು ಇರುವ ಹಳ್ಳಿಗಳಿಗೆ ನುಗ್ಗಿದ್ದಾರೆ. ತಮ್ಮ ಬೆಂಬಲಿಗ ಪಡೆ, ರೈತರ ನಡುವಿನ ಮತ್ತೂಂದು ಪರ್ಯಾಯ ಗುಂಪಿನ ಮೂಲಕ ಈ ಹಳ್ಳಿಗಳಲ್ಲಿ ಪರೇಡ್‌ ನಡೆಸಿದ್ದಾರೆ.

ಹಲವು ಕಡೆ ಸಂಚಾರ: ಜ.27ರಿಂದ ಕ್ಷೇತ್ರ ಪರ್ಯಟನೆ ನಡೆಸಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ನಂದವಾಡಗಿ ಏತ ನೀರಾವರಿ ಹೋರಾಟ
ಆರಂಭವಾದ ವಟಗಲ್‌ ಗ್ರಾಮದಿಂದಲೇ ಸಂಚಾರ ಶುರು ಮಾಡಿದರು. ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿನ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಕೆಲವು ಕಡೆ ಅವರ ಭಾಷಣಕ್ಕೆ ಅಪಸ್ವರಗಳು ಕೇಳಿ ಬಂದವು. ವಟಗಲ್‌, ಹಿಲಾಲಪುರ, ಹರ್ವಾಪುರ ಗ್ರಾಮಗಳಲ್ಲಿ ಸುತ್ತಿದ ಮಾಜಿ ಶಾಸಕ ನಾನು 5ಎ ಕಾಲುವೆ ಹೋರಾಟದ ವಿರುದ್ಧವಿಲ್ಲ. ಇದು ಜಾರಿಯಾಗದು, ನೀರಿನ ಹಂಚಿಕೆ ಇಲ್ಲ. ನಂದವಾಡಗಿ ಏತ ನೀರಾವರಿ ಮೂಲಕವೇ ನೀರು ಕೊಡುವೆ, ಮತ್ತೂಮ್ಮೆ ಚುನಾಯಿತನಾಗಲು ನೆರವಾಗಿ ಎಂದು ಮನವಿ ಮಾಡಿಕೊಂಡರು.

ಪೊಲೀಸ್‌ ಭದ್ರತೆ: ಮಸ್ಕಿ ಉಪಚುನಾವಣೆ ಇನ್ನು ಘೋಷಣೆಯೇ ಆಗಿಲ್ಲ. ಆದರೆ 5ಎ ಕಾಲುವೆ ಇಶ್ಯೂ ಸೇರಿ ಇತರೆ ವಿರೋಧಗಳ ನಿವಾರಣೆಗೆ ಈಗಿನಿಂದಲೇ ತಮ್ಮ ಬೆಂಬಲಿಗರ ಪಡೆಯೊಂದಿಗೆ ಹಳ್ಳಿ ಸಂಚಾರ ಆರಂಭಿಸಿ ಅಲ್ಲಿನ ರೈತರು, ಜನರ ಮನವೊಲಿಸುವ ಕಸರತ್ತು ನಡೆಸಿದರು. ಆದರೆ ಕೆಲವು ಕಡೆಗಳಲ್ಲಿ ವಾಗ್ವಾದ, ವಿಕೋಪದ ಸನ್ನಿವೇಶ ಕಾರಣಕ್ಕೆ ಖಾಕಿ ಪಡೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ರಿಕೆ ಎಸ್ಕಾರ್ಟ್‌ ಮಾಡುತ್ತಿದೆ. ಮಾನ್ವಿ ಸಿಪಿಐ ದತ್ತಾತ್ರೇಯ, ಕವಿತಾಳ ಠಾಣೆಯ ಪಿಎಸ್‌ಐ  ವೆಂಕಟೇಶ ಮಾಡಗಿರಿ ಸೇರಿ ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತೆರಳುವ ಹಳ್ಳಿಗಳಿಗೆಲ್ಲ ಹಾಜರಿಯಾದರು. ಕೆಲವು ಕಡೆಗಳಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಇನ್ನು ಹಳ್ಳಿ ತಲುಪುವ ಮುನ್ನವೇ ಪೊಲೀಸರು ಮುಂಚಿತವಾಗಿಯೇ ತೆರಳಿ ಅಲ್ಲಿನ ಪರಿಸ್ಥಿತಿ ಅರಿಯುತ್ತಿದ್ದರು. ಈ ಸಂಗತಿ ಹಲವು ರೀತಿ ಚರ್ಚೆಗೆ ಗ್ರಾಸವಾಯಿತು.

ಇನ್ನು ಮಿನಿಸ್ಟರ್‌ ಆಗಿಲ್ಲ; ಈಗಿನಿಂದಲೇ ಮಾಜಿ ಶಾಸಕರಿಗೆ ಪೊಲೀಸ್‌ ಎಸ್ಕಾರ್ಟ್‌ ವಾಹನ ನೀಡಲಾಗಿದೆಯೇ? ರೈತರು ಕೇಳಿದ ಬೇಡಿಕೆ ಈಡೇರಿಸದ ವಿರುದ್ಧ ಪ್ರಶ್ನೆ ಕೇಳುವವರನ್ನು ಹತ್ತಿಕ್ಕಲು ಖಾಕಿ ಪಡೆಯನ್ನು ಮುಂದೆ ಬಿಡಲಾಗಿದೆಯೇ? ಎನ್ನುವ ಹಲವು ರೀತಿ ಟೀಕೆಗಳು ವ್ಯಕ್ತವಾದವು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಹೆಸರು ಹೇಳಲು ಇಚ್ಛಿಸದ ಪೊಲೀಸರೊಬ್ಬರು ಇದೆಲ್ಲ ನಮ್ಮ ಮೇಲಿನ ಸಾಹೇಬರ ಆದೇಶ. ಹೀಗಾಗಿ ನಾವು ಅವರ ಜತೆ ಓಡಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

*ಮಲ್ಲುಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

Untitled-1 copy

2022ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ

ನಿಷ್ಕ್ರಿಯ ಪಾಲಿಸಿ ಸಕ್ರಿಯಗೊಳಿಸಲು ಎಲ್‌ಐಸಿ ಅಭಿಯಾನ

ನಿಷ್ಕ್ರಿಯ ಪಾಲಿಸಿ ಸಕ್ರಿಯಗೊಳಿಸಲು ಎಲ್‌ಐಸಿ ಅಭಿಯಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-protest

ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

14-goals

ವಿದ್ಯಾರ್ಥಿಗಳಿಗೆ ಉನ್ನತ ಗುರಿ ಅಗತ್ಯ

13protest

ಸಚಿವರ ಮನವಿ; ಜಂಗಮರ ಧರಣಿ ವಾಪಸ್‌

12BJP

ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ನಿಶ್ಚಿತ

11visit

ಸರಕಾರಿ ಆಸ್ಪತ್ರೆಗೆ ಶಾಸಕ ಶಿವನಗೌಡ ನಾಯಕ ಭೇಟಿ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

ಸಿಇಯುಟಿ: ಎರಡನೇ ದಿನವೂ ಮುಂದುವರಿದ ಸಮಸ್ಯೆ

ಸಿಇಯುಟಿ: ಎರಡನೇ ದಿನವೂ ಮುಂದುವರಿದ ಸಮಸ್ಯೆ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.