Udayavni Special

ಅನಧಿಕೃತ ಗೈರಾದ ಶಿಕ್ಷಕರಿಗೆ ಅಂತಿಮ ನೋಟಿಸ್‌

ತಾಂಡಾ ಶಾಲೆಗಳ ಶಿಕ್ಷಕರು ಸೇರಿದಂತೆ ಶಾಲೆಗೆ ಗೈರಾಗುತ್ತಿರುವ ಬಹುತೇಕ ಶಿಕ್ಷಕರಿಗೆ ಆತಂಕ ತಂದಿದೆ.

Team Udayavani, Aug 12, 2021, 6:33 PM IST

School

ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ಅನಧಿಕೃತ ಗೈರಾದ ಐದು ಜನ ಶಿಕ್ಷಕರಿಗೆ ಮೂರು ಭಾರಿ ನೋಟಿಸ್‌ ಜಾರಿಗೊಳಿಸಿದರೂ ಅವರಿಂದ ಸ್ಪಷ್ಟ ಉತ್ತರ ಬಾರದ ಹಿನ್ನೆಲೆ ಶಿಕ್ಷಣ ಇಲಾಖೆ ಅಂತಿಮ ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ಅಂತಿಮ ನೋಟಿಸ್‌ ಜಾರಿ ಮಾಡಿ ಎರಡು ವಾರ ಗತಿಸಿದರೂ ಉತ್ತರ ಬಾರದ ಕಾರಣ ಸೇವೆಯಿಂದ ವಜಾಗೊಳಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನ ಧಿಕೃತ ಗೈರಾದ ಶಿಕ್ಷಕರಿಗೆ ಕೊನೆಯದಾಗಿ ಅವಕಾಶ ನೀಡಲು ಪತ್ರಿಕೆ ಮೂಲಕ ಪ್ರಕಟಣೆ ಮಾಡಲಾಗುತ್ತದೆ.

ಅನಧಿಕೃತ ಗೈರಾಗಲು ಕಾರಣ ಹೇಳಿ ಸೇವೆಯಲ್ಲಿ ಮುಂದುವರಿಯಲು ಕೊನೆ ಅವಕಾಶವಿದೆ ಎನ್ನಲಾಗುತ್ತಿದೆ. ಮೂರು ನೋಟಿಸ್‌ಗೂ ಕ್ಯಾರೇ ಎನ್ನುತ್ತಿರುವ ಶಿಕ್ಷಕರು ಕೊನೆ ಅವಕಾಶಕ್ಕೆ ಬರುವುದೇ ಡೌಟ್‌.

ಯಾವ ಶಾಲಾ ಶಿಕ್ಷಕರು?: ಪಟ್ಟಣದ ಯಲ್ಲಾಲಿಂಗ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ತಬುಸಮ್‌ 2015ರಲ್ಲೇ ಅನಧಿಕೃತವಾಗಿ ಗೈರಾಗಿದ್ದಾರೆ. 2011-12ನೇ ಸಾಲಿನಲ್ಲಿ ಬಿಎಡ್‌ ಪದವಿ ಮಾಡಲು ಹೋಗಿದ್ದರು. 2014ರಲ್ಲಿ ವೇತನ ರಹಿತ ರಜೆ ಹೋಗಿದ್ದು, 2015ರಿಂದ ಅನಧಿಕೃತವಾಗಿ ಗೈರಾಗಿದ್ದಾರೆ. 2008ರಲ್ಲಿ ಸೇವೆ ಸೇರಿದ್ದು, ಒಂದೂವರೆ ವರ್ಷ ಮಕ್ಕಳಿಗೆ ಪಾಠ ಮಾಡಿದ್ದು ಈಗ ನೆನಪು ಮಾತ್ರ. ಪಲಕನಮರಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿಜಿಟಿ ಶಿಕ್ಷಕ ಶಿವುಕುಮಾರ ಟಿ.ಎಸ್‌. 2015ರಿಂದ ಗೈರಾಗಿದ್ದಾರೆ. ಗಾಣಧಾಳ ಸರಕಾರಿ ಶಾಲೆಯ ಶಿಕ್ಷಕ ಸಿದ್ದಲಿಂಗ 2011ರಿಂದ ಅನಧಿಕೃತ ಗೈರು.

ಆರೇರದೊಡ್ಡಿ ಶಾಲಾ ಶಿಕ್ಷಕ ಮೋತಿರಾಮ ರಾಠೊಡ್‌ 2019ರಿಂದ ಗೈರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಐಇಆರ್‌ಟಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಸರಿತಾ 2017ರಿಂದ ಅನಧಿಕೃತ ಗೈರಾಗಿದ್ದಾರೆ.

ಶಿಕ್ಷಕಿ ಅಮಾನತು: ತಾಲೂಕಿನ ಹದ್ದಿನಾಳ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಮಾ ಹೊಸಳ್ಳಿ ಕಳೆದ ಒಂದು ವರ್ಷಗಳಿಂದ ಅನ ಧಿಕೃತವಾಗಿ ಗೈರಾಗಿದ್ದು, ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿದರು. ವೈದ್ಯಕೀಯ ನೆಪ ಹೇಳಿ ಕರ್ತವ್ಯಕ್ಕೆ ಹಾಜಿರಾಗದೇ ಇದ್ದ ಕಾರಣ ಜು.30ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಇಂದಿರಾ ಅವರು ಅಮಾನತು ಮಾಡಿ ಆದೇಶಿಸಿದರು.

ಗೈರಾಗುವ ಶಿಕ್ಷಕರಿಗೆ ಭಯ: ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಹಿನ್ನೆಲೆ ಸರಕಾರಿ ಶಾಲೆಗಳ ತರಗತಿಗಳು ಆರಂಭವಾಗಿಲ್ಲ. ಶಾಲಾ ಶಿಕ್ಷಕರಿಗೆ ಬಾಗಿಲು ಓಪನ್‌ ಆಗಿವೆ. ಕೋವಿಡ್‌, ಮಕ್ಕಳು ಇಲ್ಲ ನೆಪ ಹೇಳಿಕೊಂಡು ಆಗಾಗ ಶಾಲೆಗೆ ಗೈರಾಗುತ್ತಿರುವ ಶಿಕ್ಷಕರಿಗೆ ನೋಟಿಸ್‌ ಭಯ ಶುರುವಾಗಿದೆ. ಗ್ರಾಮೀಣ ಭಾಗದ ದೊಡ್ಡಿ, ತಾಂಡಾ ಶಾಲೆಗಳ ಶಿಕ್ಷಕರು ಸೇರಿದಂತೆ ಶಾಲೆಗೆ ಗೈರಾಗುತ್ತಿರುವ ಬಹುತೇಕ ಶಿಕ್ಷಕರಿಗೆ ಆತಂಕ ತಂದಿದೆ.

ಬಿಇಒಗೆ ಅಧಿಕಾರ: 2002ರಲ್ಲಿ ಸರಕಾರಿ ಶಾಲೆಗೆ ಸೇವೆಗೆ ಸೇರಿದ ಶಿಕ್ಷಕ-ಶಿಕ್ಷಕಿಯರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಈ ಹಿಂದೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಅಧಿಕಾರ ಇತ್ತು. ಆದರೀಗ ಕ್ಷೇತ್ರ ಶಿಕ್ಷಣಾ ಧಿಕಾರಿಗೆ ಹೆಚ್ಚಿನ ಅಧಿಕಾರ ಇದ್ದ ಹಿನ್ನೆಲೆ ಅಂತಿಮ ಕ್ರಮಕೈಗೊಳ್ಳಲಿದ್ದಾರೆ.

*ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖೋ ಖೋ ಉಸಿರಾಗಿಸಿಕೊಂಡ ಯರಮರಸ್‌

ಖೋ ಖೋ ಉಸಿರಾಗಿಸಿಕೊಂಡ ಯರಮರಸ್‌

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಿರಿ: ಕೋಡಿಹಳ್ಳಿ

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಿರಿ: ಕೋಡಿಹಳ್ಳಿ

ಸಿಂಧನೂರು ಜಿಲ್ಲೆ ಹೋರಾಟಕ್ಕೆ ಗಟ್ಟಿ ಧ್ವನಿ

ಸಿಂಧನೂರು ಜಿಲ್ಲೆ ಹೋರಾಟಕ್ಕೆ ಗಟ್ಟಿ ಧ್ವನಿ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.